ಪೂಂಚ್‌ನಲ್ಲಿ ಪಾಕ್ ಸೇನೆ ಗುಂಡಿನ ದಾಳಿ; 15 ಅಮಾಯಕರ ಸಾವು, 43 ಜನರಿಗೆ ಗಾಯ
Ind-Pak War: ಪಹಲ್ಗಾಮ್‌ನಲ್ಲಿ ದೇಶದ ಸುಮಾರು 26 ಅಮಾಯಕರನ್ನು ಉಗ್ರರು ಬಲಿ ಪಡೆದುಕೊಂಡಿದ್ದರು. ಇದಕ್ಕೆ ಪ್ರತಿಕಾರವಾಗಿ 9 ಕಡೆ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಇದೀಗ ಇದರ ಬೆನ್ನಲ್ಲೇ ಪಾಕ್ ಸೇನೆ ಗುಂಡಿನ ದಾಳಿಯಿಂದ ಪೂಂಚ್ ಹಾಗೂ ತಂಗ್ಧರ್‌ನಲ್ಲಿ 15 ಮಂದಿ ಸಾವನ್ನಪ್ಪಿದ್ದು, 43 ಜನ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಹಾಗೂ ತಂಗ್ಧರ್‌ನಲ್ಲಿ ಪಾಕ್ ಸೇನೆ ನಡೆಸಿದ ಶೆಲ್ ದಾಳಿಯಿಂದ 15 ಮಂದಿ ಸಾವನ್ನಪ್ಪಿದ್ದು, 43 ಜನ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಭಾರತ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯನ್ನು ನಡೆಸಿ ಪಾಕ್‌ಗೆ ಪ್ರತ್ಯುತ್ತರವನ್ನು ಕೊಟ್ಟಿದ್ದು, ಇದರಲ್ಲಿ ಸುಮಾರು 100ಕ್ಕೂ ಹೆಚ್ಚು ಭಯೋತ್ಪಾದಕರು ಮೃತಪಟ್ಟಿದ್ದರು.
ಪಹಲ್ಗಾಮ್‌ನಲ್ಲಿ ನಡೆದ ಪ್ರವಾಸಿಗರ ಮೇಲೆ ಉಗ್ರರ ದಾಳಿಗೆ ಭಾರತ ಸೇನೆ ಪ್ರತ್ಯುತ್ತರ ನೀಡಿತ್ತು. ಮಂಗಳವಾರ ತಡರಾತ್ರಿ 1:44ರ ಸುಮಾರಿಗೆ ಭಾರತೀಯ ಸೇನೆ 'ಆಪರೇಷನ್ ಸಿಂಧೂರ' ಹೆಸರಲ್ಲಿ ಕ್ಷಿಪಣಿ ದಾಣಿ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು. ಈ ಬೆನ್ನಲ್ಲೇ ಪಾಕಿಸ್ತಾನ ಶೆಲ್ ದಾಳಿ ನಡೆಸಿ 15 ಅಮಾಯಕ ನಾಗರಿಕರನ್ನು ಬಲಿ ತೆಗೆದುಕೊಂಡ ಘಟನೆ ನಡೆದಿದೆ ಎಂದು ತಿಳಿದುವಂದಿದೆ.
ಗಡಿಯಾಚೆಗಿನ ಯುದ್ಧದ ನಡುವೆಯೇ ಪೂಂಚ್ ಜಿಲ್ಲೆಯ ಗುರುದ್ವಾರ ಶ್ರೀ ಗುರು ಸಿಂಗ್ ಸಭಾದ ಮೂಲೆಯಲ್ಲಿ ಪಾಕಿಸ್ತಾನದ ಶೆಲ್ ದಾಳಿ ನಡೆಸಿದ್ದು, ಸಣ್ಣಪುಟ್ಟ ಹಾನಿಯಾಗಿದೆ ಎಂದು ಜಿಲ್ಲಾ ಗುರುದ್ವಾರ ಪ್ರಬಂಧಕ್ ಸಮಿತಿಯ ಅಧ್ಯಕ್ಷ ನರಿಂದರ್ ಸಿಂಗ್ ಹೇಳಿದ್ದಾರೆ.
ಗುರುದ್ವಾರದ ಒಂದು ಮೂಲೆಗೆ ಶೆಲ್ ಬಡಿದು, ಬಾಗಿಲಿಗೆ ಹಾನಿಯಾಗಿದೆ ಮತ್ತು ಕೆಲವು ಗಾಜಿನ ಫಲಕಗಳು ಒಡೆದಿವೆ ಎಂದು ಹೇಳಿದ್ದಾರೆ. ಧಾರ್ಮಿಕ ಸ್ಥಳವು ಹಾನಿಯಾಗಿದೆ. ಅಲ್ಲದೆ, ಈ ಪ್ರದೇಶದಲ್ಲಿ ಹೆಚ್ಚಿನ ಸಾವುನೋವುಗಳು ಸಂಭವಿಸಿವೆ. ಪೂಂಚ್ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಗಡಿಯಾಚೆಗಿನ ಶೆಲ್ ದಾಳಿಯಿಂದ ಅಮಾಯಕ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯನ್ನು ಶಶಿ ತರೂರ್ ಶ್ಲಾಘಿಸಿದ್ದಾರೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಭಾರತ ನಡೆಸಿದ ಪ್ರತೀಕಾರದ ದಾಳಿಗೆ ಆಪರೇಷನ್ ಸಿಂಧೂರ್ ಎಂದು ಹೆಸರಿಟ್ಟಿದ್ದಕ್ಕೆ ಕಾಂಗ್ರೆಸ್ ನಾಯಕ ಶಶಿ ತರೂರ್ ಶ್ಲಾಘಿಸಿದ್ದಾರೆ. ಅಲ್ಲದೆ,
ಇದು ಅದ್ಭುತವಾಗಿದೆ ಎಂದು ಕರೆದಿದ್ದಾರೆ.
ಪಹಲ್ಗಾಮ್‌ನಲ್ಲಿ ಹತ್ಯೆಗೀಡಾದ ತನ್ನ ಪತಿ ಪಕ್ಕದಲ್ಲಿ ಪತ್ನಿ ಅತ್ತಿದ್ದಳು. ಇದೀಗ ತಕ್ಕ ಪ್ರತ್ಯುತ್ತರವನ್ನು ನಮ್ಮ ಸೇನೆ ಪಾಕ್‌ಗೆ ಕೊಟ್ಟಿದೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.












Click it and Unblock the Notifications