Manmohan Singh: ಭಾರತೀಯರು ಎಂದೂ ಮರೆಯದ ಮನಮೋಹನ್ ಸಿಂಗ್ 12 ನುಡಿಮುತ್ತು ಇಲ್ಲಿವೆ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ವಯೋಸಹಜ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಅಲ್ಲದೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಗುರುವಾರ ರಾತ್ರಿ ದೆಹಲಿಯ ಏಮ್ಸ್‌ನಲ್ಲಿ ನಿಧನರಾಗಿದ್ದಾರೆ. ಮನಮೋಹನ್ ಸಿಂಗ್ ಅವರು ದೇಶದ ಆರ್ಥಿಕ ವ್ಯವಸ್ಥೆಗೆ ಹೊಸ ಮುನ್ನುಡಿ ಬರೆದವರು. ಅವರು ಮಾತನಾಡುತ್ತಿದದ್ದು ತುಂಬಾ ಕಡಿಮೆ. ಆದರೆ, ಅವರ ಮಾತಿಗೆ ಒಂದು ತೂಕವಿತ್ತು. ವಿಚಾರ ಮಾಡಿಯೇ ಅವರು ಮಾತನಾಡುತ್ತಿದ್ದರು. ಆರ್‌ಬಿಐ ಗವರ್ನರ್ ಆಗಿ, ಅರ್ಥಶಾಸ್ತ್ರಜ್ಞ, ಹಣಕಾಸು ಸಚಿವ ಹಾಗೂ ಪ್ರಧಾನಿಯಾಗಿ ಅವರು ದೇಶಕ್ಕೆ ಅಪಾರ ಕೊಡುಗೆಯನ್ನು ಕೊಟ್ಟಿದ್ದಾರೆ. ದೇಶ ಆರ್ಥಿಕ ಸಂಕಷ್ಟದಲ್ಲಿ ನಿಂತಾಗ ಭಾರತವನ್ನು ಕಾಪಾಡಲು ಇವರ ಆರ್ಥಿಕ ನೀತಿ ಸಹಕಾರಿಯಾಗಿದ್ದವು. 10 ವರ್ಷಗಳ ಕಾಲ ಅವರ ಆಡಳಿತದಲ್ಲಿ ಭಾರತ ಹಲವು ಪ್ರಮುಖ ಸಾಧನೆಗಳನ್ನು ಮಾಡಿತ್ತು.
ಅವರ ನುಡಿಮುತ್ತು ಹಾಗೂ ಪ್ರಮುಖ ಹೇಳಿಕೆಗಳು ಇಲ್ಲಿವೆ. ಅವರ ಅರ್ಥಪೂರ್ಣ ಮಾತುಗಳು ಇಂದಿಗೂ ಉಲ್ಲೇಖವಾಗುವುದಿದೆ.

* ಭಾರತವು ಅತ್ಯಂತ ಹೆಚ್ಚು ಬಡ ಜನರು ವಾಸಿಸುವ ಶ್ರೀಮಂತ ದೇಶವಾಗಿದೆ.
* ನಮ್ಮ ಜೀವನವೂ ಎಂದೂ ವಿರೋಧಗಳಿಂದ ಮುಕ್ತವಾಗಿ ಉಳಿದಿಲ್ಲ.
* ಯಾವುದಾದರೂ ಕೆಲಸವನ್ನು ಇನ್ನಷ್ಟು ಚೆನ್ನಾಗಿ ಮಾಡಬಹುದಿತ್ತು ಎಂದು ಒಪ್ಪಿಕೊಳ್ಳುವ ಮೊದಲ ವ್ಯಕ್ತಿ ನಾನೇ. ನಾವು ಸಾಧಿಸಿದ್ದಕ್ಕೆ ತೃಪ್ತರಾಗಬಾರದು. ಇನ್ನಷ್ಟು ಸಾಧನೆ ಮಾಡುವುದಕ್ಕೆ ಉತ್ತಮ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವುದಕ್ಕೆ ಯಾವಾಗಲೂ ಅವಕಾಶ ಇರುತ್ತದೆ.
* ನನಗೆ ಯಾವುದೇ ಸಮಯದಲ್ಲಿ ರಾಜೀನಾಮೆ ಕೊಡಬೇಕು ಎಂದು ಅನಿಸಿದ್ದೇ ಇಲ್ಲ. ನನ್ನ ಕೆಲಸವನ್ನು ನಾನು ಆನಂದಿಸಿದ್ದೇನೆ. ನಾನು ನನ್ನ ಕೆಲಸವನ್ನು ಪ್ರಾಮಾಣಿಕತೆಯಿಂದ ಹಾಗೂ ಕಾಳಜಿಯಿಂದ ಮಾಡಿದ್ದೇನೆ.
* ಇಂದಿನ ಮಾಧ್ಯಮಗಳು, ಇಲ್ಲ ಸಂಸತ್ತಿನಲ್ಲಿರುವ ವಿರೋಧ ಪಕ್ಷಗಳಿಗಿಂತ ಇತಿಹಾಸ ನನ್ನ ಬಗ್ಗೆ ಕರುಣೆ ತೋರಿಸುತ್ತದೆ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ.
* ಭವಿಷ್ಯ ಎನ್ನುವುದು ಸ್ವಾಭಾವಿಕವಾಗಿಯೇ ಅನಿಶ್ಚಿತತೆಯಿಂದ ಕೂಡಿದೆ.
* ಸಮಯ ಬದಲಾದಂತೆ ಎಲ್ಲವೂ ಸರಿ ಹೋಗುತ್ತದೆ. ಎಲ್ಲದಕ್ಕೂ ಕಾಲವೇ ಉತ್ತರ ಎನ್ನಲಾಗುತ್ತದೆ. ಆದರೆ, ದುರದೃಷ್ಟವಶಾತ್ ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ಆಗಿರುವ ಅಮಾನ್ಯೀಕರಣದ ಗಾಯಗಳು ಮಾಸದೆ ಉಳಿದಿವೆ.
* ಯಾವುದಾದರೂ ಕೆಲಸದಲ್ಲಿ ಇದಕ್ಕಿಂತ ಹೆಚ್ಚಿನದ್ದನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳುವ ಕೊನೆಯ ವ್ಯಕ್ತಿ ನಾನೇ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಹೇಳಿದ್ದರು. ಇದರ ಅರ್ಥ ಯಾವುದೇ ಕೆಲಸವನ್ನಾದರೂ, ಇನ್ನು ಇದಕ್ಕಿಂತಲೂ ಉತ್ತಮವಾಗಿ ಮಾಡಲು ಸಾಧ್ಯವೇ ಇಲ್ಲ ಎನ್ನುವ ವರೆಗೆ ನಾನು ಮಾಡುತ್ತೇನೆ ಎಂದು.
* ನಾನು ದುರ್ಬಲ ಪ್ರಧಾನಿ ಎನ್ನುವುದನ್ನು ನಾನು ನಂಬುವುದಿಲ್ಲ. ಬಿಜೆಪಿ ಮತ್ತು ಅವರ ಸಹಚರರು ತಮಗೆ ಇಷ್ಟವಾದದ್ದನ್ನು ಹೇಳಬಹುದು.
* ನಾವು ಜವಾಬ್ದಾರಿಯುತ ಪರಮಾಣು ಶಕ್ತಿ ಹೊಂದಿರುವ ದೇಶ ಎನ್ನುವ ಭರವಸೆಯನ್ನು ನಿಮಗೆ ಕೊಡುತ್ತೇನೆ.
* ಅಂತರರಾಷ್ಟ್ರೀಯ ಮಟ್ಟದಲ್ಲಿ ಒಂದಾಗಿ ಸಂಕಲ್ಪ ಮಾಡುವುದರಿಂದ ಭಯೋತ್ಪಾದನೆಗೆ ಕಡಿವಾಣ ಹಾಕಲು ಸಾಧ್ಯವಿದೆ.
* ಭಾರತದ ಪ್ರಧಾನ ಮಂತ್ರಿಯನ್ನು ಸುಲಭವಾಗಿ ವಜಾಗೊಳಿಸುವುದಕ್ಕೆ ಅವಕಾಶ ಇದೆ. ಇದಕ್ಕೆ ಸಂಸತ್ತು ಅವಿಶ್ವಾಸ ನಿರ್ಣಯ ಅಂಗೀಕರಿಸಬೇಕಷ್ಟೇ.












Click it and Unblock the Notifications