Vande Bharat Express: ಬರಲಿವೆ 20 ಬೋಗಿಗಳ ಭಾರೀ ಸಾಮರ್ಥ್ಯದ ಹೊಸ ರೈಲುಗಳು, ರೈಲ್ವೆ ಇಲಾಖೆ ಪ್ಲಾನ್ ಏನು?
ಬೆಂಗಳೂರು, ಫೆಬ್ರವರಿ 03: ಭಾರತೀಯ ರೈಲ್ವೆ ಇಲಾಖೆಯು ವಂದೇ ಭಾರತ್ ಸ್ಲೀಪರ್ ರೈಲು ಪರಿಚಯಿಸುವ ಮೊದಲು 20 ಬೋಗಿಗಳ ಹೊಸ ಆಧುನಿಕ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ ಆರಂಭಿಸಿದೆ. ಈ ಹೊಸ ರೈಲಿನಿಂದ ವೇಗದ ಪ್ರಯಾಣ ಜೊತೆಗೆ, ದಕ್ಷತೆಯನ್ನು ಹೆಚ್ಚಾಗಿದೆ. ಹೊಸ ರೈಲುಗಳ ಜಾಲ ವಿಸ್ತರಣೆಗೆ ಇಲಾಖೆ ಮುಂದಾಗಿದ್ದು, ಸಾರಿಗೆ ಮೂಲ ಸೌಕರ್ಯಕ್ಕೂ ಆದ್ಯತೆ ನೀಡಿದೆ.
20 ಬೋಗಿಗಳ ಹೊಸ ಆಧುನಿಕ ಹೊಸ ವಂದೇ ಭಾರತ್ ರೈಲು ಪರಿಣಾಮಕಾರಿ ಸಾರಿಗೆ ಸೌಲಭ್ಯ ಕಲ್ಪಿಸುತ್ತಿದೆ. ಇದು ಭಾರತೀಯ ರೈಲ್ವೆಯ ಬದ್ಧತೆ ಬಲಪಡಿಸುತ್ತದೆ. ರೈಲ್ವೆ ಜಾಲದ ವಿಸ್ತರಣೆ ಜೊತೆಗೆ ಸಾಮರ್ಥ್ಯವನ್ನು ಹೆಚ್ಚಿಸುವ ಹಾಗೂ ಮೂಲ ಸೌಕರ್ಯವನ್ನು ಸುಧಾರಿಸಲಿದೆ. ತಡೆರಹಿತ ಪ್ರಯಾಣದ ಅನುಭವ ನೀಡುತ್ತದೆ. ದೂರದ ಊರುಗಳಿಗೆ ಕಡಿಮೆ ಸಮಯದಲ್ಲಿ ಸಾವಿರಾರು ಪ್ರಯಾಣಿಕರಿಗೆ ಏಕಕಾಲಕ್ಕೆ ಪ್ರಯಾಣ ಸೇವೆ ನೀಡಲಿದೆ.

ತಿರುವನಂತಪುರಂ ಸೆಂಟ್ರಲ್-ಕಾಸರಗೋಡು ಹಾಗೂ ವಿಶಾಖಪಟ್ಟಣಂ-ಸಿಕಂದರಾಬಾದ್ ಮಧ್ಯೆ ಈ 20 ಬೋಗಿಗಳ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಕಾರ್ಯಾಚರಣೆ ನಡೆಸಲಾಗುತ್ತದೆ. ಈ ಭಾಗದ ಪ್ರಯಾಣಿಕರು ವಿಶೇಷ ಅನುಭವ ಪಡೆಯುತ್ತಿದ್ದಾರೆ.
ಕೆಲವು ವಿಶೇಷ ವೈಶಿಷ್ಟ್ಯಗಳು ಈ ಹೊಸ ರೈಲುಗಳಲ್ಲಿ ಅಳವಡಿಸಲಾಗಿದೆ. ರೈಲ್ವೆ ಮೂಲ ಸೌಕರ್ಯದಲ್ಲಿ ಬದಲಾವಣೆಗೆ ಹೊಸ ವಂದೇ ಭಾರತ್ ರೈಲು ಉತ್ತೇಜನಕಾರಿಯಾಗಿದೆ. ಪ್ರಯಾಣಿಕರಿಗೂ ವಿಶ್ವಾಸಾರ್ಹತೆ ಹೆಚ್ಚಿಸಿ, ವಿಶೇಷ ಅನುಭವ ನೀಡುತ್ತಿದೆ. ಇಂತಹ ಆಧುನಿಕ ರೈಲು ದೇಶದ ಸಾರಿಗೆಗೆ, ಆರ್ಥಿಕತೆಗೆ ಕೊಡುಗೆ ನೀಡುತ್ತದೆ ಎಂದು ರೈಲ್ವೆ ಇಲಾಖೆ ಅಭಿಪ್ರಾಯಪಟ್ಟಿದೆ.

ನಿತ್ಯ 2 ಟ್ರಿಪ್: 2 ಮಾರ್ಗಗಳಲ್ಲಿ ಹೊಸ ರೈಲು ಸೇವೆ
ತಿರುವನಂತಪುರಂ ಸೆಂಟ್ರಲ್-ಕಾಸರಗೋಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 20634/20633) ಬರೋಬ್ಬರಿ 588 ಕಿ.ಮೀ.ದೂರವನ್ನು ಕೇವಲ 8 ಗಂಟೆ 5 ನಿಮಿಷಗಳಲ್ಲಿ ಕ್ರಮಿಸುತ್ತಿದೆ. ಗುರುವಾರ ಬಿಟ್ಟು ವಾರದ ಉಳಿದೆಲ್ಲ ದಿನಗಳು ಈ ರೈಲಿನ ಸಂಚಾರ ಇದೆ. ವೇಗದ ಸಂಪರ್ಕ ಕಲ್ಪಿಸುತ್ತಿದೆ.
ಕೊಲ್ಲಂ ಜಂಕ್ಷನ್, ಚೆಂಗನ್ನೂರ್, ತ್ರಿಶೂರ್, ಕಣ್ಣೂರು, ಶೋರನೂರ್ ಜಂಕ್ಷನ್, ಕೋಯಿಕ್ಕೋಡ್, ಕೊಟ್ಟಾಯಂ, ಎರ್ನಾಕುಲಂ ಟೌನ್ ನಿಲ್ದಾಣಗಳಲ್ಲಿ ನಿಲುಗಡೆ ನೀಡುತ್ತಿದೆ. ಇದು ಬೆಳಗ್ಗೆ 5:15 ಗಂಟೆಗೆ ತಿರುವನಂತಪುರ ಸೆಂಟ್ರಲ್‌ನಿಂದ ಪ್ರಯಾಣ ಆರಂಭಿಸುತ್ತದೆ. ಅದೇ ದಿವಸ ಮಧ್ಯಾಹ್ನ 1:20 ಗಂಟೆಗೆ ಕಾಸರಗೋಡು ತಲುಪಲಿದೆ. ನಂತರ ಅದೇ ದಿನ ಮಧ್ಯಾಹ್ನ 2:30ಕ್ಕೆ ಕಾಸರಗೋಡು ನಿಲ್ದಾಣದಿಂದ ಸಂಚಾರ ಆರಂಭಿಸಿ ರಾತ್ರಿ 10:40 ಕ್ಕೆ ತಿರುವನಂತಪುರ ಸೆಂಟ್ರಲ್‌ಗೆ ಬರುತ್ತದೆ.
ವೇಗದ ರೈಲು ಮತ್ತು ಆಧನಿಕ ವ್ಯವಸ್ಥೆ, ಹೆಚ್ಚು ಬೋಗಿ ಹೊಂದಿರುವ ರೈಲು ಒಂದೇ ದಿನ ಎರಡು ಟ್ರಿಪ್ ಮೂಲಕ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಕ್ರಾಂತಿ ಮಾಡಿದೆ. ಟಿಕೆಟ್ ಬೆಲೆಎಸಿ ಚೇರ್ ಕಾರ್‌ಗೆ ₹1,590 ಹಾಗೂ ಎಕ್ಸಿಕ್ಯುಟಿವ್ ಚೇರ್ ಕಾರ್‌ಗೆ ₹2,880 ಇದ್ದು, ಪ್ರೀಮಿಯಂ ಪ್ರಯಾಣ ಸೇವೆ ನೀಡುತ್ತಿದೆ.
ಕೆಲವೇ ಗಂಟೆಗಳಲ್ಲಿ ನೂರಾರು ಕಿ.ಮೀ.ಸಂಚಾರ, ಟಿಕೆಟ್ ಬೆಲೆ
ಅದೇ ರೀತಿ ವಿಶಾಖಪಟ್ಟಣಂ ಹಾಗೂ ಸಿಕಂದರಾಬಾದ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 20833/20834) 8 ಗಂಟೆ 35 ನಿಮಿಷಕ್ಕೆ ಬರೋಬ್ಬರಿ 699 ಕಿ.ಮೀ. ಕ್ರಮಿಸುತ್ತದೆ. ಮಂಗಳವಾರ ಬಿಟ್ಟು ವಾರದ ಎಲ್ಲ ದಿನ ಸಂಚಾರಕ್ಕೆ ಲಭ್ಯವಿದೆ.
ವಿಜಯವಾಡ ಜಂಕ್ಷನ್, ಖಮ್ಮಮ್, ಸಮಲ್ಕೋಟ್ ಜಂಕ್ಷನ್, ರಾಜಮಂಡ್ರಿ ಹಾಗೂ ವಾರಂಗಲ್ ನಿಲ್ದಾಣಗಳಿಗೆ ನಿಲುಗಡೆ ನೀಡುತ್ತದೆ. ರೈಲು (20833) ಬೆಳಗ್ಗೆ 5:45 ಕ್ಕೆ ವಿಶಾಖಪಟ್ಟಣಂನಿಂದ ಸಂಚಾರ ಆರಂಭಿಸಿ ಮಧ್ಯಾಹ್ನ 2:20 ಕ್ಕೆ ಸಿಕಂದರಾಬಾದ್ ನಲ್ಲಿ ಅಂತ್ಯಗೊಳಿಸುತ್ತದೆ.
ಮರಳಿ ಇದೇ ರೈಲು (20834) ಮಧ್ಯಾಹ್ನ 3 ಗಂಟೆಗೆ ಸಂಚಾರ ಶುರು ಮಾಡಿರಾತ್ರಿ 11:35 ಕ್ಕೆ ವಿಶಾಖಪಟ್ಟಣಂಗೆ ಬರುತ್ತದೆ. ಚೇರ್ ಕಾರ್ ಟಿಕೆಟ್ ಬೆಲೆ ₹1,720 ಹಾಗೂ ಎಕ್ಸಿಕ್ಯುಟಿವ್ ಚೇರ್ ಕಾರ್ ₹3,170 ರೂಪಾಯಿ ಟಿಕೆಟ್ ಬೆಲೆ ಇದೆ. ಈ ಎರಡು ಮಾರ್ಗಗಳ ಸಾವಿರಾರು ಜನರಿಗೆ, ಪ್ರವಾಸಿಗರಿಗೆ ಅತ್ಯುತ್ತಮ ಸಾರಿಗೆ ಸೇವೆ ನೀಡುತ್ತಿದೆ.












Click it and Unblock the Notifications