ಮಥುರಾದಲ್ಲಿ ಕಾರು ಕಾಲುವೆಗೆ ಉರುಳಿ 10 ಮಂದಿ ಸಾವು
ಮಥುರಾ(ಉತ್ತರ ಪ್ರದೇಶ), ಜೂನ್ 11 : ಇಲ್ಲಿನ ಮಕೆರಾ ಪ್ರದೇಶದಲ್ಲಿ ಚಲಿಸುತ್ತಿದ್ದ ಕಾರು ಕಾಲುವೆಗೆ ಬಿದ್ದ ಪರಿಣಾಮ ಹತ್ತು ಮಂದಿ ಮೃತಪಟ್ಟ ಘಟನೆ ಇಂದು (ಭಾನುವಾರ) ಬೆಳಗ್ಗೆ ನಡೆದಿದೆ.
ಯಾತ್ರಿಕರು ಕಾರಿನಲ್ಲಿ ಮೆಹಂದಿಪುರ್ ಬಾಲಾಜಿ ದೇವಸ್ಥಾನದಿಂದ ಮರಳುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿದೆ ಎಂದು ಪೊಲೀಸ್ ಸೂಪರಿಡೆಂಟ್ ಆದಿತ್ಯ ಶುಕ್ಲಾ ತಿಳಿಸಿದ್ದಾರೆ.

ಎಂಟು ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಇನ್ನಿಬ್ಬರ ಶವ ಪತ್ತೆಗಾಗಿ ಹುಡುಕಾಟ ನಡೆಯುತ್ತಿದೆ. ಘಟನೆ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಶುಕ್ಲಾ ತಿಳಿಸಿದ್ದಾರೆ.
#UttarPradesh: Nine killed after a vehicle fell into a river in Mathura, in early morning hours. pic.twitter.com/PiyNrB3YeD
— ANI UP (@ANINewsUP) June 11, 2017












Click it and Unblock the Notifications