ಜಾತಿಗಣತಿ: ಹಿಂದು ಸಂಖ್ಯೆ ಇಳಿಕೆ, ಮುಸ್ಲಿಂ ಗಣನೀಯ ಏರಿಕೆ
ನವದೆಹಲಿ, ಆಗಸ್ಟ್.25: 2011ರ ಗಣತಿ ಅಂತ್ಯಕ್ಕೆ ದೇಶದಲ್ಲಿ ಶೇ. 0.7 ರಷ್ಟು ಹಿಂದು ಜನಸಂಖ್ಯೆ ಕಡಿಮೆಯಾಗಿದ್ದು, ಮುಸ್ಲಿಮರ ಸಂಖ್ಯೆಯಲ್ಲಿ ಶೇ.0.8 ಹೆಚ್ಚಳವಾಗಿದೆ ಎಂದು ಕೇಂದ್ರ ಗಣತಿ ಕಮಿಷನರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ ಹೇಳುವಂತೆ ಸಿಖ್ಖರ ಜನಸಂಖ್ಯೆಯಲ್ಲಿ ಶೇ, 0.2 ಕಡಿಮೆಯಾದರೆ, ಬೌದ್ಧರ ಜನಸಂಖ್ಯೆಯಲ್ಲಿ ಶೇ. 0.1 ಇಳಿಕೆಯಾಗಿದೆ. ಆದರೆ ಕ್ರಿಶ್ಚಿಯನ್ ಮತ್ತು ಜೈನರ ಜನಸಂಖ್ಯೆಯಲ್ಲಿ ಯಾವ ವಿಶೇಷ ಬದಲಾವಣೆಯಾಗಿಲ್ಲ.

2001 ರಿಂದ2011 ರ ಅವಧಿಯಲ್ಲಿ ಶೇ. 17.7ರಷ್ಟು ದೇಶದ ಜನಸಂಖ್ಯೆ ಬೆಳವಣಿಗೆ ಕಂಡಿದೆ. ಹಿಂದು ಸಮುದಾಯ ಶೇ. 16.8, ಮುಸ್ಲಿಮರು ಶೇ. 24.6, ಕ್ರಿಶ್ಚಿಯನ್ನರು ಶೇ.. 15.5, ಸಿಖ್ಖರು ಶೇ. 8.4, ಬೌದ್ಧರು ಶೇ. 6.1 ಮತ್ತು ಜೈನರು ಶೇ. 5.4 ರಷ್ಟು ಹೆಚ್ಚಾಗಿವೆ.
2011ಕ್ಕೆ ಅಂತ್ಯಗೊಂಡಂತೆ ಸಮುದಾಯವಾರು ಜನಸಂಖ್ಯೆ ಲೆಕ್ಕ
* ಹಿಂದು-96.63 ಕೋಟಿ(ಶೇ. 79.8)
* ಮುಸ್ಲಿಂ-17.22 ಕೋಟಿ(ಶೇ.14.2)
* ಕ್ರಿಶ್ಚಿಯನ್-2.78 ಕೋಟಿ(ಶೇ.2.3)
* ಸಿಖ್-2.08 ಕೋಟಿ(ಶೇ. 1.7)
* ಬೌದ್ಧ- 84ಲಕ್ಷ
* ಜೈನರು-45 ಲಕ್ಷ
* ಉಳಿದರ ಸಮುದಾಯ-79 ಲಕ್ಷ
* ಎಣಿಕೆಗೆ ಸಿಗದವರು-29 ಲಕ್ಷ












Click it and Unblock the Notifications