ಸಬರಮತಿ ರೈಲು ಸ್ಫೋಟದ ಆರೋಪಿ ಬಿಡುಗಡೆ

2000ರಲ್ಲಿ ನಡೆದಿದ್ದ ಈ ಸ್ಫೋಟದ ತನಿಖೆ ನಡೆಸಿದ್ದ ದೆಹಲಿ ಪೊಲೀಸರು 2011ರಲ್ಲಿ ವಾನಿಯನ್ನು ಶ್ರೀನಗರದ ಮನೆಯೊಂದರಿಂದ ಕೆಲವಾರು ಸ್ಫೋಟಗಳ ಸಹಿತ ಬಂಧಿಸಿದ್ದರು.

ಅಲಹಾಬಾದ್, ಮೇ 20: ಸಾಬರಮತಿ ಎಕ್ಸೆಪ್ರೆಸ್ ರೈಲು ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಗುಲ್ಜಾರ್ ಅಹ್ಮದ್ ವಾನಿ ಅವರನ್ನು ಇಲ್ಲಿನ ಬಾರಾಬಂಕಿ ನ್ಯಾಯಾಲಯ ಖುಲಾಸೆಗೊಳಿಸಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅವರನ್ನು ಖುಲಾಸೆಗೊಳಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

2000ರಲ್ಲಿ ನಡೆದಿದ್ದ ಈ ಸ್ಫೋಟದ ಕುತಂತ್ರವನ್ನು ಗುಲ್ಜಾರ್ ಅಹ್ಮದ್ ವಾನಿಯೇ ರೂಪಿಸಿದ್ದ ಎಂಬ ಆರೋಪ ಅವರ ಮೇಲಿತ್ತು.
ಪ್ರಕರಣದ ತನಿಖೆ ನಡೆಸಿದ್ದ ದೆಹಲಿ ಪೊಲೀಸರು 2011ರಲ್ಲಿ ವಾನಿಯನ್ನು ಶ್ರೀನಗರದ ಮನೆಯೊಂದರಿಂದ ಕೆಲವಾರು ಸ್ಫೋಟಗಳ ಸಹಿತ ಬಂಧಿಸಿದ್ದರು.

2000 Sabarmati Express blast: Court acquits ex-AMU scholar Gulzar Ahmed Wani

ವಿಚಾರಣಾಧೀನ ಕೈದಿಯಾಗಿ ಲಕ್ನೋ ಜೈಲಿನಲ್ಲಿ ಬಂಧಿತನಾಗಿರುವ ವಾನಿ ಪರವಾಗಿ ಈಗ ನ್ಯಾಯಾಲಯದ ತೀರ್ಪು ಹೊರಬಿದ್ದಿದೆ.

2000ರ ಸ್ವಾತಂತ್ರ್ಯ ದಿನಾಚರಣೆ ದಿನದಂದು ಸಂಜೆ ಮುಜಫ್ಫರ್ ಪುರದಿಂದ ಅಹ್ಮದಾಬಾದ್ ಗೆ ತೆರಳುತ್ತಿದ್ದ ಸಾಬರಮತಿ ಎಕ್ಸೆಪ್ರೆಸ್ ರೈಲಿನಲ್ಲಿ ಸ್ಫೋಟ ಉಂಟಾಗಿತ್ತು. ಈ ಘಟನೆಯಲ್ಲಿ 9 ಜನರು ಪ್ರಾಣ ತೆತ್ತಿದ್ದರು.

{promotion-urls}

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+