ಉಪನ್ಯಾಸಕನ ಮೇಲೆ ವಿದ್ಯಾರ್ಥಿನಿಯಿಂದ ಆಸಿಡ್ ದಾಳಿ
ಗುಂಟೂರು, ಡಿ.21: ಪ್ರೀತಿಸಿ ಕೈಕೊಟ್ಟ ಉಪನ್ಯಾಸಕನಿಗೆ ಪಾಠ ಕಲಿಸಲು ನಿರ್ಧರಿಸಿದ ವಿದ್ಯಾರ್ಥಿನಿಯೊಬ್ಬಳು ಆಸಿಡ್ ದಾಳಿ ನಡೆಸಿದ ಘಟನೆ ಜಿಲ್ಲೆಯ ನಲ್ಲಪಾಡು ಸರ್ಕಾರಿ ಕಾಲೇಜಿನಲ್ಲಿ ನಡೆದಿದೆ. ಆಸಿಡ್ ದಾಳಿಯಿಂದ ಉಪನ್ಯಾಸಕನ ಕಣ್ಣುಗಳ ದೃಷ್ಟಿ ನಂದಿ ಹೋಗಿದೆ. ವಿದ್ಯಾರ್ಥಿನಿಗೂ ಪೆಟ್ಟಾಗಿದೆ.
ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿ ಬೇರೆಯವಳನ್ನು ಕಟ್ಟಿಕೊಂಡ ಹಳೆ ಉಪನ್ಯಾಸಕನ ಮೇಲೆ ಸ್ನಾತಕೋತ್ತರ ಪದವಿ(ಎಂಎಸ್ ಸಿ ಗಣಿತ) ವಿದ್ಯಾರ್ಥಿನಿಯೊಬ್ಬಳು ಆಸಿಡ್ ದಾಳಿ ನಡೆಸಿದ ಘಟನೆಯಿಂದ ಗುಂಟೂರು ಜಿಲ್ಲೆ ಜನತೆ ಬೆಚ್ಚಿದೆ. ಸೌಜನ್ಯ-ವೆಂಕಟರಮಣನ ಭಗ್ನ ಪ್ರೇಮಕಥೆ ಬಗ್ಗೆ ನಾನಾ ಕಥೆಗಳು ಕ್ಯಾಂಪಸ್ಸಿನಲ್ಲಿ ಸುತ್ತಾಡುವ ಮೊದಲೇ ಆಸಿಡ್ ದಾಳಿ ದುರಂತ ಸಂಭವಿಸಿದೆ.

ಈ ಮೊದಲು ವೆಂಕಟರಮಣ ನರಸರಾವ್‌ಪೇಟ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದ. ಸೌಜನ್ಯ ಅವನ ವಿದ್ಯಾರ್ಥಿನಿಯಾಗಿದ್ದಳು. ಇವರಿಬ್ಬರಲ್ಲೂ ಪ್ರೇಮಾಂಕುರವಾಯಿತು. ಅದು ಮದುವೆ ಹಂತಕ್ಕೂ ಬಂದಿತ್ತು. ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಸೌಜನ್ಯಳಿಗೆ ಆಣೆ ಪ್ರಮಾನ ಮಾಡಿದ್ದ.
ಸೌಜನ್ಯ ತನ್ನ ಸ್ನಾತಕೋತ್ತರ ಪದವಿ ವ್ಯಾಸಂಗಕ್ಕಾಗಿ ವಿಶಾಖಪಟ್ಟಣಂಗೆ ತೆರಳಿದ್ದಳು. ವೆಂಕಟರಮಣ ನಲ್ಲಪಾಡುವಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ವರ್ಗಾವಣೆಯಾಗಿ ಹೋದ. ಸೌಜನ್ಯ ತಾನು ವೆಂಕಟರಮಣನ ನಿರೀಕ್ಷೆಯಲ್ಲೇ ಇದ್ದರೆ. ಅತ್ತ ವೆಂಕಟರಮಣ ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಬೇರೊಬ್ಬಳೊಂದಿಗೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದ.

ಘಟನೆ ವಿವರ : ಬುರ್ಖಾ ಧರಿಸಿದ್ದ ಯುವತಿ ಸೌಜನ್ಯ ತನ್ನ ಉಪನ್ಯಾಸಕ ವೆಂಕಟರಮಣ ಕಾಲೇಜ್ ಗೇಟ್‌ನಲ್ಲಿ ಬರುತ್ತಿದ್ದಂತೆ ಅವನ ಮೇಲೆ ಆಸಿಡ್ ಎರಚಿದ್ದಾಳೆ. ಮುಖದ ಮೇಲೆ ಆಸಿಡ್ ಬಿದ್ದು ಉಪನ್ಯಾಸಕ ವೆಂಕಟರಮಣ ತೀವ್ರ ಗಾಯಗೊಂಡಿದ್ದಾನೆ.
ಈ ಸಂದರ್ಭ ಸೌಜನ್ಯಳ ದಾಳಿ ತಡೆಯಲು ಮುಂದಾದ ವೆಂಕಟರಮಣ ಅವಳ ಕೈಗಳನ್ನು ಹಿಡಿದುಕೊಂಡಿದ್ದಾನೆ. ಈ ವೇಳೆ ಸೌಜನ್ಯಳ ಮುಖದ ಮೇಲೂ ಕೆಲವು ಹನಿಗಳು ಬಿದ್ದಿದ್ದು, ಆಕೆಯೂ ಗಾಯಗೊಂಡಿದ್ದಾಳೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ನರಸಿಂಹ ತಿಳಿಸಿದ್ದಾರೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications