ತಿರುಪತಿಯ ಪಟಾಕಿ ಗೋದಾಮಿಗೆ ಬೆಂಕಿ, ಇಬ್ಬರು ಬಲಿ
ತಿರುಪತಿ, ಜುಲೈ 31: ತಿರುಪತಿಯಲ್ಲಿ ಸೋಮವಾರ ಬೆಳಗ್ಗೆ ನಡೆದ ಬೆಂಕಿ ಅಪಘಾತಕ್ಕೆ ಬಾಲಕರಿಬ್ಬರು ಬಲಿಯಾಗಿದ್ದಾರೆ. ತಿರುಪತಿಯ ರೇಣುಗುಂಟ ರಸ್ತೆಯಲ್ಲಿರುವ ಪಟಾಕಿ ಗೋದಾಮಿಗೆ ಬೆಂಕಿ ತಗುಲಿ ಈ ದುರಂತ ಸಂಭವಿಸಿದೆ.
ಈ ದುರ್ಘಟನೆಯಲ್ಲಿ ಗಾಯಗೊಂಡಿರುವ ಓರ್ವ ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗೋದಾಮಿನಲ್ಲಿ ಸುಟ್ಟು ಕರಕಲಾದ 10 ಹಾಗೂ 14 ವರ್ಷ ವಯಸ್ಸಿನ ಬಾಲಕರ ಶವವನ್ನು ಹೊರಕ್ಕೆ ತರಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಮಿತ್ರ ಗಾಂಧೀಪುರಮ್ ಪ್ರದೇಶದಲ್ಲಿರುವ ಈ ಗೋದಾಮಿಗೆ ತಗುಲಿದ್ದ ಬೆಂಕಿಯನ್ನು ನಂದಿಸಲಾಗಿದೆ.
ಬೆಂಕಿ ತಗುಲಲು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಗೋದಾಮಿನ ಮಾಲೀಕ ಬಾಬು ಅಲಿಯಾಸ್ ಖಳನಾಯಕ್ ತಲೆಮರೆಸಿಕೊಂಡಿದ್ದಾನೆ. ಮೃತ ಇಬ್ಬರು ಬಾಲಕರು ಹಾಗೂ ಗಾಯಗೊಂಡಿರುವ ಮಹಿಳೆ ಒಂದೇ ಕುಟುಂಬದವರು ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.











Click it and Unblock the Notifications