ಪಶುಸಂಗೋಪನಾ ಸಚಿವರಿಗೆ ಮಾಸ್ಕ್ ರವಾನೆ; ವಿನೂತನ ಪ್ರತಿಭಟನೆ!

ಹೈದರಾಬಾದ್, ಆಗಸ್ಟ್ 19 : ವಿವಿಧ ಸಂಘಟನೆಗಳ ಕಾರ್ಯಕರ್ತರು ಸಚಿವರಿಗೆ ಮಾಸ್ಕ್ ಕಳಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸುತ್ತಿವೆ. ಸಚಿವರು ಹಲವಾರು ಸಮಯದಲ್ಲಿ ಮಾಸ್ಕ್ ಧರಿಸದೇ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Recommended Video

      ಗಣಪತಿ ಹಬ್ಬ ಮಾಡೋರು ಈ ನಿಯಮ ಪಾಲಿಸಲೇ ಬೇಕು | Oneindia Kannada

      ತೆಲಂಗಾಣದ ಪಶುಸಂಗೋಪನಾ ಸಚಿವ ತಲಸನಿ ಶ್ರೀನಿವಾಸ ಯಾದವ್‌ಗೆ ಕಾರ್ಯಕರ್ತರು ಮಾಸ್ಕ್ ರವಾನೆ ಮಾಡುತ್ತಿದ್ದಾರೆ. ಫೇಸ್ ಮಾಸ್ಕ್, ಸ್ಯಾನಿಟೈಸರ್ ಮತ್ತು ಪ್ಯಾರಾಸಿಟಮಲ್ ಮಾತ್ರೆಗಳನ್ನು ಸಚಿವರಿಗೆ ಕಳಿಸಲಾಗುತ್ತಿದೆ.

      ಹೈದರಾಬಾದ್‌ನಿಂದ ಸ್ಪೀಡ್ ಪೋಸ್ಟ್ ಮೂಲಕ ಸಚಿವರಿಗೆ ಮಾಸ್ಕ್ ಕಳಿಸಲಾಗುತ್ತಿದೆ. ಇದರ ಜೊತೆಗೆ ಸಚಿವ ತಲಸನಿ ಶ್ರೀನಿವಾಸ ಯಾದವ್‌ ಮಾಸ್ಕ್ ಇಲ್ಲದೆ ಸಂಚಾರ ನಡೆಸುತ್ತಿರುವ, ಕಾರ್ಯಕ್ರಮದಲ್ಲಿ ಪಾಲ್ಗೊಂಡ ಫೋಟೋಗಳನ್ನು ಕಳಿಸಲಾಗಿದೆ.

      Sending Mask For Minister Unique Protest In Telangana

      ಸಚಿವರಿಗೆ ಪತ್ರ : ಕೋವಿಡ್ ಸಂದರ್ಭದಲ್ಲಿ ನೀವು ಮಾಸ್ಕ್ ಇಲ್ಲದೇ ಸಂಚಾರ ನಡೆಸುವುದನ್ನು ನೋಡಿದ್ದೇವೆ. ನಿಮ್ಮ ಬಗ್ಗೆ ನಮಗೆ ಅಪಾರವಾದ ಕಾಳಜಿ ಇದೆ. ದಯವಿಟ್ಟು ಮಾಸ್ಕ್ ಧರಿಸಿ ಸಂಚಾರ ನಡೆಸಿ, ಅದಕ್ಕಾಗಿ ಮಾಸ್ಕ್ ಕಳಿಸುತ್ತಿದ್ದೇವೆ ಎಂಬ ಪತ್ರವನ್ನು ಸಚಿವರಿಗೆ ರವಾನೆ ಮಾಡಲಾಗುತ್ತಿದೆ.

      ತೆಲಂಗಾಣದಲ್ಲಿ ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 93,937. ಮಂಗಳವಾರ ಸಹ ರಾಜ್ಯದಲ್ಲಿ 1,682 ಹೊಸ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಇದುವರೆಗೂ 711 ಜನರು ಮೃತಪಟ್ಟಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+