ಭಾರತಕ್ಕೆ ಕೊರೊನಾ ವೈರಸ್ ಹೊತ್ತು ತಂದವರು 150 ಮಂದಿ!

ನವದೆಹಲಿ, ಫೆಬ್ರವರಿ.07: ಕೊರೊನಾ ವೈರಸ್.. ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮಾರಕ ಸೋಂಕಿನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತೀಯ ಕೇಂದ್ರ ಸರ್ಕಾರವು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿ ಕೊರೊನಾ ವೈರಸ್ ಹರಡುವಿಕೆ ಬಗ್ಗೆ ಪ್ರಸ್ತಾಪಿಸಿದ ಆರೋಗ್ಯ ಸಚಿವ ಹರ್ಷವರ್ಧನ್, ಚೀನಾಗೆ ತೆರಳಲು ಭಾರತೀಯರಿಗೆ ವೀಸಾ ನಿರಾಕರಿಸಲಾಗುತ್ತಿದೆ. ಜೊತೆಗೆ ಚೀನಾದಿಂದ ಭಾರತಕ್ಕೆ ಪೂರ್ವಾನುಮತಿ ಇಲ್ಲದೇ ಆಗಮಿಸಲು ಪ್ರಯಾಣಿಕರಿಗೆ ನಿರ್ಬಂಧ ವಿಧಿಸಲಾಗಿದೆ ಎಂದರು.

ಇನ್ನು, ಚೀನಾಗೆ ತೆರಳಲು ಭಾರತದಲ್ಲಿ ವೀಸಾ ನೀಡುವುದನ್ನು ನಿಲ್ಲಿಸಲಾಗಿದ್ದು, ಬೇರೆ ದೇಶಗಳಿಂದಲೂ ಆಗಮಿಸುತ್ತಿರುವ ಭಾರತೀಯರನ್ನು ಏರ್ ಪೋರ್ಟ್ ಗಳಲ್ಲೇ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಹರ್ಷವರ್ಧನ್ ತಿಳಿಸಿದರು.

ಭಾರತೀಯ ಏರ್ ಪೋರ್ಟ್ ನಲ್ಲೇ ವೈದ್ಯಕೀಯ ಪರೀಕ್ಷೆ

ಭಾರತೀಯ ಏರ್ ಪೋರ್ಟ್ ನಲ್ಲೇ ವೈದ್ಯಕೀಯ ಪರೀಕ್ಷೆ

ಚೀನಾ ಅಷ್ಟೇ ಅಲ್ಲದೇ ಬೇರೆ ಸಿಂಗಾಪುರ್, ಥೈಲ್ಯಾಂಡ್ ಮತ್ತು ಹಾಂಗ್ ಕಾಂಗ್ ರಾಷ್ಟ್ರಗಳಿಂದ ಆಗಮಿಸುವ ಪ್ರಯಾಣಿಕರನ್ನು ಕೂಡಾ ಭಾರತದ ಏರ್ ಪೋರ್ಟ್ ಗಳಲ್ಲಿಯೇ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದರು.

ದೇಶದ 21 ಏರ್ ಪೋರ್ಟ್ ಗಳಲ್ಲಿ ವೈದ್ಯಕೀಯ ಪರೀಕ್ಷೆ

ದೇಶದ 21 ಏರ್ ಪೋರ್ಟ್ ಗಳಲ್ಲಿ ವೈದ್ಯಕೀಯ ಪರೀಕ್ಷೆ

ಭಾರತದ 21 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ವೈದ್ಯಕೀಯ ಪರೀಕ್ಷಾ ಕೇಂದ್ರಗಳನ್ನು ತೆರಯಲಾಗಿದೆ. ಇದುವರೆಗೂ ವಿದೇಶಗಳಿಂದ ಆಗಮಿಸಿದ 1,275 ವಿಮಾನಗಳಲ್ಲಿನ 1,39,539 ಪ್ರಯಾಣಿಕರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರ ಜೊತೆಗೆ ದೇಶದ 12 ಬಂದರುಗಳಲ್ಲಿಯೂ ಕೂಡಾ ವೈದ್ಯಕೀಯ ಪರೀಕ್ಷಾ ಕೇಂದ್ರಗಳನ್ನು ತೆರೆಲಾಗಿದ್ದು, ಸಾಗರ ಮಾರ್ಗದಲ್ಲಿ ದೇಶಕ್ಕೆ ಆಗಮಿಸುವ ಎಲ್ಲರನ್ನು ಚಿಕಿತ್ಸೆಗೆ ಒಳಪಡಿಸಲಾಗುತ್ತದೆ ಎಂದು ಹರ್ಷವರ್ಧನ್ ಮಾಹಿತಿ ನೀಡಿದರು.

150 ಪ್ರಯಾಣಿಕರಿಗೆ ಕೊರೊನಾ ವೈರಸ್ ತಗಲಿರುವ ಶಂಕೆ

150 ಪ್ರಯಾಣಿಕರಿಗೆ ಕೊರೊನಾ ವೈರಸ್ ತಗಲಿರುವ ಶಂಕೆ

ಇನ್ನು, ಏರ್ ಪೋರ್ಟ್ ಗಳಲ್ಲಿ ನಡೆಸಿದ ವೈದ್ಯಕೀಯ ಪರೀಕ್ಷೆ ವೇಳೆ ವಿದೇಶಗಳಿಂದ ಆಗಮಿಸಿದ 150 ಮಂದಿ ಭಾರತೀಯರಲ್ಲಿ ಕೊರೊನಾ ವೈರಸ್ ಸೋಂಕು ತಗಲಿರುವ ಅನುಮಾನ ವ್ಯಕ್ತವಾಗಿದೆ. ತುರ್ತು ನಿಗಾ ಘಟಕಗಳಲ್ಲಿ ಎಲ್ಲರನ್ನೂ ಇರಿಸಿ ಚಿಕಿತ್ಸೆ ನಡೆಸಲಾಗುತ್ತಿದೆ.

ಚೀನಾ ಪ್ರಜೆಗಳು ಭಾರತಕ್ಕೆ ಬರುವ ಹಾಗಿಲ್ಲ

ಚೀನಾ ಪ್ರಜೆಗಳು ಭಾರತಕ್ಕೆ ಬರುವ ಹಾಗಿಲ್ಲ

ಸದ್ಯದ ಪರಿಸ್ಥಿತಿಯಲ್ಲಿ ಭಾರತೀಯರ ಚೀನಾ ಪ್ರವಾಸಕ್ಕೆ ಅನುಮತಿ ನೀಡುತ್ತಿಲ್ಲ. ಚೀನಾದಲ್ಲಿ ಇರುವ ಪ್ರಜೆಗಳು ಭಾರತಕ್ಕೆ ಆಗಮಿಸಬೇಕಾದಲ್ಲಿ ಪೂರ್ವಾನುಮತಿ ಪಡೆಯಬೇಕಾಗುತ್ತದೆ. ಬೀಜಿಂಗ್ ಅಥವಾ ಶಾಂಘೈನಲ್ಲಿರುವ ಭಾರತೀಯ ರಾಯಭಾರಿ ಅವರ ಅನುಮತಿ ಪಡೆದ ನಂತರವಷ್ಟೇ ಭಾರತಕ್ಕೆ ಆಗಮಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+