ಪಾಕಿಸ್ತಾನದಿಂದ ಅಪ್ರಚೋದಿತ ದಾಳಿ: ಇಬ್ಬರು ಭಾರತೀಯ ಸೈನಿಕರಿಗೆ ಗಾಯ
ಪೂಂಚ್(ಜಮ್ಮು ಕಾಶ್ಮೀರ), ಜೂನ್ 29: ಜಮ್ಮು-ಕಾಶ್ಮೀರದ ಪೂಂಚ್ ಭಾಗದಲ್ಲಿ ಪಾಕಿಸ್ತಾನ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಇಬ್ಬರು ಭಾರತೀಯ ಸೈನಿಕರು ಗಾಯಗೊಂಡಿದ್ದಾರೆ.
ಜೂನ್ 29 ರ ಬೆಳಗ್ಗಿನ ಜಾವ 1.30 ರ ಸುಮಾರಿಗೆ ನಡೆದ ಗುಂಡಿನ ದಾಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದ್ದು, ಇಬ್ಬರು ಸೈನಿಕರನ್ನು ಮಿಲಿಟರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಎರಡು ದಿನಗಳ ಹಿಂದಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಭೇಟಿಯಾಗಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ ಗಡಿ ಭಯೋತ್ಪಾದನೆಯ ಕುರಿತು ಮಾತನಾಡಿದ್ದರು, ಮತ್ತು ಅದರ ವಿರುದ್ಧ ತಕ್ಕ ಉತ್ತರ ನೀಡುವುದಾಗಿಯೂ ಹೇಳಿದ್ದರು. ಇದಾಗಿ ಎರಡೆ ದಿನಗಳಲ್ಲಿ ಈ ದಾಳಿ ನಡೆದಿದ್ದು, ನಿನ್ನೆ (ಜೂನ್ 28) ಸಹ ಜಮ್ಮು ಕಾಶ್ಮೀರದ ಭಿಂಬರ್ ಗಾಲಿ ಎಂಬ ಪ್ರದೇಶದಲ್ಲಿ ಪಾಕಿಸ್ತಾನ ಅಪ್ರಚೋದಿತ ಗುಂದಿನ ದಾಳಿ ನಡೆಸಿತ್ತು.












Click it and Unblock the Notifications