ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೇದೆಯ ಸಮಯಪ್ರಜ್ಞೆಯಿಂದ ಉಳಿದ ಹೃದಯಾಘಾತಕ್ಕೊಗಾದವನ ಜೀವ

|
Google Oneindia Kannada News

ಹೈದರಾಬಾದ್, ನವೆಂಬರ್ 22 : ಸಾಮಾನ್ಯಜ್ಞಾನ ಮತ್ತು ಸಮಯಪ್ರಜ್ಞೆ ಇದ್ದರೆ ಹೃದಯಾಘಾತಕ್ಕೊಳಗಾದ ವ್ಯಕ್ತಿಯನ್ನು ಬದುಕಿಸಬಹುದು ಎಂಬುದನ್ನು ಹೈದರಾಬಾದ್ ನ ಇಬ್ಬರು ಪೊಲೀಸ್ ಪೇದೆಗಳು ತೋರಿಸಿಕೊಟ್ಟಿದ್ದಾರೆ.

ಕಾನ್ಸ್ ಟೇಬಲ್ ಕೆ ಚಂದನ್ ಮತ್ತು ಟ್ರಾಫಿಕ್ ಪೊಲೀಸ್ ಆಗಿರುವ ಬಹಾದುರ್ ಪುರದ ಇನಾಯತುಲ್ಲಾ ಅವರು ಮತ್ತೊಬ್ಬ ವ್ಯಕ್ತಿಯ ಸಹಾಯದಿಂದ ಹೃದಯಾಘಾತಕ್ಕೆ ಒಳಗಾಗಿದ್ದ ವ್ಯಕ್ತಿಗೆ, ಹೃದಯಭಾಗವನ್ನು ಕ್ರಮಬದ್ಧವಾಗಿ ಒತ್ತುವ cardiopulmonary resuscitation (CPR) ವಿಧಾನದ ಮೂಲಕ ಮರುಜೀವ ನೀಡಿದ್ದಾರೆ.

ಮರುಹುಟ್ಟು ನೀಡಿದ ಪ್ರಿಯತಮೆಯ ಆ ಮೊದಲ 'ಮುತ್ತಿನ' ಮ್ಯಾಜಿಕ್! ಮರುಹುಟ್ಟು ನೀಡಿದ ಪ್ರಿಯತಮೆಯ ಆ ಮೊದಲ 'ಮುತ್ತಿನ' ಮ್ಯಾಜಿಕ್!

ಈ ಘಟನೆ ವಿಡಿಯೋದಲ್ಲಿ ದಾಖಲಾಗಿದ್ದು, ಭಾರತದ ಖ್ಯಾತ ಮಾಜಿ ಕ್ರಿಕೆಟ್ ಪಟು ವಿವಿಎಸ್ ಲಕ್ಷ್ಮಣ್ ಅವರು ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಸೇವಾ ಮನೋಭಾವವೇ ಮಾನವನ ಬಹುದೊಡ್ಡ ಗುಣಲಕ್ಷಣ ಎಂದು ಹೈದರಾಬಾದ್ ಮೂಲಕ ಕ್ರಿಕೆಟ್ ಪಟು ಪೊಲೀಸರ ಕ್ರಮವನ್ನು ಕೊಂಡಾಡಿದ್ದಾರೆ. ಅವರ ಮಾನವೀಯತೆಗೆ ಸೆಲ್ಯೂಟ್ ಎಂದಿದ್ದಾರೆ.

ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದ ವ್ಯಕ್ತಿಯ ಎದೆಗೂಡಿನ ಕೆಳಭಾಗದಲ್ಲಿ ಒತ್ತುತ್ತಲೇ ಇದ್ದ ಟ್ರಾಫಿಕ್ ಪೊಲೀಸ್ ಕೆ ಚಂದನ್ ಮತ್ತು ಇನಾಯತುಲ್ಲಾ ಅವರು, ಆ ವ್ಯಕ್ತಿ ಮತ್ತೆ ಉಸಿರಾಡಿಸಲು ಪ್ರಾರಂಭ ಮಾಡುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದಾರೆ. ನೆಲದ ಮೇಲೆ ಕುಳಿತಿದ್ದ ಹೃದಯಾಘಾತಕ್ಕೆ ಒಳಗಾಗಿದ್ದ ವ್ಯಕ್ತಿಯನ್ನು ಮತ್ತೊಬ್ಬ ವ್ಯಕ್ತಿ ಆ ಸಮಯದಲ್ಲಿ ಹಿಡಿದುಕೊಂಡಿದ್ದ.

ಭಾರತದಲ್ಲಿ ಶೇ.50ರಷ್ಟು ಹೃದ್ರೋಗ ಹೆಚ್ಚಳ, ಇಲ್ಲಿವೆ ಪ್ರಮುಖ ಕಾರಣ ಭಾರತದಲ್ಲಿ ಶೇ.50ರಷ್ಟು ಹೃದ್ರೋಗ ಹೆಚ್ಚಳ, ಇಲ್ಲಿವೆ ಪ್ರಮುಖ ಕಾರಣ

Timely help by constables save life of a person

cardiopulmonary resuscitation (CPR) ಅಂದರೆ, ಹೃದಯಾಘಾತಕ್ಕೆ ಅಥವಾ ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ವ್ಯಕ್ತಿಯನ್ನು ನೆಲದ ಮೇಲೆ ಮಲಗಿಸಿ, ಎದೆಗೂಡಿನ ಕೆಳಭಾಗವನ್ನು ಕ್ರಮಬದ್ಧವಾಗಿ ಒತ್ತುತ್ತ, ಬಾಯಿಗೆ ಬಾಯಿ ಸೇರಿಸಿ ಉಸಿರನ್ನು ಒಳಹಾಕುವ ಕ್ರಿಯೆ. ಇಲ್ಲಿ ವ್ಯಕ್ತಿಯನ್ನು ಕುಳ್ಳಿರಿಸಿ ಹೃದಯಕ್ಕೆ ಮತ್ತೆ ಚಾಲನೆ ನೀಡಲು ಯತ್ನಿಸಿದ್ದು ಉತ್ತಮ ವಿಧಾನ ಅಲ್ಲದಿದ್ದರೂ ಸಮಯಪ್ರಜ್ಞೆಯಿಂದಾಗಿ ಒಬ್ಬನ ಜೀವ ಉಳಿದಿದೆ.

ಸತ್ಯವಾಗ್ಲೂ ಕಣ್ರೀ, ಹೃದ್ರೋಗಕ್ಕೆ ಅತ್ಯುತ್ತಮ ಪರಿಹಾರ ಮದುವೆಯಂತೆ! ಸತ್ಯವಾಗ್ಲೂ ಕಣ್ರೀ, ಹೃದ್ರೋಗಕ್ಕೆ ಅತ್ಯುತ್ತಮ ಪರಿಹಾರ ಮದುವೆಯಂತೆ!

ವಿವಿಎಸ್ ಲಕ್ಷ್ಮಣ್ ಅವರು ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು ಕೂಡ ಶ್ಲಾಘನೆಗೆ ಒಳಗಾಗಿದೆ. ಸೌರಭ್ ಕಲ್ಯಾಣಿ ಎಂಬುವವರು, ಇಂಥವರೇ ನಿಜವಾದ ಹೀರೋಗಳು. ಇಂಥವರ ಬಗ್ಗೆ ಭಾರತೀಯರೆಲ್ಲರೂ ಅಭಿಮಾನ ಪಡಬೇಕು. ಪೊಲೀಸರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಾಕಷ್ಟು ಶ್ರಮ ನೀಡುವಂಥ ಕರ್ತವ್ಯದಲ್ಲಿ ನಿರತರಾಗಿರುತ್ತಾರೆ. ಅವರಿಗೆ ಗರಿಷ್ಠ ಗೌರವವನ್ನು ನಾವು ತೋರಬೇಕು ಎಂದು ಕೊಂಡಾಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಕೂಡ ಇಂಥದೇ ಪರಿಸ್ಥಿತಿ ಎದುರಾದಾಗ, ಮೊದಲ ಬಾರಿಗೆ ಡೇಟಿಂಗ್ ಹೋಗಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಕುಸಿದ ಸಂದರ್ಭದಲ್ಲಿ ಆತನ ಪ್ರೇಯಸಿ ಇದೇ ವಿಧಾನವನ್ನು ಅನುಸರಿಸಿ ಹೃದಯ ಮತ್ತೆ ಕೆಲಸ ಮಾಡುವಂತೆ ಮಾಡಿದ್ದರು. ಮರುಹುಟ್ಟು ಪಡೆದ ನಂತರ ದಂಪತಿಗಳಿಬ್ಬರು Paddle4Good ಎಂಬ ಲಾಭರಹಿತ ಸಂಸ್ಥೆಯನ್ನು ಸ್ಥಾಪಿಸಿ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಮತ್ತು cardiopulmonary resuscitation (CPR) ತಂತ್ರಗಾರಿಕೆಯ ಬಗ್ಗೆ ಜನರಿಗೆ ತಿಳಿವಳಿಕೆ ನೀಡುವ ಪ್ರಯತ್ನಕ್ಕೆ ಕೈಹಾಕಿದ್ದಾರೆ.

English summary
Timely help by constables in Hyderabad save life of a person who suffered heart attack. The constables followed cardiopulmonary resuscitation (CPR) to save the person. Former cricketer VVS Laxman has shared this video on twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X