ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕೊರೊನಾ ತಗಲಿದ್ದೆಷ್ಟು ಜನರಿಗೆ; ಸೋಮವಾರದ ಅಂಕಿ-ಸಂಖ್ಯೆ

|
Google Oneindia Kannada News

ನವದೆಹಲಿ, ಮಾರ್ಚ್.16: ಕೊರೊನಾ ವೈರಸ್ ಎಂಬ ಕೀಚಕನ ಕೈಗೆ ಸಿಲುಕಿ ವಿಶ್ವವೇ ನಲುಗಿ ಹೋಗಿದೆ. ಭಾರತವೂ ಕೂಡಾ ಮಾರಕ ಸೋಂಕಿಗೆ ಬೆಚ್ಚಿ ಬಿದ್ದಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ ಈಗಾಗಲೇ ಶತಕದ ಗಡಿ ದಾಟಿದೆ.

ಸೋಮವಾರದ ಅಂಕಿ-ಅಂಶಗಳ ಪ್ರಕಾರ 114ಕ್ಕೂ ಅಧಿಕ ಮಂದಿಗೆ ಕೊರೊನಾ ವೈರಸ್ ಹರಡಿರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ ವಾಲ್ ಮಾಹಿತಿ ನೀಡಿದ್ದಾರೆ.

ಪೇಶೆಂಟ್ ನಂ.31; ದೇಶಾದ್ಯಂತ ಕೊರೊನಾ ವೈರಸ್ ಹರಡಲು ಈತನೇ ಕಾರಣ!ಪೇಶೆಂಟ್ ನಂ.31; ದೇಶಾದ್ಯಂತ ಕೊರೊನಾ ವೈರಸ್ ಹರಡಲು ಈತನೇ ಕಾರಣ!

ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಸೋಮವಾರ ನಾಲ್ಕು ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೂ ಸೋಂಕಿತರ ಸಂಖ್ಯೆಯು 114ಕ್ಕೆ ಏರಿಕೆಯಾಗಿದೆ. ಈ ಪೈಕಿ ಇಬ್ಬರು ಮೃತಪಟ್ಟಿದ್ದರೆ, 13 ಮಂದಿ ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಲಾವ್ ಅಗರ್ ವಾಲ್ ತಿಳಿಸಿದ್ದಾರೆ.

ಭಾರತದಲ್ಲಿ ನಾಲ್ಕು ಕೊರೊನಾ ಸೋಂಕಿತ ಕೇಸ್ ಪತ್ತೆ

ಭಾರತದಲ್ಲಿ ನಾಲ್ಕು ಕೊರೊನಾ ಸೋಂಕಿತ ಕೇಸ್ ಪತ್ತೆ

ದೇಶದ ನಾಲ್ಕು ರಾಜ್ಯಗಳಲ್ಲಿ ಸೋಮವಾರ ನಾಲ್ಕು ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಒಡಿಶಾ, ಜಮ್ಮು ಮತ್ತು ಕಾಶ್ಮೀರ, ಲಡಾಕ್, ಕೇರಳದಲ್ಲಿ ಒಂದೊಂದು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ ಎಂದು ಲಾವ್ ಅಗರ್ ವಾಲ್ ಮಾಹಿತಿ ನೀಡಿದ್ದಾರೆ.

ಇರಾನ್ ನಿಂದ ಭಾರತಕ್ಕೆ ಆಗಮಿಸಿದ ನಾಲ್ಕನೇ ತಂಡ

ಇರಾನ್ ನಿಂದ ಭಾರತಕ್ಕೆ ಆಗಮಿಸಿದ ನಾಲ್ಕನೇ ತಂಡ

ಕೊರೊನಾ ವೈರಸ್ ಸೋಂಕಿಗೆ ತತ್ತರಿಸಿದ ಇರಾನ್ ರಾಷ್ಟ್ರದಲ್ಲಿ ಸಿಲುಕಿದ್ದ ಭಾರತೀಯರ ನಾಲ್ಕನೇ ತಂಡವನ್ನು ಸೋಮವಾರ ಭಾರತಕ್ಕೆ ವಾಪಸ್ ಕರೆ ತರಲಾಯಿತು. 53 ಜನರನ್ನೊಳಗೊಂಡ ತಂಡವನ್ನು ಜೈಸ್ಮಲೇರ್ ಪ್ರದೇಶದಲ್ಲಿ ಭಾರತೀಯ ಸೇನಾಪಡೆಯ ದಿಗ್ಬಂಧನದಲ್ಲಿ ಇರಿಸಲಾಗಿದೆ.

ಕರ್ನಾಟಕ, ತೆಲಂಗಾಣದಲ್ಲೂ ಸೋಂಕಿತ ಪ್ರಕರಣ ಪತ್ತೆ

ಕರ್ನಾಟಕ, ತೆಲಂಗಾಣದಲ್ಲೂ ಸೋಂಕಿತ ಪ್ರಕರಣ ಪತ್ತೆ

ಇನ್ನು, ದಕ್ಷಿಣ ಭಾರತದ ತೆಲಂಗಾಣ ಮತ್ತು ಕರ್ನಾಟಕದಲ್ಲೂ ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಕರ್ನಾಟಕದಲ್ಲಿ ಮತ್ತೊಬ್ಬ ವ್ಯಕ್ತಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆಯು 8ಕ್ಕೆ ಏರಿಕೆಯಾಗಿದೆ. ಇತ್ತ ತೆಲಂಗಾಣದಲ್ಲಿ ಇಂದು ಮತ್ತೊಂದು ಸೋಂಕಿತ ಪ್ರಕರಣದ ಜೊತೆಗೆ ಸೋಂಕಿತರ ಸಂಖ್ಯೆಯು ನಾಲ್ಕಕ್ಕೆ ಏರಿಕೆಯಾಗಿದೆ.

ಕೊರೊನಾ ವೈರಸ್ ಸಹಾಯವಾಣಿ ಪರಿಚಯಿಸಿದ ಸರ್ಕಾರ

ಕೊರೊನಾ ವೈರಸ್ ಸಹಾಯವಾಣಿ ಪರಿಚಯಿಸಿದ ಸರ್ಕಾರ

ಭಾರತದಲ್ಲಿ ಕೊರೊನಾ ವೈರಸ್ ಮಹಾಮಾರಿಯ ಹಾವಳಿ ಹೆಚ್ಚಾಗುತ್ತಿದ್ದಂತೆ ಕೇಂದ್ರ ಆರೋಗ್ಯ ಸಚಿವಾಲಯವು ಹೊಸದಾಗಿ ಸಹಾಯವಾಣಿಯನ್ನು ಆರಂಭಿಸಿದೆ. ಈಗಾಗಲೇ ಜಾರಿಯಲ್ಲಿರುವ ಸಹಾಯವಾಣಿ 01123978046ರ ಜೊತೆಗೆ 1075 ಎಂಬ ಹೊಸ ಸಹಾಯವಾಣಿಯನ್ನು ಪರಿಚಯಿಸಿದೆ. ಈ ಸಹಾಯವಾಣಿಯು ದಿನದ 24ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.

English summary
114 Coronavirus Infected Cases Found At India Till Monday Evening, Says Health Ministry Joint Secretary Lav Aggarwal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X