ಕ್ಯಾನ್ಸರ್ ರೋಗಿಗಳ ನಿಟ್ಟುಸಿರು: ಅಗತ್ಯ ಔಷಧ ಅಗ್ಗ
ನವದೆಹಲಿ, ಮೇ. 6: ಕ್ಯಾನ್ಸರ್ ರೋಗಿಗಳ ಹಿತ ಕಾಯಲು ಮುಂದಾಗಿರುವ ಕೇಂದ್ರ ಔಷಧ ದರ ನಿಯಂತ್ರಣ ಪ್ರಾಧಿಕಾರ ಸುಮಾರು 12 ಔಷಧಗಳ ದರ ಇಳಿಕೆಗೆ ಮುಂದಾಗಿದೆ.
ಕ್ಯಾನ್ಸರ್ ಗೆ ಸಂಬಂಧಿಸಿದ 12 ಔಷಧಗಳನ್ನು 'ಅಗತ್ಯ ಔಷಧಗಳ ರಾಷ್ಟ್ರೀಯ ಪಟ್ಟಿ' ಯಲ್ಲಿ ಸೇರಿಸಲು ಶಿಫಾರಸು ಮಾಡಿದೆ. ಲ್ಯುಕೇಮಿಯಾ, ಸ್ತನ ಕ್ಯಾನ್ಸರ್ ಗೆ ಸಂಬಂಧಿಸಿದ 12 ಔಷಧಗಳ ದರದಲ್ಲಿ ಭಾರಿ ಪ್ರಮಾಣದ ಇಳಿಕೆಯಾಗಲಿದೆ.[ಓಕೆ ಎಂದ ಕೇಂದ್ರ: ಅಗತ್ಯ ಔಷಧಗಳು ಕೊಂಚ ತುಟ್ಟಿ]

ಮೂರು ಸಾವಿರದಿಂದ 8 ಲಕ್ಷ ರೂ ವರೆಗೆ ದರವಿರುವ ಔಷಧಿಗಳು ಅಗ್ಗವಾಗಲಿದೆ. 2012 ರ ಔಷಧ ನಿಯಂತ್ರಣ ಕಾಯ್ದೆ ಅನ್ವಯ ಪಟ್ಟಿಯಲ್ಲಿ ಬರುವ ಎಲ್ಲ ಔಷಧಗಳ ಮೇಲೆ ಸರ್ಕಾರ ತನ್ನ ಹಿಡಿತ ಸಾಧಿಸಬಹುದು.
ಆದರೆ ಈ ಕ್ರಮವನ್ನು ಉದ್ಯಮಿಗಳು ತೀವ್ರವಾಗಿ ವಿರೋಧಿಸಿದ್ದಾರೆ. ಹೀಗೆ ಮಾಡಿದರೆ ದೀರ್ಘಾವಧಿಗೆ ನಿಗದಿತ ಔಷಧಗಳ ಲಭ್ಯತೆ ಕಡಿಮೆಯಾಗುತ್ತದೆ. ಔಷಧ ಸಂಗ್ರಹಕ್ಕೂ ಅಡಚಣೆಯಾಗುತ್ತದೆ ಎಂದು ಹೇಳಿದ್ದಾರೆ.[ಮನೆಯಲ್ಲೇ ಎಚ್ಐವಿ ಸೋಂಕು ಪರೀಕ್ಷೆ ಮಾಡಿಕೊಳ್ಳಿ]
ಏಪ್ರಿಲ್ 1 ರಿಂದ ಕೆಲ ಅಗತ್ಯ ಔಷಧಗಳ ಬೆಲೆ ಏರಿಕೆಯಾಗಿತ್ತು. ಮಧುಮೇಹ, ಹೆಪಟೈಟಿಸ್ ಮತ್ತು ಕ್ಯಾನ್ಸರ್ ಔಷಧ ಸೇರಿದಂತೆ ಒಟ್ಟು 509 ಔಷಧಗಳ ಬೆಲೆಯನ್ನು ಶೇ.3.84ರಷ್ಟು ಹೆಚ್ಚಳ ಮಾಡಲು ಔಷಧ ಕಂಪನಿಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಆದರೆ ಇದೀಗ ಕ್ಯಾನ್ಸರ್ ಗೆ ಸಂಬಂಧಿತ ಔಷಧಗಳ ದರ ಇಳಿಕೆಗೆ ಮುಂದಾಗಿರುವುದು ರೋಗಿಗಳಲ್ಲಿ ಕೊಂಚ ಸಮಾಧಾನ ತಂದಿದೆ.












Click it and Unblock the Notifications