India: ಕೃಷಿ ಕೋರ್ಸ್ ಕಲಿಯುವ ವಿದ್ಯಾರ್ಥಿನಿಯರ ಪ್ರಮಾಣ ಬರೋಬ್ಬರಿ ಶೇ.175ರಷ್ಟು ಏರಿಕೆ
ನವದೆಹಲಿ, ಮಾರ್ಚ್ 08: ಭಾರತೀಯರಲ್ಲಿ ಬಹುತೇಕರು ಕೃಷಿಯ ಮೇಲೆ ಅವಲಂಬಿಸಿದ್ದಾರೆ. ಪುರುಷರು ಕೃಷಿಯಿಂದ ವಿಮುಖರಾಗುತ್ತಿರುವ ಸಂದರ್ಭದಲ್ಲಿ ಮಹಿಳೆಯರು ಕೃಷಿಯತ್ತ ಹೆಚ್ಚು ಒಲವು ಹೊಂದಿದ್ದಾರೆ ಎಂಬುದು ಸಂಶೋಧನೆಯಿಂದ ಬಹಿರಂಗವಾಗಿದೆ.
ಹೌದು, ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಅಂಕಿಅಂಶಗಳ ಪ್ರಕಾರ ಕಳೆದ ಎಂಟು ವರ್ಷಗಳಲ್ಲಿ ಕೃಷಿ ಸಂಬಂಧಿತ ಕೋರ್ಸ್‌ಗಳಿಗೆ ದಾಖಲಾಗುವ ವಿದ್ಯಾರ್ಥಿನಿಯರ ಸಂಖ್ಯೆ ಶೇಕಡಾ 175ರಷ್ಟು ಏರಿಕೆ ಕಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು THIE ವರದಿ ಮಾಡಿದೆ.

ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಳ
ಸದ್ಯ ದೇಶದ 76 ಕೃಷಿ ಶಿಕ್ಷಣ ಸಂಸ್ಥೆಗಳು ಒಟ್ಟು 47,000 ವಿದ್ಯಾರ್ಥಿಗಳನ್ನು ಒಳಗೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಅಂಕಿ ಅಂಶಗಳ ಪ್ರಕಾರ, 8,360 (ಶೇಕಡಾ 23) ವಿದ್ಯಾರ್ಥಿನಿಯರು ಕೃಷಿ ಸಂಸ್ಥೆಗಳಲ್ಲಿ ಇದ್ದಾರೆ. 2023ರ ಹೊತ್ತಿಗೆ, ಈ ಸಂಖ್ಯೆ 23,030 (ಶೇ.49) ಕ್ಕೆ ಏರಿಕೆ ಆಗಿತ್ತು.
ಸಾಲದೆಂಬಂತೆ ಕೃಷಿಯಲ್ಲಿ ಪದಕ ಗೆಲ್ಲುವ ವಿಷಯದಲ್ಲಿ ಪುರುಷ ವಿದ್ಯಾರ್ಥಿಗಳಿಗಿಂತಲೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಅಂಕ ಗಳಿಕೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ 90 ಪ್ರತಿಶತ ಶೈಕ್ಷಣಿಕ ಪದಕಗಳು ಮಹಿಳಾ ವಿದ್ಯಾರ್ಥಿಗಳ ಪಾಲಾಗಿವೆ ಎಂದು ಸಂಶೋಧಾನ ವರದಿ ತಿಳಿಸಿದೆ ಎಂದು ಐಸಿಎಆರ್‌ನ ಕೃಷಿ ಶಿಕ್ಷಣದ ಉಪ ಮಹಾನಿರ್ದೇಶಕ ಡಾ ಆರ್‌ಸಿ ಅಗರವಾಲ್ ಮಾಹಿತಿ ನೀಡಿದರು.
ಕೃಷಿಯತ್ತ ಆಸಕ್ತಿ ಬೆಳೆಸಿದ ಯೋಜನೆಗಳು
2019ರಲ್ಲಿ, ಸರ್ಕಾರವು ವಿಶ್ವಬ್ಯಾಂಕ್ ಸಹಯೋಗದೊಂದಿಗೆ ರಾಷ್ಟ್ರೀಯ ಕೃಷಿ ಉನ್ನತ ಶಿಕ್ಷಣ ಯೋಜನೆಯನ್ನು (ICAR-NAHEP) 50:50 ಅನುಪಾತದಲ್ಲಿ ಪ್ರತಿಭಾವಂತರನ್ನು ಆಕರ್ಷಿಸಲು ಮುಂದಾಗಿತ್ತು. ದೇಶದಲ್ಲಿ ಉನ್ನತ ಕೃಷಿ ಶಿಕ್ಷಣವನ್ನು ಬಲಪಡಿಸಲು ಆರಂಭಿಸಿತು. ಈ ಯೋಜನೆಯು ವಿದ್ಯಾರ್ಥಿಗಳಿಗೆ ವಿದೇಶಿ ವಿಶ್ವವಿದ್ಯಾಲಯದ ಮಾನ್ಯತೆ ಪ್ರವಾಸಗಳನ್ನು ಕೈಗೊಳ್ಳಲು ಉತ್ತೇಜನ ನೀಡಿತು.

ICAR-NAHEP ನಡಿ 4.6 ಲಕ್ಷ ಫಲಾನುಭವಿಗಳಲ್ಲಿ, 2019 ರಲ್ಲಿ ವಿದ್ಯಾರ್ಥಿನಿಯರ 28 ಪ್ರತಿಶತವು 2023 ರ ಹೊತ್ತಿಗೆ 45 ಪ್ರತಿಶತಕ್ಕೆ ಹೆಚ್ಚಾಗಿತ್ತು. ಇನ್ನೂ ಇದಲ್ಲದೆ, 19 ದೇಶಗಳಲ್ಲಿ ವಿದೇಶಿ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿದ ಎಲ್ಲಾ 1,400 ವಿದ್ಯಾರ್ಥಿಗಳಲ್ಲಿ 42 ಪ್ರತಿಶತ ಮಹಿಳಾ ವಿದ್ಯಾರ್ಥಿಗಳು ಇದ್ದಾರೆ ಎಂದು ಅವರು ವಿವರಿಸಿದರು.
ಸ್ವಂತ ಉದ್ಯಮ ಆರಂಭಿಸಿದ ಹೆಣ್ಮಕ್ಕಳು
11 ವಿದ್ಯಾರ್ಥಿನಿಯರು NAHEP ಅಡಿಯಲ್ಲಿ ತಮ್ಮದೇ ಆದ ಉದ್ಯಮಗಳನ್ನು ಸ್ಥಾಪಿಸಿದರು. ಈ ಪ್ರತಿಯೊಬ್ಬ ಮಹಿಳಾ ಉದ್ಯಮಿಗಳು ವರ್ಷಕ್ಕೆ ಸರಾಸರಿ 15 ಲಕ್ಷ ಆದಾಯವನ್ನು ಗಳಿಸಿದ್ದಾರೆ. ವಿದ್ಯಾರ್ಥಿನಿಯರ ಅರ್ಜಿಗಳಿಗೆ ಪ್ರವೇಶದ ಅನುಪಾತವು ಸಹ ಹುಡುಗರಿಗಿಂತ ತುಲನಾತ್ಮಕವಾಗಿ ಹೆಚ್ಚಾಗಿದೆ. ಪ್ರತಿ ಸೀಟಿಗೆ, ಸಂಸ್ಥೆಗಳು 31 ಹುಡುಗಿಯರ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಇದು ವಿದ್ಯಾರ್ಥಿಗಳಿಗಿಂತ ಹೆಚ್ಚು ಎಂದರು.
ಕೃಷಿ ಅಧ್ಯಯನದಲ್ಲಿ ವಿದ್ಯಾರ್ಥಿನಿಯರ ಆಸಕ್ತಿಗೆ ಕಾರಣ?
ಹಾಸ್ಟೆಲ್ ಸೌಲಭ್ಯಗಳು, ಸ್ಕಾಲರ್‌ಶಿಪ್‌ಗಳು ಮತ್ತು ವಿದೇಶಿ ಪ್ರವಾಸಗಳ ಲಭ್ಯತೆ, ಕೃಷಿ-ಸ್ಟಾರ್ಟ್‌ಅಪ್‌ಗಳ ಹೆಚ್ಚಳ, ಉದ್ಯೋಗಾವಕಾಶಗಳು, ಆಹಾರ ಸಂಸ್ಕರಣೆ, ಕೃಷಿ-ವ್ಯಾಪಾರ ಮತ್ತು ಬ್ಲಾಕ್‌ಚೈನ್‌ಗಳು ಕೃಷಿ ಕಲಿಯುವ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿವೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications