ಬಾಬಾ ರಾಮ್ ರಹೀಂ ಆಶ್ರಮದಲ್ಲಿ 200 ಅಸ್ಥಿ ಪಂಜರಗಳು ಪತ್ತೆ
ಬಾಬಾ ರಾಮ್ ರಹೀಂ ಆಶ್ರಮದಲ್ಲಿ 200 ಅಸ್ಥಿಪಂಜರ ಪತ್ತೆ. ಬಾಬಾ ರಹಸ್ಯ ಕೋಣೆಯ ಬಳಿಯಲ್ಲೇ ಈ ಅಸ್ಥಿಪಂಜರಗಳ ಪತ್ತೆ.
ಸಿರ್ಸಾ, ಸೆಪ್ಟೆಂಬರ್ 21: ಜೈಲು ಪಾಲಾಗಿರುವ ಡೇರಾ ಸಚ್ಚಾ ಸೌದಾದ ಸ್ವಯಂ ಘೋಷಿತ ದೇವಮಾನವ ಬಾಬಾ ರಾಮ್ ರಹೀಂ ಸಿಂಗ್ ನ ಆಶ್ರಮದಲ್ಲಿ 200 ಅಸ್ತಿ ಪಂಜರಗಳು ಪತ್ತೆಯಾಗಿದ್ದು ಎಲ್ಲರನ್ನೂ ದಿಗ್ಭ್ರಾಂತರನ್ನಾಗಿಸಿದೆ.
ಬಾಬಾನ ರಹಸ್ಯ ಕೋಣೆಯ ಅಂಗಳವನ್ನು ಅಗೆದಾಗ ಈ ಅಸ್ಥಿಪಂಜರಗಳು ಸಿಕ್ಕಿವೆ ಎಂದು ಹೇಳಲಾಗಿದೆ. ಈ ಅಸ್ಥಿ ಪಂಜರಗಳು ಬಾಬಾನ ಅತ್ಯಾಚಾರ ಕರ್ಮಕಾಂಡಕ್ಕೆ ಬಲಿಯಾದ ಆಶ್ರಮದ ಸಾಧ್ವಿಗಳದ್ದಿರಬಹುದು ಅಥವಾ ಬಾಬಾನ ಎದುರು ನಿಂತವರನ್ನು ಇಲ್ಲಿಗೆ ಕರೆತಂದು ಕೊಂದು ಹೂತುಹಾಕಿರಬಹುದು ಎಂದು ಶಂಕಿಸಲಾಗಿದೆ.
ಇದು, ಆಶ್ರಮದಲ್ಲಿ ನರಮೇಧ ನಡೆದಿರುವ ವದಂತಿಗಳಿಗೆ ಇಂಬುಕೊಟ್ಟಿದ್ದು, ಇದರ ಸೂಕ್ತ ತನಿಖೆಯ ನಂತರವೇ ಇವುಗಳ ರಹಸ್ಯ ಬಹಿರಂಗವಾಗಲಿದೆ ಎಂದು ಹೇಳಲಾಗಿದೆ.
ಏತನ್ಮಧ್ಯೆ, ಬಾಬಾ ರಾಮ್ ರಹೀಂ ಆಪ್ತೆಯಾದ ಹನಿಪ್ರೀತ್ ಸಿಂಗ್ , ನೇಪಾಳದಲ್ಲಿ ಅಡಗಿರುವ ಖಚಿತ ಸುಳಿವು ಸಿಕ್ಕಿರುವ ಹಿನ್ನೆಲೆಯಲ್ಲಿ ಪೊಲೀಸರು ಆಕೆಗಾಗಿ ತೀವ್ರ ಶೋಧ ಆರಂಭಿಸಿದ್ದಾರೆ.












Click it and Unblock the Notifications