ಕಾಶ್ಮೀರ: ಎನ್ಕೌಂಟರ್ ನಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನೆ
ಶ್ರೀನಗರ, ಡಿಸೆಂಬರ್ 11: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎನ್ಕೌಂಟರ್ ನಲ್ಲಿ ಮೂವರು ಉಗ್ರರನ್ನು ಸೇನಾಪಡೆಗಳು ಹೊಡೆದುರುಳಿಸಿವೆ. ಭಾನುವಾರ ತಡರಾತ್ರಿ ಯುನಿಸೋ ನಲ್ಲಿ ಈ ಎನ್ಕೌಂಟರ್ ನಡೆದಿದೆ.
ಈ ಎನ್ಕೌಂಟರ್ ನಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡುವಲ್ಲಿ ಸೇನಾಪಡೆಗಳು ಯಶಸ್ವಿಯಾಗಿವೆ. ಇನ್ನೋರ್ವ ನಾಗರಿಕ ಕಾರ್ಯಾಚರಣೆಯಲ್ಲಿ ಜೀವ ಕಳೆದುಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಸುಮಾರು ಎರಡು ಗಂಟೆಗಳ ದೀರ್ಘ ಕಾಲದವರೆಗೆ ಈ ಎನ್ಕೌಂಟರ್ ನಡೆದಿದೆ. ಕೊನೆಗೆ ಸೇನೆ ಮೂವರು ಉಗ್ರರನ್ನು ಹೊಡೆದುರುಳಿಸಿದೆ.
ಸಾವಿಗೀಡಾದ ಉಗ್ರರು ಹಿಜ್ಬುಲ್ ಮುಜಾಹಿದ್ದೀನ್ ಗೆ ಸೇರಿದವರು ಎನ್ನಲಾಗಿದೆ. ಉಗ್ರರಿಂದ ಭದ್ರತಾ ಪಡೆಗಳು ಭಾರೀ ಶಸ್ತ್ರಾಸ್ತ್ರ, ಬಂದೂಕುಗಳನ್ನು ವಶಕ್ಕೆ ಪಡೆದಿದೆ.











Click it and Unblock the Notifications