ರಣ ಬಿಸಿಲು: ಹೈ ಶುಗರ್-ಬಿಪಿ ಮತ್ತು ತೀವ್ರ ಜ್ವರದಿಂದ ಬಳಲಿ13 ಮಂದಿ ಸಾವು
ದೇಶದಲ್ಲಿ ಮಳೆ ಕಣ್ಣಾ ಮುಚ್ಚಾಲೆ ಆಡುತ್ತಿದೆ. ಕರ್ನಾಟಕದಲ್ಲೂ ಮಳೆ ಬಂದು ಹೋಗುವ ಕೆಲಸವನ್ನು ಮಾಡುತ್ತಿದೆ. ಆದರೆ ರೈತರಿಗೆ ಬೇಕಿರುವಷ್ಟು ಮಳೆ ಇನ್ನು ಆಗಿಲ್ಲ. ಮಳೆ ರಾಜ್ಯದ ಜನರ ಮೂಗಿಗೆ ತುಪ್ಪು ಸವರು ಕೆಲಸವನ್ನು ಮಾಡುತ್ತಿದೆ. ಕೆಲವು ಜಿಲ್ಲೆಗಳು ಇನ್ನು ಸಹ ಮಳೆಯ ದರ್ಶನವನ್ನೇ ಕಂಡಿಲ್ಲ. ಇನ್ನು ಬಿಸಿಲು ತನ್ನ ಪ್ರತಾಪ ಮುಂದುವರೆಸಿದೆ.
ಕರ್ನಾಟಕದಲ್ಲಿ ಕಳೆದ ತಿಂಗಳು ದಾಖಲೆಯ ಬಿಸಿಲು ದಾಖಲಾಗಿತ್ತು. ಆದರೆ, ಕೆಲವು ದಿನ ಮಳೆ ಬಂದಿದ್ದರಿಂದ ಇದರ ಶಾಖ ಕಡಿಮೆ ಆಗಿದೆ. ಈಗಲೂ ಜನ ಮಳೆಯ ದರ್ಶನಕ್ಕಾಗಿ ಆಗಸದತ್ತ ಮುಖ ಮಾಡಿ ನಿಲ್ಲುವ ಪರಿಸ್ಥಿತಿ ಬಂದಿದೆ. ಮುಂಗಾರು ರಾಜ್ಯದಲ್ಲಿ ನಿರೀಕ್ಷೆಗಿಂತಲೂ ಮುಂಚುತಿವಾಗಿ ಬರುತ್ತದೆ ಎಂದು ತಜ್ಞರು ಹೇಳಿದ್ದಾರೆ. ಆದರೆ ಮಳೆ ಸೂಚನೆ ಇನ್ನು ಸಿಗುತ್ತಿಲ್ಲ.

ನಮ್ಮ ರಾಜ್ಯದಲ್ಲಿ ಮಳೆ ದರ್ಶನವನ್ನಾದರೂ ನೀಡಿದರೆ, ಉತ್ತರದಲ್ಲಿ ರಣ ರಣ ಬಿಸಿಲು ಜನರ ನಿದ್ದೇಯನ್ನು ಗೆಡಿಸಿದೆ. ಎರಡು ದಿನದ ಹಿಂದೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಾಖಲೆಯ 52 ಡಿಗ್ರಿ ಬಿಸಿಲು ದಾಖಲಾಗಿದೆ. ಇನ್ನು ಮರಭೂಮಿ ರಾಜಸ್ಥಾನ, ಬೀಹಾರದಲ್ಲೂ ಬಿಸಿಲಿನ ಶಾಕಖಕ್ಕೆ ಜನ ಕಂಗಾಲಾಗಿದ್ದಾರೆ.
ಎಷ್ಟು ಬಲಿ?
ಉತ್ತರ ಪ್ರದೇಶದಲ್ಲಿ ಬಿಸಿಲಿನ ಬೇಗೆ ಜನರನ್ನು ಹೈರಾಣ ಮಾಡಿದೆ. ಈ ಬಿಸಿಯಿಂದಾಗಿ ಮಿರ್ಜಾಪುರದಲ್ಲಿ 13 ಮಂದಿ ಸಾವನ್ನಪ್ಪಿರುವ ಪ್ರಕರಣ ಬೆಳಕಿಗೆ ಬಂದಿದೆ. ಮೃತಪಟ್ಟವರಲ್ಲಿ 7 ಗೃಹ ರಕ್ಷಕರು, 5 ನಾಗರಿಕರು ಮತ್ತು 1 ಅಪರಿಚಿತ ವ್ಯಕ್ತಿ ಎಂದು ತಿಳಿದು ಬಂದಿದೆ. 23 ಗೃಹ ರಕ್ಷಕರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಿರ್ಜಾಪುರದಲ್ಲಿ ಬಿಸಿಲಿನ ತಾಪ ಮಾರಕವಾಗಿದ್ದು, ಚುನಾವಣಾ ಕರ್ತವ್ಯದಲ್ಲಿದ್ದ 6 ಗೃಹರಕ್ಷಕ ದಳದ ಯೋಧರು ಸೇರಿದಂತೆ 13 ಮಂದಿ ಬಿಸಿಲ ತಾಪಕ್ಕೆ ಬಲಿಯಾಗಿದ್ದಾರೆ. ಮೃತರಲ್ಲಿ ಗುಮಾಸ್ತ, ಸ್ವೀಪರ್ ಹಾಗೂ ಮತ್ತೊಬ್ಬರು ಸೇರಿದ್ದಾರೆ.

ಆಸ್ಪತ್ರೆಗೆ ದಾಖಲು
ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಚುನಾವಣಾಧಿಕಾರಿಗಳ ತಂಡ ಟ್ರಾಮಾ ಸೆಂಟರ್ ತಲುಪಿ, ಅಲ್ಲಿ ಅಸ್ವಸ್ಥ ಗೊಂಡವನ್ನು ಆಸ್ಪತ್ರೆಗೆ ಸೇರಿಸುವ ಕೆಲಸವನ್ನು ಮಾಡಿದೆ. ಚುನಾವಣಾ ಕರ್ತವ್ಯಕ್ಕೆ ಬಂದಿದ್ದ 23 ಯೋಧರನ್ನು ವಿಭಾಗೀಯ ಆಸ್ಪತ್ರೆಯ ಟ್ರಾಮಾ ಸೆಂಟರ್ ಗೆ ದಾಖಲಿಸಲಾಗಿದೆ. ಇದರಲ್ಲಿ 20 ಗೃಹರಕ್ಷಕರು, ಒಬ್ಬರು ಅಗ್ನಿಶಾಮಕ, ಒಬ್ಬರು ಪಿಎಸಿ ಮತ್ತು ಒಬ್ಬರು ಪೊಲೀಸ್ ಸಿಬ್ಬಂದಿ ಸೇರಿದ್ದಾರೆರೆ.
ಮೃತರ ಕುಟುಂಬಸ್ಥರಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳುವಲ್ಲಿ ಆಡಳಿತ ನಿರತವಾಗಿದೆ. ಜ್ವರ ಮತ್ತು ಅಧಿಕ ರಕ್ತದೊತ್ತಡವು ಮಿರ್ಜಾಪುರದಲ್ಲಿ 13 ಚುನಾವಣಾ ಕಾರ್ಯಕರ್ತರ ಸಾವಿಗೆ ಕಾರಣವಾಗಬಹುದು ಎಂದು ವೈದ್ಯಕೀಯ ಕಾಲೇಜು ಪ್ರಾಂಶುಪಾಲ ರಾಜ್ ಬಹದ್ದೂರ್ ಕಮಲ್ ಹೇಳಿದ್ದಾರೆ, ಆದರೂ ನಿಖರವಾದ ಕಾರಣ ತಿಳಿದು ಬರಬೇಕಿದೆ.
ಇಬ್ಬರು ಯೋಧರ ಸ್ಥಿತಿ ಚಿಂತಾಜನಕವಾಗಿದೆ. ಯೋಧರ ಸಾವಿಗೆ ಸಂಬಂಧಿಸಿದಂತೆ ಅವರು ನಮ್ಮ ಬಳಿಗೆ ಬಂದಾಗ ಅವರಿಗೆ ವಿಪರೀತ ಜ್ವರ, ಶುಗರ್ ಲೆವೆಲ್ ಮತ್ತು ಬಿಪಿ ತುಂಬಾ ಹೆಚ್ಚಾಗಿದೆ ಎಂದು ಹೇಳಿದರು. ಅವರ ಸಾವಿಗೆ ಬ್ರೈನ್ ಸ್ಟ್ರೋಕ್ ಕೂಡ ಕಾರಣವಾಗಿರಬಹುದು ಎಂದು ವೈದ್ಯಕೀಯ ಕಾಲೇಜು ಪ್ರಾಂಶುಪಾಲ ತಿಳಿಸಿದ್ದಾರೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications