• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶ್ವೇತಾ ಬಸುರನ್ನು ವೇಶ್ಯೆ ಎಂದವರಿಗೆ ಆಪತ್ತು?

By Mahesh
|

ಹೈದರಾಬಾದ್, ನ.5: ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ ನಟಿ ಶೇತಾ ಬಸು ಪ್ರಸಾದ್ ಅವರಿಗೆ ಬಿಡುಗಡೆ ಭಾಗ್ಯ ಸಿಕ್ಕಿದ ಬೆನ್ನಲ್ಲೇ ಹಲವರಿಗೆ ಆತಂಕ ಶುರುವಾಗಿದೆ. ಪುನರ್ವಸತಿ ಕೇಂದ್ರದಿಂದ ಮನೆ ತಲುಪಿದ ಶ್ವೇತಾ ಅವರು ಈಗ ತಮ್ಮ ಬಗ್ಗೆ ಬಂದಿರುವ ವರದಿಗಳನ್ನು ಅಲ್ಲಗೆಳೆದಿದ್ದು, ಇಲ್ಲಸಲ್ಲದ ಕಥೆ ಕಟ್ಟಿರುವ ಮಾಧ್ಯಮಗಳ ವಿರುದ್ಧ ಸೇಡು ತೀರಿಸಿಕೊಳ್ಳಲಿದ್ದಾರಂತೆ.

23 ವರ್ಷ ವಯಸ್ಸಿನ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಶ್ವೇತಾ ಅವರು ಹೈಟೆಕ್ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಆರೋಪ ಹೊತ್ತಿದ್ದರು. ಕೆಳ ಹಂತದ ನ್ಯಾಯಾಲಯ ಅವರನ್ನು ಪುನರ್ವಸತಿ ಕೇಂದ್ರದಲ್ಲಿ ಇರಿಸುವಂತೆ ಸೆ.30,2014ರಂದು ಆದೇಶಿಸಿತ್ತು. ಅದರೆ, ನಂತರ ಶ್ವೇತಾ ಅವರ ತಾಯಿ ಸಲ್ಲಿಸಿದ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ ಅವರನ್ನು ಮನೆಗೆ ಕಳಿಸಿತ್ತು. [ಶ್ವೇತಾ ಬಸು ಪ್ರಸಾದ್ ಗೆ ಬಿಡುಗಡೆ ಭಾಗ್ಯ]

ಶ್ವೇತಾ ಅವರು ಬಂಜಾರಾ ಹಿಲ್ಸ್ ನ ಹೋಟೆಲ್ ನಲ್ಲಿ ಪಿಂಪ್ ಹಾಗೂ ಮತ್ತೊಬ್ಬ ಉದ್ಯಮಿ ಜೊತೆ ಸಿಕ್ಕಿಬಿದ್ದಿದ್ದರು. ಅದರೆ, ಆನಂತರದ ಕಥೆ ಬಗ್ಗೆ ಯಾರಿಗೂ ಸ್ಪಷ್ಟ ಮಾಹಿತಿ ಇರಲಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ವರದಿಗಳೆಲ್ಲವೂ ಸತ್ಯಕ್ಕೆ ದೂರವಾಗಿದೆ. ನಾನು ಯಾವ ಪತ್ರಿಕೆಗೂ ಹೇಳಿಕೆ ನೀಡಿಲ್ಲ. ಇಂಡಸ್ಟ್ರೀ ವಿರುದ್ಧ ಮಾತನಾಡಿಲ್ಲ. ನನ್ನನ್ನು ಯಾರೂ ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಿಲ್ಲ ಎಂದು ಶ್ವೇತಾ ಹೇಳಿದ್ದಾರೆ.

'ನಾನು ಕಸ್ಟಡಿಯಲ್ಲಿದ್ದಾಗ ಯಾರೊಂದಿಗೂ ಮಾತನಾಡುವ ಅವಕಾಶವಿರಲಿಲ್ಲ. ನನ್ನ ಪೋಷಕರ ಜೊತೆಗೆ ಮಾತನಾಡಲು ಆಗುತ್ತಿರಲಿಲ್ಲ. ಹೀಗಿರುವಾಗ ಮಾಧ್ಯಮಗಳ ಮುಂದೆ ನನ್ನ ಕಥೆ ಹೇಗೆ ಹೇಳಿಕೊಳ್ಳಲು ಸಾಧ್ಯ?' ನನ್ನ ಕುಟುಂಬ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದೆ ನೆರವು ಕೋರಿ ನಿರ್ಮಾಪಕರ ಬಳಿ ಹೋದೆ. ಕೆಲ ನಿರ್ಮಾಪಕ ಹಾಗೂ ಸಿನಿಮಾ ರಂಗದವರು ನನ್ನನ್ನು ಹೈಟೆಕ್ ವೇಶ್ಯಾವಾಟಿಕೆಗೆ ದೂಡಿದರು ಎಂಬರ್ಥದಲ್ಲಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಇವೆಲ್ಲವೂ ಶುದ್ಧ ಸುಳ್ಳು ಎಂದು ಶ್ವೇತಾ ತಿಳಿಸಿದ್ದಾರೆ. [ವೇಶ್ಯಾಗೃಹದಲ್ಲಿದ್ದ ನಟಿ ಶ್ವೇತಾ ಬಸು ಬಂಧನ]

ನನ್ನ ವಿರುದ್ಧ ಬರೆದಿರುವ ಮಾಧ್ಯಮ ಸಂಸ್ಥೆಗಳ ಪಟ್ಟಿ ಮಾಡಲಾಗುತ್ತಿದೆ. ಎಲ್ಲರ ವಿರುದ್ಧ ಕಾನೂನಿನ ಮೂಲಕ ಕಠಿಣ ಕ್ರಮ ಜರುಗಿಸಲಾಗುವುದು. ನನ್ನನ್ನು ಒಂದು ಮಾತು ಕೇಳದೆ ಇಲ್ಲಸಲ್ಲದ ವರದಿ ಮಾಡಿರುವುದು ಎಷ್ಟು ಸರಿ? ಎಂದು ಡಿಎನ್ಎ ಪತ್ರಿಕೆ ಜೊತೆ ಮಾತನಾಡುತ್ತಾ ಪ್ರಶ್ನಿಸಿದ್ದಾರೆ.

ಹಿಂದಿಯಲ್ಲಿ ಮಕ್ ಡಿ ಚಿತ್ರದ ನಟನೆಗಾಗಿ ಬಾಲನಟಿಯಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿರುವ 23 ವರ್ಷ ವಯಸ್ಸಿನ ಶ್ವೇತಾ ಬಸು ಪ್ರಸಾದ್ ಅವರು ಬೆಂಗಾಳಿ, ತೆಲುಗು, ತಮಿಳು ಚಿತ್ರಗಳಲ್ಲೂ ನಟಿಸಿದ್ದಾರೆ.ಟಾಲಿವುಡ್ ಹಾಗೂ ಬಾಲಿವುಡ್ ನ ಅನೇಕ ನಟ, ನಟಿಯರು, ಗಣ್ಯರು ಶ್ವೇತಾಗೆ ಬೆಂಬಲ ವ್ಯಕ್ತಪಡಿಸಿದ್ದರು. ಶ್ವೇತಾ ಬಸು ಅವರ ಪ್ರಕರಣದ ಬಗ್ಗೆ ಮಾಧ್ಯಮಗಳು ಅತಿಯಾಗಿ ಸ್ಪಂದಿಸಿವೆ ಎಂದು ಕಿಡಿಕಾರಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After being released from remand home in Hyderabad, actress Shweta Basu is all set to take legal actions against the journalist and newspaper which wrongly quoted her as saying that she was forced into prostitution as "all doors were closed" for her in the entertainment industry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more