• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಾಣ ಬಲಿ ಪಡೆದ ಫೇಸ್ ಬುಕ್ ಫೋಟೋ ಗೀಳು

|

ಛತ್ತೀಸ್ ಘಡ, ನ. 26 : ಫೇಸ್ ಬುಕ್ ಗೆ ಫೋಟೊ ಹಾಕಲು ಪೋಸ್ ನೀಡುವ ಭರದಲ್ಲಿ 13 ವರ್ಷದ ಬಾಲಕನೊಬ್ಬ ಪ್ರಾಣವನ್ನೇ ನೀಡಿದ್ದಾನೆ. ನಿಂತಿದ್ದ ಗೂಡ್ಸ್ ರೈಲಿನ ಮೇಲೆ ಹತ್ತಿ ಫೋಟೋ ತೆಗೆಸಿಕೊಳ್ಳುವ ಭರದಲ್ಲಿ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದಾನೆ.

ರೈಲ್ವೆ ಉದ್ಯೋಗಿಯೊಬ್ಬರ ಪುತ್ರ ಕೇತನ್ ಪೊದ್ದರ್ ಮೃತಪಟ್ಟ ಬಾಲಕ. ಬಿಲಾಸ್ ಪುರ್ ಸಮೀಪದ ವಿಶಾಲನಗರದಲ್ಲಿ ವಾಸವಿದ್ದ ಬಾಲಕ ಸ್ನೇಹಿತ ಜತೆಗೂಡಿ ಉಸ್ಲಾಪುರ್ ರೈಲು ನಿಲ್ದಾಣಕ್ಕೆ ಆಡಲು ತೆರಳಿದ್ದ ಬಾಲಕ ಮೃತಪಟ್ಟಿದ್ದಾನೆ.[ಯುವತಿ ಕೈ ಹಿಡಿದು ಎಳೆದಾಡಿದ ಕಾಮಾಂಧರ ಸೆರೆ]

ಒಂಭತ್ತನೇ ತರಗತಿ ವಿದ್ಯಾರ್ಥಿ ಕೇತನ್ ಗೆ ಫೇಸ್ ಬುಕ್ ನಲ್ಲಿ ವಿಭಿನ್ನ ಫೋಟೋ ಹಾಕಿ ಲೈಕ್ ಪಡೆಯುವ ಹುಚ್ಚು. ಸ್ನೇಹಿತರ ಮಾತನ್ನು ಕೇಳದೆ ನಿಂತಿದ್ದ ರೈಲಿನ ಗಾರ್ಡ್ಸ್ ರೂಮ್ ಏರಿದಾಗ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾನೆ.

ಪ್ರೊಜೆಜ್ಟ್ ವರ್ಕ್ ಇದೆ ಎಂದು ಮನೆಯಲ್ಲಿ ಸುಳ್ಳು ಹೇಳಿ ಸ್ನೇಹಿತರೊಂದಿಗೆ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದ. ಆಕಸ್ಮಿಕವಾಗಿ ನಡೆದ ಘಟನೆಯಿಂದ ಕಂಗಾಲಾದ ಕೇತನ್ ಸ್ನೇಹಿತರು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.

ಬಹಳ ಸಮಯ ಕಳೆದರೂ ಕೇತನ್ ಮನೆಗೆ ಬಾರದಿದ್ದುದರಿಂದ ಕಂಗಾಲಾದ ಪಾಲಕರು ಹುಡುಕಾಟಕ್ಕೆ ತೊಡಗಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಕೇತನ್ ಸ್ನೇಹಿತರು ಅವಘಡವನ್ನು ವಿವರಿಸಿದ್ದು ಪೊಲೀಸರು ಹುಡುಕಿದಾಗ ಶವ ಪತ್ತೆಯಾಗಿದೆ.[ರೈಲಿನ ಫೋಟೋ ತೆಗೆಯಲು ಹೋಗಿ ವಿದ್ಯಾರ್ಥಿನಿ ಸಾವು]

ಈ ಹಿಂದೆ ಕೇತನ್ ಫೆಸ್ ಬುಕ್ ನಲ್ಲಿ ರೈಲಿನ ಮೇಲೆ ನಿಂತಿದ್ದ ಪೋಟೋ ಹಾಕಿದ್ದಾಗ ಅನೇಕ ಲೈಕ್ ಪಡೆದುಕೊಂಡಿದ್ದ. ಅದರಿಂದ ಪ್ರೇರಿತನಾಗಿ ಮತ್ತೆ ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದು ಈಗ ತನ್ನ ಪ್ರಾಣವನ್ನೆ ಕಳೆದುಕೊಂಡಿದ್ದಾನೆ ಎಂದು ರೈಲ್ವೆ ಪೊಲೀಸ್ ಅಧಿಕಾರಿ ನವರತ್ನ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 13-year-old boy died after he accidentally came in contact with an overhead live wire while posing for a picture atop a stationary train in Chhattisgarh's Bilaspur district. Ketan Poddar, a resident of Vaishali Nagar area here, had gone to Uslapur station along with his friends last evening, when the incident took place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more