ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣದಲ್ಲೇ ಮೊದಲು ಚುನಾವಣೆ, 4 ರಾಜ್ಯಗಳಲ್ಲಿ ನಂತರ

|
Google Oneindia Kannada News

ಹೈದರಾಬಾದ್, ಸೆಪ್ಟೆಂಬರ್ 10: ಈ ವರ್ಷ ಡಿಸೆಂಬರ್ ನಲ್ಲಿ ನಡೆಯಲಿರುವ ನಾಲ್ಕು ರಾಜ್ಯಗಳ ಚುನಾವಣೆಯೊಟ್ಟಿಗೇ ತೆಲಂಗಾಣ ಚುನಾವಣೆಯೂ ನಡೆಯಬಹುದು ಎಂಬ ಊಹೆ ತಪ್ಪಾಗುವ ಎಲ್ಲಾ ಸಾಧ್ಯತೆಗಳಿವೆ.

ತೆಲಂಗಾಣ ವಿಧಾನಸಭೆ ವಿಸರ್ಜನೆ: ಕೆಸಿಆರ್ ಮಹತ್ವದ ರಾಜಕೀಯ ನಡೆ ತೆಲಂಗಾಣ ವಿಧಾನಸಭೆ ವಿಸರ್ಜನೆ: ಕೆಸಿಆರ್ ಮಹತ್ವದ ರಾಜಕೀಯ ನಡೆ

ಸೆ.11 ರಂದು ಈ ಕುರಿತು ಅಂತಿಮ ನಿರ್ಧಾರ ಹೊರಬರಲಿದ್ದು, ನಾಲ್ಕು ರಾಜ್ಯಗಳ ಚುನಾವಣೆಗೂ ಮುನ್ನವೇ ತೆಲಂಗಾಣದಲ್ಲಿ ಚುನಾವಣೆ ನಡೆಯಬಹುದು ಎನ್ನಲಾಗಿದೆ.

ತೆಲಂಗಾಣ ವಿಧಾನಸಭೆ ವಿಸರ್ಜನೆ? ಕಾರಣವೇನು? ಪರಿಣಾಮವೇನು?ತೆಲಂಗಾಣ ವಿಧಾನಸಭೆ ವಿಸರ್ಜನೆ? ಕಾರಣವೇನು? ಪರಿಣಾಮವೇನು?

ಡಿಸೆಂಬರ್ ನಲ್ಲಿ ಮಧ್ಯಪ್ರದೇಶ, ಛತ್ತೀಸ್ ಗಢ, ರಾಜಸ್ಥಾನ ಮತ್ತು ಮಿಜೋರಾಂಗಳಲ್ಲಿ ನಡೆಯಲಿರುವ ಚುನಾವಣೆಯೊಂದಿಗೆ ತೆಲಂಗಾಣ ಚುನಾವಣೆಯನ್ನು ನಡೆಸಲು ಸಾಧ್ಯವಿಲ್ಲ. ಏಕೆಂದರೆ ತೆಲಂಗಾಣ ವಿಧಾನಸಭೆಯನ್ನು ಈಗಾಗಲೇ ವಿಸರ್ಜಿಸಲಾಗಿದ್ದು, ಸೆ.06 ರಂದೇ ವಿಧಾನಸಭೆಯ ಕಾಲಾವಧಿ ಅಂತ್ಯವಾಗಿದೆ. ಆದರೆ ಉಳಿದ ನಾಲ್ಕು ರಾಜ್ಯಗಳ ವಿಧಾನಸಭೆಯ ಅವಧಿ ಡಿಸೆಂಬರ್ ಮತ್ತು ಜನವರಿಯವರೆಗೂ ಇರುವುದರಿಂದ ಅವುಗಳ ಚುನಾವಣೆಯನ್ನು ತುರ್ತಾಗಿ ಮಾಡುವ ಪ್ರಮೇಯವಿಲ್ಲ.

ತೆಲಂಗಾಣ ಚುನಾವಣೆಯಲ್ಲೂ ಕರ್ನಾಟಕ- ಕುಮಾರಣ್ಣನ ಬಗ್ಗೆಯೇ ಚರ್ಚೆ ತೆಲಂಗಾಣ ಚುನಾವಣೆಯಲ್ಲೂ ಕರ್ನಾಟಕ- ಕುಮಾರಣ್ಣನ ಬಗ್ಗೆಯೇ ಚರ್ಚೆ

Telangana assembly polls to be held prior to other 4 states polls

ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ ಎಸ್) ಪಕ್ಷದ ಮುಖಂಡ, ತೆಲಂಗಾಣದ ಮುಖ್ಯಮಂತ್ರಿಯಾಗಿದ್ದ ಕೆ.ಚಂದ್ರಶೇಖರ್ ರಾವ್ ಅವರು ಸೆ.6 ರಂದು ತೆಲಂಗಾಣ ವಿಧಾನಸಭೆಯನ್ನು ವಿಸರ್ಜಿಸಿದ ಕಾರಣ ಇಲ್ಲಿ ಚುನಾವಣೆ ನಡೆಯಬೇಕಿದೆ. ವಿಧನಾಸಭೆ ವಿಸರ್ಜಿಸದೆ ಇದ್ದಿದ್ದರೆ 2019 ಜೂನ್ ವರೆಗೂ ತೆಲಂಗಾಣದಲ್ಲಿ ಚುನಾವಣೆ ನಡೆಸುವ ಅಗತ್ಯವಿರಲಿಲ್ಲ.

English summary
The Telangana Assembly elections are most likely to be held prior to the state polls for four other states, Rajasthan, Madhya Pradesh, Chhattisgarh, Mizoram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X