ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶುವೈದ್ಯೆ ಮೇಲೆ ಅತ್ಯಾಚಾರ, ಕೊಲೆ; ಪ್ರಕರಣದ Timeline

|
Google Oneindia Kannada News

Recommended Video

DIsha issue should be a lesson to everyone | Oneindia kannada | JUSTICE SERVED

ಹೈದರಾಬಾದ್, ಡಿಸೆಂಬರ್ 6 : ಹೈದರಾಬಾದ್‌ನಲ್ಲಿ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಕ್ಕೆ 10 ದಿನದಲ್ಲಿ ಮಹತ್ವದ ತಿರುವು ಸಿಕ್ಕಿದೆ. ಅತ್ಯಾಚಾರ ನಡೆಸಿದ ನಾಲ್ವರು ಆರೋಪಿಗಳನ್ನು ಎನ್‌ ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ.

ನವೆಂಬರ್ 27ರಂದು ರಾತ್ರಿ 9.15ರ ಸುಮಾರಿಗೆ ಪಶುವೈದ್ಯೆಯನ್ನು ನಾಲ್ವರು ಆರೋಪಿಗಳು ಅಪಹರಣ ಮಾಡಿದ್ದರು. ಡಿಸೆಂಬರ್ 6ರ ಮುಂಜಾನೆ 3.30ರ ಸುಮಾರಿಗೆ ನಾಲ್ವರು ಆರೋಪಿಗಳು ಎನ್‌ ಕೌಂಟರ್‌ನಲ್ಲಿ ಮೃತಪಟ್ಟಿದ್ದಾರೆ.

ಪಶುವೈದ್ಯೆ ಮೇಲೆ ಅತ್ಯಾಚಾರ, ಕೊಲೆ; ಎನ್ ಕೌಂಟರ್ ನಡೆದಿದ್ದು ಹೇಗೆ? ಪಶುವೈದ್ಯೆ ಮೇಲೆ ಅತ್ಯಾಚಾರ, ಕೊಲೆ; ಎನ್ ಕೌಂಟರ್ ನಡೆದಿದ್ದು ಹೇಗೆ?

27 ವರ್ಷದ ಪಶುವೈದ್ಯೆಯನ್ನು ಅತ್ಯಾಚಾರ ನಡೆಸಿ, ಕೊಲೆ ಮಾಡಿ, ಸುಟ್ಟು ಹಾಕಿದ್ದ ಪ್ರಕರಣದ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು.

ಪಶುವೈದ್ಯೆ ಮೇಲೆ ಅತ್ಯಾಚಾರ, ಕೊಲೆ; ಎಲ್ಲಾ ಆರೋಪಿಗಳ ಎನ್‌ ಕೌಂಟರ್ ಪಶುವೈದ್ಯೆ ಮೇಲೆ ಅತ್ಯಾಚಾರ, ಕೊಲೆ; ಎಲ್ಲಾ ಆರೋಪಿಗಳ ಎನ್‌ ಕೌಂಟರ್

ಸೈಬರಾಬಾದ್‌ನ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್ ನೇತೃತ್ವದಲ್ಲಿ ಪ್ರಕರಣದ ವಿಚಾರಣೆಗೆ ತಂಡವನ್ನು ರಚನೆ ಮಾಡಲಾಗಿತ್ತು. ನ್ಯಾಯಾಂಗ ಬಂಧನಲ್ಲಿದ್ದ ಆರೋಪಿಗಳನ್ನು ಗುರುವಾರ ಬೆಳಗ್ಗೆ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ಆರಂಭಿಸಿದ್ದರು.

ಮಗಳ ಆತ್ಮಕ್ಕೆ ಶಾಂತಿ ಸಿಕ್ಕಿದೆ: ಅತ್ಯಾಚಾರ ಸಂತ್ರಸ್ತೆ ತಂದೆಮಗಳ ಆತ್ಮಕ್ಕೆ ಶಾಂತಿ ಸಿಕ್ಕಿದೆ: ಅತ್ಯಾಚಾರ ಸಂತ್ರಸ್ತೆ ತಂದೆ

ಆ ಕರಾಳ ರಾತ್ರಿ ಏನಾಗಿತ್ತು?

ಆ ಕರಾಳ ರಾತ್ರಿ ಏನಾಗಿತ್ತು?

* 27 ವರ್ಷದ ಪಶುವೈದ್ಯೆ ನವೆಂಬರ್ 27ರಂದು ಕೆಲಸಕ್ಕೆ ಹೊರಟಿದ್ದರು.
* ತೊಂಡುಪಲ್ಲಿ ಟೋಲ್ ಬಳಿ ಸ್ಕೂಟಿ ನಿಲ್ಲಿಸಿದ್ದರು.
* ಟೋಲ್ ಸಮೀಪವೇ ಲಾರಿ ನಿಲ್ಲಿಸಿಕೊಂಡಿದ್ದ ನಾಲ್ವರು ಇದನ್ನು ಗಮನಿಸಿದ್ದರು.
* ಮೊಹಮ್ಮದ್ ಆರಿಫ್, ಜೊಲ್ಲಾ ನವೀನ್, ಜೊಲ್ಲಾ ಶಿವ ಮತ್ತು ಚಿಂತಕುಂಟಾ ಕೇಶವುಲು ಲಾರಿ, ಚಾಲಕರಾಗಿ ಮತ್ತು ನಿರ್ವಹಕರಾಗಿ ಕೆಲಸ ಮಾಡುತ್ತಿದ್ದರು.
* ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಲು ಸಂಚು ರೂಪಿಸಿದ ಆರೋಪಿಗಳು ಆಕೆಗಾಗಿ ಕಾದು ಕುಳಿತಿದ್ದರು

ಸ್ಕೂಟಿ ಪಂಕ್ಚರ್ ಮಾಡಿದರು

ಸ್ಕೂಟಿ ಪಂಕ್ಚರ್ ಮಾಡಿದರು

* ನಾಲ್ವರು ಆರೋಪಿಗಳು ಪಶುವೈದ್ಯೆ ಸ್ಕೂಟಿಯನ್ನು ಪಂಕ್ಚರ್ ಮಾಡಿ ಕಾದು ಕುಳಿತರು
* ರಾತ್ರಿ 9.15ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಪಶುವೈದ್ಯೆ ವಾಪಸ್ ಬಂದರು.
* ಸ್ಕೂಟಿ ಪಂಕ್ಚರ್ ಆಗಿದ್ದನ್ನು ನೋಡಿ ಸಹೋದರಿಗೆ ಕರೆ ಮಾಡಿದ್ದರು.
* ಸ್ಕೂಟಿ ಪಂಕ್ಚರ್ ಆಗಿದೆ ಇಲ್ಲಿ ಹಲವು ಲಾರಿಗಳಿವೆ. ಅಪರಿಚಿತರು ಇದ್ದಾರೆ. ಭಯವಾಗುತ್ತಿದೆ ಎಂದು ಹೇಳಿದ್ದರು.
* ಸ್ಕೂಟಿ ಅಲ್ಲೇ ನಿಲ್ಲಿಸಿ ಮನೆಗೆ ಬರುವಂತೆ ಸಹೋದರಿ ಸಲಹೆ ನೀಡಿದ್ದರು.
* ಪಶುವೈದ್ಯೆ ಸ್ಕೂಟಿ ಬಳಿ ಬರುತ್ತಿದ್ದಂತೆ ಆರೋಪಿಗಳು ಅಲ್ಲಿಗೆ ಬಂದರು.

ಸಹಾಯ ಮಾಡುವ ನೆಪ ಅಪಹರಣ

ಸಹಾಯ ಮಾಡುವ ನೆಪ ಅಪಹರಣ

* ಸಹಾಯ ಮಾಡುವ ನೆಪದಲ್ಲಿ ಬಂದ ಆರೋಪಿಗಳು ಸ್ಕೂಟಿ ತಳ್ಳಿಕೊಂಡು ಪಂಕ್ಚರ್ ಶಾಪ್‌ಗೆ ತೆರಳಿದರು.
* ಕೆಲವೇ ಸಮಯದಲ್ಲಿ ಆಕೆಯನ್ನು ಅಪಹರಣ ಮಾಡಿ, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದರು.
* ಪಶುವೈದ್ಯೆ ಮೊಬೈಲ್ ಸ್ವಿಚ್ ಆಫ್ ಮಾಡಿದರು. ಆಕೆಗೆ ಮತ್ತು ಬರಲು ಬಲವಂತವಾಗಿ ಮದ್ಯ ಕುಡಿಸಿದರು.
* ಪಶುವೈದ್ಯೆ ಕುಟುಂಬದದಿಂದ ಪೊಲೀಸರಿಗೆ ದೂರು
* ಖಾಲಿ ಪ್ರದೇಶದಲ್ಲಿ ನಾಲ್ವರು ಆಕೆಯ ಮೇಲೆ ಅತ್ಯಾಚಾರ ನಡೆಸಿದರು. ಪುನಃ ಆಕೆಗೆ ಮದ್ಯ ಕುಡಿಸಿದರು.
* ಬಳಿಕ ಪ್ರಜ್ಞಾಹೀನರಾದ ಆಕೆಯನ್ನು ಲಾರಿಗೆ ಹಾಕಿಕೊಂಡರು
* ಸುಮಾರು 25 ಕಿ. ಮೀ. ದೂರ ಬಂದರು

ಪೆಟ್ರೋಲ್ ಹಾಕಿ ಸುಟ್ಟರು

ಪೆಟ್ರೋಲ್ ಹಾಕಿ ಸುಟ್ಟರು

* ಚಟಾನ್ ಪಲ್ಲಿ ಬ್ರಿಡ್ಜ್‌ ಬಳಿ ಲಾರಿಯಿಂದ ಆಕೆಯನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ಕೆಳಗೆ ಎಸೆದರು.
* ಬ್ರಿಡ್ಜ್ ಕೆಳಗೆ ಆಕೆಯನ್ನು ಎಸೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು
* ಬೆಂಕಿ ಹಾಕುವಾಗ ಪಶುವೈದ್ಯೆಗೆ ಜೀವವಿತ್ತು, ಕಿರುಚಾಡಿದರೂ ಬಿಡದೇ ಮತ್ತೆ ಪೆಟ್ರೋಲ್ ಸುರಿದು
* ನವೆಂಬರ್ 28ರ ಗುರುವಾರ ಮುಂಜಾನೆ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ
* ಸ್ಥಳಕ್ಕೆ ಧಾವಿಸಿದ ಶಂಶಾಬಾದ್ ಪೊಲೀಸರು
* ಶವ ಪತ್ತೆಯಾದ ಸುದ್ದಿ ಎಲ್ಲಾ ಕಡೆ ವೈರಲ್, ಪೊಲೀಸ್ ಕಂಟ್ರೋಲ್ ರೂಂಗೆ ಕರೆ
* ಇಬ್ಬರು ಪೆಟ್ರೋಲ್ ತೆಗೆದುಕೊಂಡು ಹೋಗಲು ಬಂದಿದ್ದರು ಎಂದು ಮಾಹಿತಿಕೊಟ್ಟ ಪೆಟ್ರೋಲ್ ಬಂಕ್ ಕೆಲಸಗಾರ

ಪೊಲೀಸರ ಮಿಂಚಿನ ಕಾರ್ಯಾಚರಣೆ

ಪೊಲೀಸರ ಮಿಂಚಿನ ಕಾರ್ಯಾಚರಣೆ

* ಸ್ಕೂಟಿಗೆ ಗಾಳಿ ಹಾಕಿಸಲು ಇಬ್ಬರು ಬಂದಿದ್ದರು ಎಂಬ ಮಾಹಿತಿ ನೀಡಿದ ಪಂಕ್ಚರ್ ಅಂಗಡಿ ಕೆಲಸಗಾರ
* ತನಿಖೆ ಚುರುಕುಗೊಳಿಸಿದ ಪೊಲೀಸರು. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ
* ಎರಡು ಸಿಸಿಟಿವಿಯಲ್ಲಿ ಇಬ್ಬರು ಅನುಮಾನಾಸ್ಪದ ಚಲನವಲನ ಪತ್ತೆ
* ಲಾರಿಗಳ ನಂಬರ್ ಪತ್ತೆ, ಮಾಲೀಕನನ್ನು ವಿಚಾರಿಸಿದ ಪೊಲೀಸ್
* ಮೊಹಮ್ಮದ್ ಆರಿಫ್, ಜೊಲ್ಲಾ ನವೀನ್, ಜೊಲ್ಲಾ ಶಿವ ಮತ್ತು ಚಿಂತಕುಂಟಾ ಕೇಶವುಲು ಬಗ್ಗೆ ಮಾಹಿತಿ ಸಂಗ್ರಹ

ಆರೋಪಿಗಳ ಬಂಧನ

ಆರೋಪಿಗಳ ಬಂಧನ

* ಸಿಸಿಟಿವಿ ದೃಶ್ಯ, ಲಾರಿ ಮಾಲೀಕನ ಹೇಳಿಕೆ ಆಧರಿಸಿ ನಾಲ್ವರು ಆರೋಪಿಗಳ ಬಂಧನ
* ದೇಶಾದ್ಯಂತ ಸಂಚಲನ ಮೂಡಿಸಿದ ಅತ್ಯಾಚಾರ, ಕೊಲೆ ಪ್ರಕರಣ
* ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯ
* ಪಶುವೈದ್ಯೆ ಕುಟುಂಬದ ದೂರು ಪಡೆಯಲಿ ವಿಳಂಬ ಮಾಡಿದ ಮೂವರು ಪೊಲೀಸರ ಅಮಾನತು
* ಆರೋಪಿಗಳಿದ್ದ ಶಂಶಾಬಾದ್ ಪೊಲೀಸ್ ಠಾಣೆ ಮುಂದೆ ಜನರ ಬೃಹತ್ ಪ್ರತಿಭಟನೆ
* ಆರೋಪಿಗಳನ್ನು ತಮ್ಮ ವಶಕ್ಕೆ ನೀಡುವಂತೆ ಒತ್ತಾಯ
* ನವೆಂಬರ್ 29ರಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ತೀರ್ಮಾನ
* ನ್ಯಾಯಾಧೀಶರು ರಜೆಯಲ್ಲಿದ್ದ ಕಾರಣ ತಹಶೀಲ್ದಾರ್ ಮುಂದೆ ಹಾಜರು, ಎಲ್ಲರೂ 14 ದಿನ ನ್ಯಾಯಾಂಗ ಬಂಧನಕ್ಕೆ

ಜೈಲಿಗೆ ಆರೋಪಿಗಳು ಸ್ಥಳಾಂತರ

ಜೈಲಿಗೆ ಆರೋಪಿಗಳು ಸ್ಥಳಾಂತರ

* ಚೆರ್ಲಪಲ್ಲಿ ಜೈಲಿಗೆ ಆರೋಪಿಗಳು ಸ್ಥಳಾಂತರ
* ಜೈಲಿಗೆ ಕರೆದುಕೊಂಡು ಹೋಗುವಾಗ ಆರೋಪಿಗಳಿದ್ದ ಬಸ್ ಮೇಲೆ ಜನರಿಂದ ಕಲ್ಲು ತೂರಾಟ
* ಜೈಲಿನಲ್ಲಿಯೂ ಪ್ರತ್ಯೇಕ ಬ್ಯಾರಕ್‌ನಲ್ಲಿ ಆರೋಪಿಗಳಿಗೆ ಬಿಗಿ ಭದ್ರತೆ
* ಪೊಲೀಸರ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ
* ಡಿಸೆಂಬರ್ 4ರಂದು 7 ದಿನ ಪೊಲೀಸ್ ವಶಕ್ಕೆ ನೀಡಿದ ನ್ಯಾಯಾಲಯ
* ಡಿಸೆಂಬರ್ 5ರಂದು ಬೆಳಗ್ಗೆ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು
* ಡಿಸೆಂಬರ್ 6ರ ಮುಂಜಾನೆ ಎಲ್ಲಾ ಆರೋಪಿಗಳ ಎನ್‌ ಕೌಂಟರ್

English summary
Hyderabad Veterinary doctor rape and murder case all four accused have been killed in an encounter with the police. Here are the timeline of the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X