• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2 ತಿಂಗಳಲ್ಲಿ ವಿದೇಶದಿಂದ ಭಾರತಕ್ಕೆ ಬಂದವರೆಷ್ಟು?

|

ನವದೆಹಲಿ, ಮಾರ್ಚ್ 28: ಒಟ್ಟು 190ಕ್ಕೂ ಹೆಚ್ಚಿನ ರಾಷ್ಟ್ರಗಳಲ್ಲಿ ಕೊರೊನಾ ಬಾಧಿಸುತ್ತಿದೆ.

ತಾವಿರುವ ದೇಶಗಳಲ್ಲಿ ಕೊರೊನಾ ಬಂದಿದ್ದು ತಿಳಿಯುತ್ತಿದ್ದಂತೆ ಆಯಾ ದೇಶಗಳಲ್ಲಿದ್ದ ಭಾರತೀಯ ತಕ್ಷಣ ಹೊರಟು ದೇಶಕ್ಕೆ ಮರಳಿದ್ದಾರೆ.

   The first coronavirus infection in Kodagu has been confirmed | Oneindia kannada

   ಕಳೆದ ಎರಡು ತಿಂಗಳುಗಳಲ್ಲಿ ಸುಮಾರು 15 ಲಕ್ಷ ಪ್ರಯಾಣಿಕರು ವಿವಿಧ ದೇಶಗಳಿಂದ ಭಾರತಕ್ಕೆ ಮರಳಿದ್ದಾರೆ ಎಂದು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ತಿಳಿಸಿದ್ದಾರೆ.

   ಕೊರೊನಾದಿಂದ ವಿಮಾನ ಸಂಸ್ಥೆಗಳಿಗಾದ ನಷ್ಟ ಎಷ್ಟು?ಕೊರೊನಾದಿಂದ ವಿಮಾನ ಸಂಸ್ಥೆಗಳಿಗಾದ ನಷ್ಟ ಎಷ್ಟು?

   ಈಗಾಗಲೇ ಸಾರ್ಕ್ ಸದಸ್ಯ ರಾಷ್ಟ್ರಗಳ ಆರೋಗ್ಯ ಸಚಿವಾಲಯಗಳ ಪ್ರಮುಖರು , ಪರಿಣಿತರ ಇ-ಮೇಲ್ ವಾಟ್ಸಪ್ ಗುಂಪು ರಚಿಸುವ ಕುರಿತು ಕೂಡ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ.

   ಜನವರಿಯಿಂದ ಮಾರ್ಚ್‌ವರೆಗೆ ಪ್ರಯಾಣಿಸಿದವರು

   ಜನವರಿಯಿಂದ ಮಾರ್ಚ್‌ವರೆಗೆ ಪ್ರಯಾಣಿಸಿದವರು

   ಜನವರಿ 18 ಮತ್ತು ಮಾರ್ಚ್ 23ರ ನಡುವೆ 15 ಲಕ್ಷ ಮಂದಿ ಪ್ರಯಾಣಿಕರು ದೇಶಕ್ಕೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಗಳು ಅಂತಾರಾಷ್ಟ್ರೀಯ ಪ್ರಯಾಣಿಕರ ವಿರುದ್ಧದ ಕಣ್ಗಾವಲನ್ನು ಇನ್ನಷ್ಟು ಬಿಗಿಗೊಳಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದ್ದಾರೆ.

   ಕೇಂದ್ರಾಡಳಿತ ಪ್ರದೇಶಗಳ ಮುಖ್ಯಕಾರ್ಯದರ್ಶಿಗಳಿಗೆ ಪತ್ರ

   ಕೇಂದ್ರಾಡಳಿತ ಪ್ರದೇಶಗಳ ಮುಖ್ಯಕಾರ್ಯದರ್ಶಿಗಳಿಗೆ ಪತ್ರ

   ಈ ಕುರಿತು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ. ಈ ಎಲ್ಲ ಪ್ರಯಾಣಿಕರ ಮೇಲೆ ಕಣ್ಗಾವಲು ಇಡದಿದ್ದರೆ ಕೊವಿಡ್ 19 ತಡೆಯಲು ಕೈಗೊಂಡಿರುವ ಕ್ರಮಗಳೆಲ್ಲವೂ ವಿಫಲವಾಗಲಿದೆ . ಪರಿಸ್ಥಿತಿಯನ್ನು ಹತೋಟಿಗೆ ತರಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

   ವಿದ್ಯುನ್ಮಾನ ವೇದಿಕೆ ರೂಪಿಸಲು ಭಾರತದ ಕ್ರಮ

   ವಿದ್ಯುನ್ಮಾನ ವೇದಿಕೆ ರೂಪಿಸಲು ಭಾರತದ ಕ್ರಮ

   ಕೊವಿಡ್ 19 ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾರ್ಕ್ ದೇಶಗಳಿಗಾಗಿ ಆನ್‌ಲೈನ್‌ನಲ್ಲಿ ಸಮಾನ ವಿದ್ಯುನ್ಮಾನ ವೇದಿಕೆಯನ್ನು ರೂಪಿಸಲು ಭಾರತ ಮುಂದಾಗಿದೆ.

   ಬೇರೆ ದೇಶಗಳ ಜೊತೆ ವಿಡಿಯೋ ಸಂವಾದ

   ಬೇರೆ ದೇಶಗಳ ಜೊತೆ ವಿಡಿಯೋ ಸಂವಾದ

   ವಿವಿಧ ದೇಶಗಳ ಜೊತೆ ವಿಡಿಯೋ ಸಂವಾದ ನಡೆಸಲಾಗಿದ್ದು, ಅಲ್ಲಿಯ ಪರಿಸ್ಥಿತಿಯನ್ನು ಅವಲೋಕಿಸಲಾಗಿದೆ. ಸಾರ್ಕ್ ಸಮೂಹದಲ್ಲಿ ಭಾರತವಲ್ಲದೆ ಅಫ್ಘಾಲಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾ ದೇಶಗಳಿವೆ.

   English summary
   India between January 18 to March 23 as there appeared to be a "gap" between those being monitored for COVID-19 and 15 lakh arrivals during the period.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X