ದೂರದರ್ಶನದ ಫ್ರೀಡಿಶ್ ನಿಂದ ಉಚಿತವಾಗಿ 120 ವಾಹಿನಿಗಳು

Posted By:
Subscribe to Oneindia Kannada

ನವದೆಹಲಿ, ಜುಲೈ 15: ಪ್ರಸಾರಭಾರತಿಗೆ ಹೊಸ ರೂಪ ನೀಡುವ ನಿಟ್ಟಿನಲ್ಲಿ ಕಾರ್ಯ ಆರಂಭವಾಗಿದೆ. ದೂರದರ್ಶನದ ವಾಹಿನಿಗಳನ್ನು ಒಟ್ಟು ಸೇರಿಸಿ ಬಿಬಿಸಿ ರೀತಿಯ ಜಾಗತಿಕ ಪ್ರಸಾರ ಸಂಸ್ಥೆಯನ್ನು ರೂಪಿಸುವ ಕೆಲಸವನ್ನು ಪ್ರಸಾರ ಭಾರತಿ ಆರಂಭಿಸಿದೆ.

ಸರ್ಕಾರಿ ಸ್ವಾಮ್ಯದ 'ಡೈರೆಕ್ಟ್‌ ಟು ಹೋಮ್‌' (ಡಿಟಿಎಚ್‌) ಮೂಲಕ ದೊರೆಯುತ್ತಿರುವ ಉಚಿತ ವಾಹಿನಿಗಳ ಸಂಖ್ಯೆ ಶೀಘ್ರದಲ್ಲೇ 120ಕ್ಕೇರಲಿವೆ. ಚಂದಾದಾರರ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಡಿಟಿಎಚ್‌ ಮೂಲಕ ಪ್ರಸಾರವಾಗುವ ಕಾರ್ಯಕ್ರಮಗಳ ಗುಣಮಟ್ಟ ಉತ್ತಮಪಡಿಸುವತ್ತ ಪ್ರಸಾರ ಭಾರತಿ ಈಗ ಹೆಚ್ಚಿನ ಗಮನ ಹರಿಸುತ್ತಿದೆ.

120 DD direct plus new channels will come on freedish

ಈಗ ಇರುವ ವಾಹಿನಿಗಳ ಸಂಖ್ಯೆಗೆ ಮತ್ತೆ 40 ವಾಹಿನಿಗಳನ್ನು ಸೇರಿಸುವುದು ಈಗಿನ ಗುರಿ. ಅದು ಪೂರ್ಣಗೊಂಡ ಬಳಿಕ 250 ವಾಹಿನಿಗಳನ್ನು ನೀಡುವುದು ಮುಂದಿನ ಗುರಿ. ಇದಕ್ಕೆ ಹೆಚ್ಚುವರಿ ಟ್ರಾನ್ಸ್‌ಪಾಂಡರ್‌ಗಳ (ಸಂಕೇತಗಳನ್ನು ಬಿತ್ತರಿಸುವ ವ್ಯವಸ್ಥೆ) ಅಗತ್ಯ ಇದೆ.

'ಇದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ವಾಹಿನಿಗಳನ್ನು ಹೆಚ್ಚಿಸುವುದಕ್ಕೆ ಬೇಕಾದ ತಾಂತ್ರಿಕ ನೆರವಿಗೆ ಇಸ್ರೊ ಸಹಾಯ ಪಡೆದುಕೊಳ್ಳಲಾಗುವುದು' ಎಂದು ಪ್ರಸಾರ ಭಾರತಿ ಪ್ರಕಟಿಸಿದೆ. ಆದರೆ, ಕಳೆದ ಮೂರು ವರ್ಷಗಳಿಂದ ಪ್ರಸಾರ ಭಾರತಿ, ಇದೇ ರಾಗ ಹಾಡುತ್ತಿದೆ. 250ಕ್ಕೂ ಅಧಿಕ ವಾಹಿನಿಗಳು ಉಚಿತವಾಗಿ ನೀಡಲಾಗುವುದು, ಎರಡನೇ ಹಾಗೂ ಮೂರನೇ ಸ್ತರಗಳ ನಗರಗಳಿಗೆ ಫ್ರೀಡಿಶ್ ಡಿಟಿಎಚ್ ವಿಸ್ತರಣೆ ಮಾಡಲಾಗುವುದು ಎಂಬ ಹೇಳಿಕೆ ಇನ್ನೂ ಕಾರ್ಯಗತವಾಗಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
With the digitization panning Tier II and III cities, the effective meters Doordarshan is all set to increase the number of channels to about 120. The aim behind this is to increase the maximum gain customers, there is a large number of open channels to be added in DD Free Dish.
Please Wait while comments are loading...