ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರ ಕರಾವಳಿ, ರಾಯಲಸೀಮೆ ಜನತೆ ತತ್ತರ

By Mahesh
|
Google Oneindia Kannada News

ಹೈದರಾಬಾದ್, ಫೆ. 14: ಪ್ರತ್ಯೇಕ ತೆಲಂಗಾಣ ರಾಜ್ಯ ಸ್ಥಾಪನೆ ಮಸೂದೆ ಮಂಡನೆಗೆ ಸೀಮಾಂಧ್ರ ಭಾಗದ ಸಂಸದರು ವಿರೋಧ ವ್ಯಕ್ತಪಡಿಸಿ ಪೆಪ್ಪರ್ ಸ್ಪ್ರೇ ಮಾಡಿದ ಘಟನೆ ನಂತರ ಆಂಧ್ರಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ತೆಲಂಗಾಣ ರಾಜ್ಯ ರಚನೆ ಖಂಡಿಸಿ ಕರೆಯಲಾಗಿರುವ ರಾಜ್ಯ ಬಂದ್ ಗೆ ಕೋಸ್ತಾ ಹಾಗೂ ರಾಯಲಸೀಮೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ.

ತೆಲುಗುದೇಶಂ ಪಾರ್ಟಿ, ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೀದಿಳಿಗಿದು ಸಮೈಕ್ಯಾಂದ್ರಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಸೀಮಾಂಧ್ರ ಹಾಗೂ ಕರವಾಳಿ ಭಾಗಗಳಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಶಾಲಾ, ಕಾಲೇಜುಗಳು ಸ್ವಯಂ ಘೋಷಿತ ಬಂದ್ ಆಚರಿಸುತ್ತಿವೆ. ಸರ್ಕಾರಿ ಕಚೇರಿಗಳಲ್ಲೂ ಹಾಜರಾತಿ ಕಡಿಮೆಗೊಂಡಿದೆ. ನಾನ್ ಗೆಜೆಟೆಡ್ ಅಧಿಕಾರಿಗಳ ಸಂಘಟನೆಗಳು ಕರೆ ನೀಡಿರುವುದರಿಂದ ಕಚೇರಿಗಳು ಬಿಕೋ ಎನ್ನುತ್ತಿವೆ.

ಕೇಂದ್ರದ ಪೊಳ್ಳು ಭರವಸೆ: ಈ ನಡುವೆ ಎಲ್ಲವೂ ಶಮನಗೊಳಿಸುವ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತಿದ್ದು, 45 ದಿನಗಳಲ್ಲಿ ಈ ಪ್ರಾಂತ್ಯಕ್ಕೆ ರಾಜಧಾನಿಯನ್ನು ಆಯ್ಕೆಮಾಡಿಕೊಳ್ಳುವ ಅವಕಾಶ ನೀಡಲಾಗುತ್ತದೆ. ಇಲ್ಲಿನ ಆರ್ಥಿಕ ಅಭಿವೃದ್ಧಿಗಾಗಿ ತೆರಿಗೆಗೆ ಉತ್ತೇಜನ ಕೊಡುವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಯುಪಿಎ ಸರ್ಕಾರ ಹೇಳಿದೆ. [ಆಂಧ್ರ ವಿಭಜನೆ, ಕರ್ನಾಟಕ ದೊಡ್ಡಣ್ಣ, ಲಾಭ ಏನಣ್ಣ?]

ಗುರುವಾರದ ದಿನ ಭಾರೀ ಗದ್ದಲ, ಗಲಾಟೆಗಳ ಮಧ್ಯೆಯೇ ವಿವಾದಾತ್ಮಕ ಆಂಧ್ರಪ್ರದೇಶ ಪುನಾರಚನೆ ಮಸೂದೆಯನ್ನು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಸಂಸತ್ತಿನಲ್ಲಿ ಮಸೂದೆ ಮಂಡಿಸಿದರು. ಮುಂದಿನ ಹತ್ತು ವರ್ಷಗಳವರೆಗೆ ತೆಲಂಗಾಣ ಹಾಗೂ ಸೀಮಾಂಧ್ರಕ್ಕೆ ಹೈದರಾಬಾದ್ ಸಾಮಾನ್ಯ ರಾಜಧಾನಿಯಾಗಿ ಮುಂದುವರಿಯಲಿದೆ ಎನ್ನುತ್ತಿದ್ದಂತೆ ವಿಜಯವಾಡ ಸಂಸದ ಎಲ್ ರಾಜಗೋಪಾಲ್ ಸದನದಲ್ಲಿ ಪೆಪ್ಪರ್ ಸ್ಪ್ರೇ ಎರಚುವ ಮೂಲಕ ಲೋಕಸಭೆ ಕಲಾಪಕ್ಕೆ ಅಡ್ಡಿ ಉಂಟುಮಾಡಿದರು. [ಪೆಪ್ಪರ್ ಸ್ಪ್ರೇ ಎರಚಿ ಗದ್ದಲ ಮಾಡಿದ ಸಂಸದ]

ರಾಯಲಸೀಮೆ ಹಾಗೂ ಆಂಧ್ರ ಕರಾವಳಿ ಭಾಗದ ಜನರ ನೋವು, ಬಂದ್ ಕಾವು, ರಾಜಕೀಯ ಪಕ್ಷಗಳ ದೊಂಬರಾಟದ ಚಿತ್ರಗಳು ಮುಂದೆ ನಿರೀಕ್ಷಿಸಿ

ರಾಜ್ಯ ವಿಭಜನೆಯಾದ ಬಳಿಕ ನೀರಿನ ಸಮಸ್ಯೆ

ರಾಜ್ಯ ವಿಭಜನೆಯಾದ ಬಳಿಕ ನೀರಿನ ಸಮಸ್ಯೆ

ರಾಜ್ಯ ವಿಭಜನೆಯಾದ ಬಳಿಕ ನೀರಿನ ಸಮಸ್ಯೆ ತಲೆದೋರುವ ಹಿನ್ನೆಲೆಯಲ್ಲಿ ಇದರ ಮೇಲ್ವಿಚಾರಣೆಗಾಗಿ ಕೃಷ್ಣಾ ಹಾಗೂ ಗೋದಾವರಿ ನದಿಗಳ ವ್ಯವಸ್ಥಾಪಕ ಮಂಡಳಿಯನ್ನು ಕೇಂದ್ರ ಸ್ಥಾಪಿಸಲಿದೆ.

ಗ್ರೇಟರ್ ಹೈದರಾಬಾದ್ ಮುನ್ಸಿಪಾಲ್

ಗ್ರೇಟರ್ ಹೈದರಾಬಾದ್ ಮುನ್ಸಿಪಾಲ್

ಗ್ರೇಟರ್ ಹೈದರಾಬಾದ್ ಮುನ್ಸಿಪಾಲ್ ಕಾರ್ಪೊರೇಶನ್ ಎಂದು ಅಧಿಸೂಚಿಸಿದ ಪ್ರದೇಶವೂ ಸಾಮಾನ್ಯ ರಾಜಧಾನಿ ಜೊತೆ ಸೇರಲಿದೆ. ಮುಂದಿನ 45 ದಿನಗಳಲ್ಲಿ ಸೀಮಾಂಧ್ರಕ್ಕೆ ಹೊಸ ರಾಜಧಾನಿಗೆ ಸಲಹೆ ನೀಡಲು ಕೇಂದ್ರ ಸರಕಾರ ತಜ್ಞರ ಸಮಿತಿಯನ್ನು ಸ್ಥಾಪಿಸಲಿದೆ.

ಸಮರ್ಪಕ ಆರ್ಥಿಕ ಕ್ರಮಗಳನ್ನು ಅನುಷ್ಠಾನ

ಸಮರ್ಪಕ ಆರ್ಥಿಕ ಕ್ರಮಗಳನ್ನು ಅನುಷ್ಠಾನ

ಸೀಮಾಂಧ್ರದಲ್ಲಿ ಸಮರ್ಪಕ ಆರ್ಥಿಕ ಕ್ರಮಗಳನ್ನು ಅನುಷ್ಠಾನಗೊಳಿಸಿ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಸರ್ಕಾರ ಭರವಸೆ ನೀಡಿದ್ದು, ತನ್ಮೂಲಕ ಅಲ್ಲಿನ ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಲಿದೆ.

ತೆರಿಗೆ ಉತ್ತೇಜಕ ಕ್ರಮಗಳು

ತೆರಿಗೆ ಉತ್ತೇಜಕ ಕ್ರಮಗಳು

ತೆರಿಗೆ ಉತ್ತೇಜಕ ಕ್ರಮಗಳು ಇದರಲ್ಲಿ ಅಡಕವಾಗಿವೆ. ಎರಡು ರಾಜ್ಯಗಳಲ್ಲೂ ಕೈಗಾರಿಕೀಕರಣ ಹಾಗೂ ಆರ್ಥಿಕ ಬೆಳವಣಿಗೆಗೆ ಸರ್ಕಾರ ಹೆಚ್ಚು ಪ್ರೋತ್ಸಾಹ ನೀಡಲಿದೆ.

ಮೂಲಭೂತ ಸೌಕರ್ಯಗಳ ಸ್ಥಾಪನೆ

ಮೂಲಭೂತ ಸೌಕರ್ಯಗಳ ಸ್ಥಾಪನೆ

ಹೊಸ ಸೀಮಾಂಧ್ರ ರಾಜ್ಯದಲ್ಲಿ ರಾಜಭವನ, ಹೈಕೋರ್ಟ್, ಸರಕಾರಿ ಕಾರ್ಯಾಲಯ, ವಿಧಾನಸಭೆ, ವಿಧಾನಪರಿಷತ್ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ವಿಶೇಷ ಆರ್ಥಿಕ ಸಹಕಾರವನ್ನು ಒದಗಿಸಿಕೊಡಲಿದೆ. ಶಿಥಿಲಾವಸ್ಥೆಯಲ್ಲಿರುವ ಅರಣ್ಯ ಭೂಮಿಗಳನ್ನು ಡಿನೋಟಿಫಿಕೇಶನ್

ಆಂಧ್ರಪ್ರದೇಶದ ರಾಜ್ಯಪಾಲರೇ ರಾಜ್ಯಪಾಲ

ಆಂಧ್ರಪ್ರದೇಶದ ರಾಜ್ಯಪಾಲರೇ ರಾಜ್ಯಪಾಲ

ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೆ ಆಂಧ್ರಪ್ರದೇಶದ ರಾಜ್ಯಪಾಲರೇ ರಾಜ್ಯಪಾಲರಾಗಿ ಮುಂದುವರಿಯಲಿದ್ದಾರೆ. ಜನರ ಭದ್ರತೆ ಹಾಗೂ ರಾಜ್ಯಗಳಲ್ಲಿರುವ ಜನರ ಆಸ್ತಿಯ ರಕ್ಷಣೆ ಮಾಡುವ ಗುರುತರ ಜವಾಬ್ದಾರಿ ರಾಜ್ಯಪಾಲರ ಮೇಲಿದೆ.

ರಾಯಲಸೀಮೆ ಜನತೆ ತತ್ತರ

ರಾಯಲಸೀಮೆ ಜನತೆ ತತ್ತರ

ಆಂಧ್ರ ಕರಾವಳಿ, ರಾಯಲಸೀಮೆ ಸರ್ಕಾರಿ ಕಚೇರಿ, ಶಾಲಾ ಕಾಲೇಜು ಎಲ್ಲವೂ ಬಂದ್ ಆಗಿದೆ

ರಾಯಲಸೀಮೆ ಜನತೆ ತತ್ತರ

ರಾಯಲಸೀಮೆ ಜನತೆ ತತ್ತರ

ಆಂಧ್ರ ಕರಾವಳಿ, ರಾಯಲಸೀಮೆ ಜನತೆ ತತ್ತರ ರಾಯಲಸೀಮೆ ಜನತೆ ಹಾಗೂ ರಾಜಕೀಯ ಪಕ್ಷದವರು ಕೆಲವರು ಮೌನ ಪ್ರತಿಭಟನೆ ಆಚರಿಸಿದೆ.

ಬಿಕೋ ಎನ್ನುತ್ತಿರುವ ನಗರದ ರಸ್ತೆಗಳು

ಬಿಕೋ ಎನ್ನುತ್ತಿರುವ ನಗರದ ರಸ್ತೆಗಳು

ಆಂಧ್ರ ಕರಾವಳಿ, ರಾಯಲಸೀಮೆ ಜನತೆ ತತ್ತರ ರಾಯಲಸೀಮೆ ಜನತೆ ತತ್ತರ

ರಾಯಲಸೀಮೆ ಜನತೆ ತತ್ತರ

ರಾಯಲಸೀಮೆ ಜನತೆ ತತ್ತರ

ಆಂಧ್ರ ಕರಾವಳಿ, ರಾಯಲಸೀಮೆ ಜನತೆ ತತ್ತರ ರಾಯಲಸೀಮೆ ಜನತೆ ತತ್ತರ

ಪ್ರತಿಭಟನಾ ಮೆರವಣಿಗೆ

ಪ್ರತಿಭಟನಾ ಮೆರವಣಿಗೆ

ಆಂಧ್ರ ಕರಾವಳಿ, ರಾಯಲಸೀಮೆ ಜನತೆ ತತ್ತರ ರಾಯಲಸೀಮೆ ಜನತೆ ತತ್ತರ

ಬೈಕ್ ಹತ್ತಿ ಪ್ರತಿಭಟನಾ ಮೆರವಣಿಗೆ

ಬೈಕ್ ಹತ್ತಿ ಪ್ರತಿಭಟನಾ ಮೆರವಣಿಗೆ

ಟಿಡಿಪಿ ಹಾಗೂ ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೈಕ್ ಹತ್ತಿ ಪ್ರತಿಭಟನಾ ಮೆರವಣಿಗೆ

ಕಾರ್ಯಕರ್ತರಿಂದ ರಸ್ತೆ ತಡೆ

ಕಾರ್ಯಕರ್ತರಿಂದ ರಸ್ತೆ ತಡೆ

ಆಂಧ್ರ ಕರಾವಳಿ, ರಾಯಲಸೀಮೆ ಜನತೆ ತತ್ತರ ರಾಯಲಸೀಮೆ ಜನತೆ ತತ್ತರ

English summary
Normal life was thrown out of gear in coastal Andhra Pradesh and Rayalaseema regions of Andhra Pradesh due to a bandh called against the Centre's move to table the Telangana Bill in Parliament today(Feb.14).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X