ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರುದ್ಯೋಗದ ಖಿನ್ನತೆ: ಹೈದರಾಬಾದಿನಲ್ಲಿ ಕಟ್ಟಡದಿಂದ ಹಾರಿ ಟೆಕ್ಕಿ ಆತ್ಮಹತ್ಯೆ

|
Google Oneindia Kannada News

ಹೈದರಾಬಾದ್, ಜನವರಿ 29: ಖಿನ್ನತೆಯಿಂದ ಬಳಲುತ್ತಿದ್ದ ಸಾಫ್ಟವೇರ್ ಉದ್ಯೋಗಿಯೊಬ್ಬ ಹೈದರಾಬಾದಿನ ಸಿಕಂದರಾಬಾದಿನಲ್ಲಿರುವ ತನ್ನ ಅಪಾರ್ಟ್ಮೆಂಟಿನ ಮೂರನೇ ಮಹದಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.28, ಭಾನುವಾರ ಅಪರಾಹ್ನ ನಡೆದಿದೆ.

ಕೆ.ರವಿ ಕುಮಾರ್(42) ಮೊದಲು ಅಮೆರಿಕದಲ್ಲಿ ಉದ್ಯೋಗ ಮಾಡುತ್ತಿದ್ದರು. ಆದರೆ 2004 ರಲ್ಲಿ ಸಂಭವಿಸಿದ ಒಂದು ರಸ್ತೆ ಅಪಘಾತದ ನಂತರ ಅವರು ಕೆಲಸ ಕಳೆದುಕೊಂಡಿದ್ದರು. ಅಂದಿನಿಂದ ನಿರುದ್ಯೋಗಿಯಾಗಿದ್ದ ಅವರನ್ನು ಖಿನ್ನತೆ ಆವರಿಸಿತ್ತು.

Techie commits suicide in Hyderabad

ಉದ್ಯೋಗದಲ್ಲಿದ್ದ ಪತ್ನಿಗೂ, ಪತಿಗೂ ಆಗಾಗೇ ಜಗಳವಾಗುತ್ತಿತ್ತು ಎಂದು ನೆರೆ ಹೊರೆಯ ಮಂಡಿ ತಿಳಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ದಿನವೂ ಪತ್ನಿಯೊಂದಿಗೆ ಜಗಳವಾಡಿದ್ದ ರವಿ ಕುಮಾರ್, ಪತ್ನಿ ಮನೆಯಲಿಲ್ಲದ ಸಂದರ್ಭ ನೋಡಿ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಂಪತಿಗಳಿಗೆ ಮಕ್ಕಳಿರಲಿಲ್ಲ. ಈತ ಕಟ್ಟಡದಿಂದ ಹಾರುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪ್ರಕರಣ ದಾಖಲಿಸಲಾಗಿದೆ.

English summary
A techie(software professional) who had returned from United states, commits suicide by jumping from his 3rd floor apartment in Secunderabad in Hyderabad. The incident took place on Jan 28th. The software professional was suffering by depression after he lost his job.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X