ಹೊಸ 200 ರುಪಾಯಿಯ ವಿಶೇಷಗಳೇನು ಗೊತ್ತೆ? ಇಲ್ಲಿವೆ 10 ಅಂಶ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 24: ಇನ್ನೂರು ರುಪಾಯಿಯ ಹೊಸ ನೋಟು ಗಣೇಶ ಚತುರ್ಥಿಯಿಂದ ಅಂದರೆ ಅಗಸ್ಟ್ ಇಪ್ಪತ್ತೈದರಿಂದ ಚಾಲ್ತಿಗೆ ಬರಲಿದೆ ಅನ್ನೋದನ್ನು ರಿಸರ್ವ್ ಬ್ಯಾಂಕ್ ಇಂಡಿಯಾ ಘೋಷಿಸಿದೆ. ಐವತ್ತು ರುಪಾಯಿಯ ಹೊಸ ನೋಟು ಪರಿಚಯಿಸುವ ಘೋಷಣೆ ನಂತರ ಪತ್ರಿಕಾ ಹೇಳಿಕೆ ಮೂಲಕ ಇನ್ನೂರು ರುಪಾಯಿ ನೋಟು ಬಿಡುಗಡೆ ದಿನಾಂಕವನ್ನು ಬಹಿರಂಗ ಪಡಿಸಲಾಗಿದೆ.

ಕಳೆದ ವರ್ಷದ ನವೆಂಬರ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅಪನಗದೀಕರಣದ ಘೋಷಣೆ ಮಾಡಿದ ನಂತರ ಪರಿಚಯಿಸುತ್ತಿರುವ ನಾಲ್ಕನೇ ಹೊಸ ನೋಟು ಇದು. ತೆರಿಗೆ ಕದಿಯುವವರಿಗೆ ಹೊಡೆತ ನೀಡುವ ಉದ್ದೇಶದಿಂದಲೇ ರಾತ್ರೋರಾತ್ರಿ ಹಳೆಯ ಸಾವಿರ ಹಾಗೂ ಐನೂರು ರುಪಾಯಿ ನೋಟುಗಳನ್ನು ನಿಷೇಧಿಸಿ, ಆದೇಶ ಹೊರಡಿಸಲಾಗಿತ್ತು.

ಹೊಸ 200 ರೂ. ನೋಟು ನಾಳೆಯಿಂದ ಚಾಲ್ತಿಗೆ

ಎರಡು ಸಾವಿರ ಹಾಗೂ ಐನೂರು ರುಪಾಯಿ ನೋಟುಗಳನ್ನು ಆರ್ಥಿಕ ವ್ಯವಸ್ಥೆಯೊಳಗೆ ತಂದಿದ್ದರಿಂದ ಚಿಲ್ಲರೆ ದೊರೆಯದೆ ಸಮಸ್ಯೆ ಎದುರಾಗಿತ್ತು. ಈ ಬಗ್ಗೆ ದೇಶದಾದ್ಯಂತ ವಿವಿಧ ವಲಯದಿಂದ ಆಕ್ಷೇಪ ಕೂಡ ಕೇಳಿಬಂದಿತ್ತು. ಆದ್ದರಿಂದ ಇದೀಗ ಇನ್ನೂರು ರುಪಾಯಿ ನೋಟುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪರಿಚಯಿಸಲಾಗುತ್ತದೆ. ಈ ನೋಟಿನ ವಿಶೇಷತೆಗಳೇನು ಎಂದು ತಿಳಿಸುವ ಪ್ರಯತ್ನವಿದು.

ನೋಟಿನ ಅಳತೆ

ನೋಟಿನ ಅಳತೆ

ಆಗಸ್ಟ್ ಇಪ್ಪತ್ತೈದರಿಂದ ಜನರ ಕಿಸೆ ಸೇರಲಿರುವ ಹೊಸ ಇನ್ನೂರು ರುಪಾಯಿ ನೋಟಿನ ಅಳತೆ 66 ಮಿ.ಮೀ X 146 ಮಿ.ಮೀ

ಢಾಳಾದ ಹಳದಿ ಬಣ್ಣ

ಢಾಳಾದ ಹಳದಿ ಬಣ್ಣ

ಹೊಸದಾಗಿ ಚಲಾವಣೆಗೆ ಬರಲಿರುವ ಇನ್ನೂರು ರುಪಾಯಿ ನೋಟಿನ ಬಣ್ಣ ಢಾಳಾದ ಹಳದಿ.

ಸಾಂಸ್ಕೃತಿಕ ಪರಂಪರೆಯ ದ್ಯೋತಕ

ಸಾಂಸ್ಕೃತಿಕ ಪರಂಪರೆಯ ದ್ಯೋತಕ

ಭಾರತದ ಸಾಂಸ್ಕೃತಿಕ ಪರಂಪರೆಯ ದ್ಯೋತಕವಾದ ಸಾಂಚಿ ಸ್ತೂಪವು ಈ ನೋಟಿನಲ್ಲಿ ಮುದ್ರಿಸಲಾಗಿದ್ದು, ಇದರ ಜತೆಗೆ ಅಶೋಕ ಸ್ತಂಭವೂ ಇರಲಿದೆ.

ಗಾಂಧಿ ಚಿತ್ರ, ಬಣ್ಣ ಬದಲಾಯಿಸುವ ಶಾಯಿ

ಗಾಂಧಿ ಚಿತ್ರ, ಬಣ್ಣ ಬದಲಾಯಿಸುವ ಶಾಯಿ

ನೋಟಿನ ಮಧ್ಯಭಾಗದಲ್ಲಿ ಗಾಂಧೀಜಿ ಚಿತ್ರವಿದ್ದು, ಅದರ ಪಕ್ಕದಲ್ಲೇ ಇನ್ನೂರು ಎಂಬ ಸಂಖ್ಯೆಯನ್ನು ಬಣ್ಣ ಬದಲಾಗುವ ಶಾಯಿ ಬಳಸಿ, ಹಾಕಲಾಗಿದೆ.

'ಭಾರತ್' ಮತ್ತು ಆರ್ ಬಿಐ

'ಭಾರತ್' ಮತ್ತು ಆರ್ ಬಿಐ

ಭದ್ರತಾ ಗೆರೆಯ ಮೇಲೆ 'ಭಾರತ್' ಮತ್ತು ಆರ್ ಬಿಐ ಎಂದಿದೆ. ಈ ಗೆರೆಯ ಬಣ್ಣ ಹಸಿರಿನಿಂದ ನೀಲಿ ಬಣ್ಣಕ್ಕೆ ಬದಲಾಗುತ್ತದೆ.

ವಿಶೇಷ ಗುರುತು

ವಿಶೇಷ ಗುರುತು

ಅಂಧರು ನೋಟು ಗುರುತಿಸಲು ಅನುಕೂಲವಾಗುವಂತೆ ಮಹಾತ್ಮ ಗಾಂಧಿ ಚಿತ್ರ ಹಾಗು ಆಶೋಕ ಸ್ತಂಭದ ಗುರುತು ಸ್ವಲ್ಪ ಉಬ್ಬಿದೆ. ಜತೆಗೆ ಅದರ ಪಕ್ಕ ಕೆಲವು ವಿಶೇಷ ಗುರುತುಗಳಿವೆ.

ಸ್ವಚ್ಛ ಭಾರತ ಅಭಿಯಾನ

ಸ್ವಚ್ಛ ಭಾರತ ಅಭಿಯಾನ

ಪ್ರಧಾನಿ ಮಂತ್ರಿಗಳ ಸ್ವಚ್ಛತಾ ಅಭಿಯಾನದ ಉದ್ದೇಶವನ್ನು ಪ್ರತಿನಿಧಿಸುವ ಸ್ವಚ್ಛ ಭಾರತ ಅಭಿಯಾನದ ಗುರುತನ್ನು ಈ ನೋಟು ಒಳಗೊಂಡಿದೆ.

ಪ್ರಧಾನಿ ಕಚೇರಿಯಿಂದ ಒಪ್ಪಿಗೆ

ಪ್ರಧಾನಿ ಕಚೇರಿಯಿಂದ ಒಪ್ಪಿಗೆ

ಇನ್ನೂರು ರುಪಾಯಿ ನೋಟನ್ನು ಹೊರತರುವ ಯೋಜನೆಯನ್ನು ಆರ್ಥಿಕ ಸಚಿವಾಲಯ ಅನುಮೋದಿಸಿ, ಒಪ್ಪಿಗೆ ನೀಡಿದೆ. ಅಂದಹಾಗೆ ಈ ನೋಟಿನ ರೂಪರೇಖೆಗೆ ಪ್ರಧಾನಮಂತ್ರಿಗಳ ಕಚೇರಿಯಿಂದಲೇ ಒಪ್ಪಿಗೆ ಸೂಚಿಸಲಾಗಿದೆ.

ಚಿಲ್ಲರೆಗೆ ಸಮಸ್ಯೆ

ಚಿಲ್ಲರೆಗೆ ಸಮಸ್ಯೆ

ಈ ಹಿಂದೆ ಎರಡು ಸಾವಿರ ಹಾಗೂ ಐನೂರು ರುಪಾಯಿ ನೋಟುಗಳನ್ನು ಬಿಡುಗಡೆ ಮಾಡಿದಾಗ ಚಿಲ್ಲರೆಗೆ ಸಮಸ್ಯೆ ಉದ್ಭವಿಸಿ ದೇಶದ ಲಕ್ಷಾಂತರ ಮಂದಿ ಸಮಸ್ಯೆ ಎದುರಿಸುವಂತಾಗಿತ್ತು.

ಸಮಸ್ಯೆ ನಿವಾರಣೆ

ಸಮಸ್ಯೆ ನಿವಾರಣೆ

ಎರಡು ಸಾವಿರ ರುಪಾಯಿ ನೋಟಿನ ಬಿಡುಗಡೆಯಿಂದ ಎದುರಾಗಿದ್ದ ಸಮಸ್ಯೆಗಳು ಇದೀಗ ಇನ್ನೂರು ರುಪಾಯಿ ನೋಟು ಬಿಡುಗಡೆ ಆಗುವ ಮೂಲಕ ನಿವಾರಣೆ ಆಗಲಿದೆ ಎಂಬುದು ಸರಕಾರದ ಭರವಸೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
New 200 rupee note will be in circulation from August 25th. Here is the 10 special feature of new note.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X