ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ರಿಪುರಾ ಸಂಪುಟ ರಚನೆ: 11 ಶಾಸಕರಿಂದ ಪ್ರಮಾಣ ವಚನ ಸ್ವೀಕಾರ

|
Google Oneindia Kannada News

ಅಗರ್ತಲಾ, ಮೇ 16; ತ್ರಿಪುರದ ನೂತನ ಮುಖ್ಯಮಂತ್ರಿ ಮಾಣಿಕ್‌ ಸಾಹ ಆಯ್ಕೆಯಾದ ಬೆನ್ನಲ್ಲೇ , ಒಟ್ಟು 11 ಮಂದಿ ಶಾಸಕರು ಸೋಮವಾರ ಅಗರ್ತಲಾದ ರಾಜಭವನದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮುಖ್ಯಮಂತ್ರಿ ಮಾಣಿಕ್ ಸಾಹಾ, ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಎಸ್‌ಎನ್ ಆರ್ಯ ಅವರು ಸಂಪುಟ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ತ್ರಿಪುರದ ನೂತನ ಸಿಎಂ ಡಾ. ಮಾಣಿಕ್ ಸಾಹಾ ಪರಿಚಯತ್ರಿಪುರದ ನೂತನ ಸಿಎಂ ಡಾ. ಮಾಣಿಕ್ ಸಾಹಾ ಪರಿಚಯ

ಇದರಲ್ಲಿ ಬಿಜೆಪಿಯಿಂದ 9 ಶಾಸಕರು ಮತ್ತು ಇಂಡಿಜೆನಸ್‌ ಪೀಪಲ್ಸ್ ಫ್ರಂಟ್‌ ಆಫ್ ತ್ರಿಪುರ (IPFT)ಪಕ್ಷದ ಇಬ್ಬರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಭಾನುವಾರ ಮಾಣಿಕ್ ಸಾಹ ತ್ರಿಪುರಾದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

11 Tripura MLAs in Manik Saha cabinet takes oath

ಸಂಪುಟಕ್ಕೆ ಸೇರಿದ 11 ಸಚಿವರು
ಬಿಜೆಪಿಯಿಂದ ಜಿಷ್ಣು ದೇವ್ ವರ್ಮಾ(ಉಪಮುಖ್ಯಮಂತ್ರಿ, ರತನ್ ಲಾಲ್ ನಾಥ್, ಪ್ರಣಜಿತ್ ಸಿಂಘಾ ರಾಯ್, ಮನೋಜ್ ಕಾಂತಿ ದೇಬ್, ಸಂತಾನಾ ಚಕ್ಮಾ, ರಾಮ್ ಪ್ರಸಾದ್ ಪಾಲ್, ಭಗಬನ್ ಚಂದ್ರ ದಾಸ್, ಸುಶಾಂತ ಚೌಧರಿ, ರಾಮಪಾದ ಜಮಾತಿಯಾ ಮತ್ತು IPFT ಯಿಂದ ನರೇಂದ್ರ ಚಂದ್ರ ದೆಬ್ಬರ್ಮಾ ಮತ್ತು ಪ್ರೇಮ್ ಕುಮಾರ್ ರಿಯಾಂಗ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ವಿಧಾನ ಸಭೆ ಚುನಾವಣೆಗೆ ಒಂದು ವರ್ಷವಿರುವಾಗ ಸಿಎಂ ಬದಲಾವಣೆ
ವಿಧಾನ ಸಭೆ ಚುನಾವಣೆಗೆ ಕೇವಲ ಒಂದು ವರ್ಷ ಇರುವಾಗ ಬಿಜೆಪಿ ನಾಯಕತ್ವ ಬದಲಾವಣೆ ಮಾಡುವ ನಿರ್ಧಾರ ತೆಗೆದುಕೊಂಡಿದೆ. ಈ ಮೂಲಕ ಚುನಾವಣೆ ನಡೆಯುವ ರಾಜ್ಯದಲ್ಲಿ ನಾಯಕನ ಬದಲಾವಣೆ ಮಾಡಿ ತನ್ನ ಹಳೆಯ ಮಂತ್ರವನ್ನು ಜಪಿಸಿದೆ.

11 Tripura MLAs in Manik Saha cabinet takes oath

ಆದರೆ ಕಳೆದ ಎರಡು ತಿಂಗಳ ಹಿಂದೆಯಷ್ಟೇ ರಾಜ್ಯಸಭೆಗೆ ಆಯ್ಕೆಯಾಗಿರುವ ಮಾಣಿಕ್ ಸಾಹರನ್ನು ಮುಖ್ಯಮಂತ್ರಿಯನ್ನಾಗಿ ಘೋಷಿಸಿದ್ದು, ತ್ರಿಪುರದ ಬಿಜೆಪಿ ಘಟಕಕ್ಕೆ ಆಶ್ಚರ್ಯವನ್ನು ಉಂಟುಮಾಡಿದೆ. ಸಾಹ ರಾಜ್ಯಸಭಾ ಸಂಸದ ಮತ್ತು ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿದ್ದಾರೆ. ರಾಜ್ಯದಲ್ಲಿ ಮುಂದಿನ ವರ್ಷ ಮಾರ್ಚ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ.

ಸಾಹ 2016ರಲ್ಲಿ ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರಿದ್ದರು. 2020ರಲ್ಲಿ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ನಂತರ ಈ ವರ್ಷದ ಮಾರ್ಚ್‌ನಲ್ಲಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು.

(ಒನ್ಇಂಡಿಯಾ ಸುದ್ದಿ)

English summary
A total of 11 MLAs in Manik Saha's cabinet took oath on Monday at Raj Bhavan in Agartala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X