ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಉಗ್ರರ ಹತ್ಯೆ ಮಾಡಿದ ಪೊಲೀಸರು

ಪುಲ್ವಾಮ, ಮಾರ್ಚ್ 26: ಜಮ್ಮು-ಕಾಶ್ಮೀರದ ಪುಲ್ವಾಮದ ಪಡ್ಗಾಂಪೋರ್ ಪ್ರದೇಶದಲ್ಲಿ ಭಾನುವಾರ ಇಬ್ಬರು ಉಗ್ರಗಾಮಿಗಳನ್ನು ಹತ್ಯೆ ಮಾಡಲಾಗಿದೆ. ಪೊಲೀಸ್ ಪಡೆಯ ಮೇಲೆ ದಾಳಿ ನಡೆಸಲು ಯತ್ನಿಸಿದ ವೇಳೆ ಉಗ್ರರನ್ನು ಹೊಡೆದುರುಳಿಸಲಾಗಿದೆ. ಪೊಲೀಸ್ ಪಡೆಯಲ್ಲಿ ಎಸ್ ಪಿ ದರ್ಜೆಯ ಮೂವರು ಅಧಿಕಾರಿಗಳು ಇದ್ದರು.

ಪುಲ್ವಾಮ ಮತ್ತು ಅವಂತಿಪುರದ ಹಿರಿಯ ಎಸ್ ಪಿಗಳಾದ ಅಹ್ಮದ್, ಝಾಹೀದ್ ಮಲಿಕ್ ಅವರು ಜಿಲ್ಲೆಯ ಹೆಚ್ಚುವರಿ ಎಸ್ ಪಿ ಚಂದನ್ ಕೊಹ್ಲಿ ಜತೆಗೆ ತೆರಳುತ್ತಿದ್ದರು. ಕಾರಿನಲ್ಲಿ ಬಂದ ಉಗ್ರರು ಹಿಂದಿನಿಂದ ಅಧಿಕಾರಿಗಳಿದ್ದ ವಾಹನಗಳತ್ತ ಗುಂಡು ಹಾರಿಸಲು ಆರಂಭಿಸಿದ್ದಾರೆ. ಆಗ ನಡೆಸಿದ ಪ್ರತಿ ದಾಳಿಯಲ್ಲಿ ಇಬ್ಬರು ಉಗ್ರರು ಮೃತರಾಗಿದ್ದಾರೆ.[ಜಮ್ಮು ಪೊಲೀಸರಿಂದ ಎಕೆ-47 ಕಸಿದು ಪರಾರಿಯಾದ ಉಗ್ರ]

2 militants killed while trying to ambush police party

ಎರಡು ಶಸ್ತ್ರಾಸ್ತ್ರಗಳನ್ನು ಸ್ಥಳದಲ್ಲಿ ವಶಪಡಿಸಿಕೊಳ್ಳಲಾಗಿದ್ದು, ಉಗ್ರರ ಗುರುತು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಗ್ರರ ದಾಳಿ ಸಂದರ್ಭದಲ್ಲಿ ಸಮಯೋಚಿತ ಪ್ರತಿ ದಾಳಿ ಮಾಡಿದ ಪೊಲೀಸರ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಜಮ್ಮುವಿನಲ್ಲಿ ಉಗ್ರಗಾಮಿಯೊಬ್ಬ ಪೊಲೀಸರಿಂದ ಎಕೆ-47 ಕಸಿದು ಪರಾರಿಯಾದ ಘಟನೆ ಭಾನುವಾರ ಮುಂಜಾನೆ ನಡೆದಿದ್ದನ್ನು ಸ್ಮರಿಸಬಹುದು. ಈ ವೇಳೆ ಒಬ್ಬನನ್ನು ಬಂಧಿಸಲಾಗಿತ್ತು. ಮತ್ತೊಬ್ಬ ಎಕೆ-47 ರೈಫಲ್ ನೊಂದಿಗೆ ಪರಾರಿಯಾಗಿದ್ದ. ರೈಫಲ್ ಕಸಿಯುವ ಉಗ್ರರ ಯತ್ನದಲ್ಲಿ ಪೊಲೀಸ್ ಗೆ ಗಾಯವಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+