ವಿಜಯವಾಡ: ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

Posted By:
Subscribe to Oneindia Kannada

ವಿಜಯವಾಡ, ಜ.25: ಹೈದರಾಬಾದಿನ ಕೇಂದ್ರ ವಿಶ್ವವಿದ್ಯಾಲಯದ ವಿದ್ಯಾರ್ಥಿ ರೋಹಿತ್ ಸಾವಿನ ಸೂತಕ ಆರುವ ಮುನ್ನವೇ ವಿಜಯವಾಡದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ಸುದ್ದಿ ಬಂದಿದೆ. ಇಂಜಿನಿಯರಿಂಗ್ ವಿದ್ಯಾರ್ಥಿ ಪ್ರೇಮ್ ಅವರು ಹಲವು ಸಬ್ಜೆಕ್ಟ್ ಗಳನ್ನು ಉಳಿಸಿಕೊಂಡಿದ್ದು, ಪಾಸ್ ಆಗಲು ಸಾಧ್ಯವಾಗದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ಪುವಲ್ಲ ಪ್ರೇಮ್ ಪ್ರಸಾದ್ ಅವರು ನಾಲ್ಕನೇ ವರ್ಷದ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ಕೋರ್ಸ್ ಓದುತ್ತಿದ್ದರು ಮೂರು ವರ್ಷಗಳಲ್ಲಿ 12 ವಿಷಯಗಳಲ್ಲಿ ನಾಲ್ಕು ವಿಷಯಗಳಲ್ಲಿ ಮಾತ್ರ ಪಾಸಾಗಿದ್ದರು. [3 ವಿದ್ಯಾರ್ಥಿನಿಯರನ್ನು ಬಲಿ ಪಡೆದ ಕಾಲೇಜಿಗೆ ಬೀಗ]

Vijayawada: 22-yr-old Dalit Engineering student hangs himself

11 ಸಬ್ಜೆಕ್ಟ್ ಬ್ಯಾಕ್ ಉಳಿಸಿಕೊಂಡಿದ್ದ ಪ್ರಸಾದ್ ಅವರು ಅವಮಾನ ತಾಳಲಾರದೆ ಹಾಸ್ಟೆಲ್ ರೂಮಿನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಯಾವುದೇ ಸೂಸೈಡ್ ನೋಟ್ ಲಭ್ಯವಾಗಿಲ್ಲ.

ಆದರೆ, ಕಾಲೇಜು ಆಡಳಿತ ಮಂಡಳಿ ಹೇಳುವುದೇ ಬೇರೆ. ನೋವಾ ಕಾಲೇಜಿನ ನಿರ್ದೇಶಕ ಜೆ ಶ್ರೀನಿವಾಸ ರಾವ್ ಅವರು ಪ್ರತಿಕ್ರಿಯಿಸಿ, ವಿದ್ಯಾರ್ಥಿ ಪ್ರಸಾದ್ ಕಾಲೇಜಿಗೆ ಸರಿಯಾಗಿ ಬರುತ್ತಿರಲಿಲ್ಲ, ಸುಮಾರು ಸಬ್ಜೆಕ್ಟ್ ಬ್ಯಾಕ್ ಲಾಗ್ ಇತ್ತು. ಎರಡು ದಿನಗಳ ಹಿಂದೆ ಅವರ ಸೋದರನ ಜೊತೆ ಚೆನ್ನಾಗಿ ಮಾತನಾಡಿಕೊಂಡಿದ್ದ. ಕಳೆದ ಎರಡು ವರ್ಷಗಳಲ್ಲಿ ತಂದೆ ತಾಯಿ ಇಬ್ಬರನ್ನು ಕಳೆದುಕೊಂಡಿದ್ದ ಪ್ರೇಮ್ ಅವರು ಕೆಲ ಕಾಲ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಹಲವು ಸಬ್ಜೆಕ್ಟ್ ಫೇಲ್ ಆಗಿದ್ದರೂ ಓದುವ ಹಂಬಲ ಆತನಿಗಿತ್ತು ಎಂದಿದ್ದಾರೆ.
ಈ ಸುದ್ದಿಯನ್ನು ಕೇಳಿಸಿಕೊಳ್ಳಿ:

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 22-year old engineering college student allegedly committed suicide in Vijaywada late on Saturday night for failing to clear several subjects in the second and third year of college.
Please Wait while comments are loading...