ಸಿಂಧುಗೆ ಜಿಲ್ಲಾಧಿಕಾರಿ ನೇಮಕಾತಿ ಪತ್ರ ಹಸ್ತಾಂತರಿಸಿದ ನಾಯ್ಡು
ಜಿಲ್ಲಾಧಿಕಾರಿ ನೇಮಕ ಪತ್ರವನ್ನು ಪಡೆದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಂದ ಜುಲೈ 28ರಂದು ನೇಮಕಾತಿ ಪತ್ರ ಸ್ವೀಕಾರ.
ಹೈದರಾಬಾದ್, ಜುಲೈ 28: ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಅವರಿಗೆ ಜಿಲ್ಲಾಧಿಕಾರಿ ಹುದ್ದೆಯ ನೇಮಕಾತಿ ಪತ್ರವನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಿಂಧು ಅವರಿಗೆ ಶುಕ್ರವಾರ ಹಸ್ತಾಂತರಿಸಿದರು.
ಹೈದರಾಬಾದ್ ನಲ್ಲಿರುವ ತಮ್ಮ ಕಚೇರಿಯಲ್ಲಿ ಸಿಂಧು ಅವರಿಗೆ ನೇಮಕಾತಿ ಪತ್ರ ನೀಡಿದ ನಾಯ್ಡು, ಅವರ ಮುಂದಿನ ಜೀವನಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ, ಸಿಂಧು ಅವರ ತಂದೆ-ತಾಯಿ ಕೂಡ ಹಾಜರಿದ್ದರು.

ರಿಯೊ ಡಿ ಜನೈರೋದಲ್ಲಿ ಕಳೆದ ವರ್ಷ ನಡೆದಿದ್ದ ಒಲಿಂಪಿಕ್ಸ್ ಪಂದ್ಯಾವಳಿಯ ಮಹಿಳೆಯ ಬ್ಯಾಡ್ಮಿಂಟನ್ ವಿಭಾಗದಲ್ಲಿ ಸಿಂಧು ಅವರು ಬೆಳ್ಳಿ ಗೆದ್ದಿದ್ದರು. ಈ ಮೂಲಕ, ಭಾರತಕ್ಕೆ ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ತಂದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಸಿಂಧು ಪಾತ್ರರಾಗಿದ್ದರು.
Issued an appointment order to @Pvsindhu1 for the post of Group-1 officer. Hopeful that she'll bring more laurels to the country. pic.twitter.com/7xAqv0j5zf
— N Chandrababu Naidu (@ncbn) July 27, 2017
ಆ ಸಂದರ್ಭದಲ್ಲಿಯೇ, ಆಂಧ್ರಪ್ರದೇಶ ಸರ್ಕಾರವು ಸಿಂಧು ಅವರಿಗೆ ಗೆಜೆಟೆಡ್ ಗ್ರೇಡ್ -1 ಹುದ್ದೆ ನೀಡುವುದಾಗಿ ಘೋಷಿಸಿತ್ತು.












Click it and Unblock the Notifications