ಹಿಮಪಾತದಲ್ಲಿ ವರ್ಷದ ಮಗು ಸೇರಿದಂತೆ 11 ಜನರ ಸಾವು
ಶ್ರೀನಗರ, ಜನವರಿ 6 : ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಬಳಿ ವಾಹನ ಮೇಲೆ ಹಿಮ ಕುಸಿದು ಬಿದ್ದ ಪರಿಣಾಮ ಒಂದು ವರ್ಷದ ಹಸುಳೆ ಸೇರಿದಂತೆ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕುಪ್ವಾರ ಜಿಲ್ಲೆ ಖೂನಿ ನಲ್ಲಾಹ್ ಎಂಬ ಪ್ರದೇಶದಲ್ಲಿ ಶುಕ್ರವಾರ ಪ್ರಯಾಣಿಕ ವಾಹನದ ಮೇಲೆ ಹಿಮ ಕುಸಿದು ಬಿದ್ದಿತ್ತು. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿ, 7 ಮಂದಿ ನಾಪತ್ತೆಯಾಗಿದ್ದರು. ಭೀಕರ ಹಿಮಪಾತದಲ್ಲಿ ನಾಪತ್ತೆಯಾಗಿದ್ದ 6 ಮಂದಿಯ ಮೃತದೇಹಗಳನ್ನು ಭದ್ರತಾ ಸಿಬ್ಬಂದಿ ಶನಿವಾರ ಹೊರತೆಗೆದಿದ್ದಾರೆ.
ಕುಪ್ವಾರಾದಿಂದ ಕಾರ್ನಾಗೆ ಟಾಟಾ ಸುಮೋನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಂಗಧಾರ್ ಪ್ರದೇಶದಲ್ಲಿ ಶುಕ್ರವಾರ 4 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ. ಅದೇ ಪ್ರದೇಶದಲ್ಲಿ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಇಂಜಿನಿಯರ್ ಅವರನ್ನು ರಕ್ಷಿಸಲಾಗಿತ್ತು.

ಆದರೆ, ಸ್ಥಳದಲ್ಲಿ ಯಾವುದೇ ವೈದ್ಯರು ಲಭ್ಯವಿಲ್ಲದ ಕಾರಣ ಅವರನ್ನು ಉಳಿಸಿಕೊಳ್ಳಲು ಆಗಿಲ್ಲವೆಂದು ಮೂಲಗಳು ತಿಳಿಸಿವೆ.
ಮೃತಪಟ್ಟವರ ಪೈಕಿ ಇಂಜಿನಿಯರ್ ಮಂಗಳ ಪ್ರಸಾದ್ ಸಿಂಗ್ ಎನ್ನುವರ ದೇಹ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನುಳಿದವರಿಗಾಗಿ ಪೋಲೀಸ್, ಸೈನ್ಯ ಹಾಗೂ ರಾಜ್ಯ ವಿಪತ್ತು ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.












Click it and Unblock the Notifications