'ಪವರ್ ಸ್ಟಾರ್ ಟ್ವಿಟ್ಟರ್ ಹ್ಯಾಕ್ ಆಗಿಲ್ಲ ಬ್ಲಾಕ್ ಆಗಿದೆ'

Posted By:
Subscribe to Oneindia Kannada

ಹೈದರಾಬಾದ್, ಮೇ 18: ಪ್ರಧಾನಿ ಮೋದಿ ಅವರಿಂದ ಮೆಚ್ಚುಗೆ ಪಡೆದ ತೆಲುಗಿನ 'ಪವನ್ ಸ್ಟಾರ್' ಪವನ್ ಕಲ್ಯಾಣ್ ಅವರು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರನ್ನು ಪವರ್ ಫುಲ್ ಆಗಿ ಉಪಯೋಗಿಸುತ್ತಿರುವುದು ಗೊತ್ತಿರುವ ವಿಷಯ.

ಮೋದಿ ಸರ್ಕಾರಕ್ಕೂ ಪವನ್ ಚುರುಕು ಮುಟ್ಟಿಸಿದ್ದರು. ಆದರೆ, ಮೇ 8ರಿಂದ ಪವನ್ ಕಲ್ಯಾಣ್ ಟ್ವಿಟ್ಟರ್ ಬಂದ್ ಆಗಿದೆ. ಈ ಬಗ್ಗೆ ಜನಸೇನಾ ಪಕ್ಷ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಪವನ್ ಕಲ್ಯಾಣ್ ಅವರ ಟ್ವಿಟ್ಟರ್ ಐಡಿ ಹ್ಯಾಕ್ ಆಗಿದೆ ಎಂಬ ಸುದ್ದಿಯನ್ನು ಜನಸೇನಾ ಪಕ್ಷ ಅಲ್ಲಗೆಳೆದಿದ್ದು, ಟ್ವಿಟ್ಟರ್ ಖಾತೆ ಬ್ಲಾಕ್ ಆಗಿದೆ ಅಷ್ಟೇ, ಹ್ಯಾಕ್ ಆಗಿಲ್ಲ ಎಂದಿದೆ.

Pawan Kalyan Twitter Account Blocked Not Hacked, Confirmed By Janasena Party

ಟ್ವಿಟ್ಟರ್ ಖಾತೆಗೆ ಕನ್ನ ಹಾಕುವುದು ಮಾಮೂಲಿ ಸಂಗತಿಯಾಗಿದೆ. ಅಮಿತಾಬ್ ಬಚ್ಚನ್, ಹೃತಿಕ್ ರೋಷನ್, ರಜನಿಕಾಂತ್ ಖಾತೆ ಕೂಡಾ ಈ ಸಮಸ್ಯೆ ಎದುರಿಸಿತ್ತು. ಆದರೆ, ಪವನ್ ಅವರು ಲಾಗ್ ಇನ್ ಆದರೂ ಟ್ವೀಟ್ ಮಾಡಲು ಆಗುತ್ತಿಲ್ಲ. ತಾಂತ್ರಿಕ ಸಮಸ್ಯೆ ಎಂದು ಸುಮ್ಮನಾಗಿದ್ದಾರೆ, ಈ ಬಗ್ಗೆ ಟ್ವಿಟ್ಟರ್ ಸಂಸ್ಥೆಗೆ ತಿಳಿಸಲಾಗಿದೆ.

2014ರಲ್ಲಿ ಟ್ವಿಟ್ಟರ್ ಲೋಕಕ್ಕೆ ಕಾಲಿಟ್ಟ ಪವನ್ ಗೆ 1.83 ಮಿಲಿಯನ್ ಹಿಂಬಾಲಕರಿದ್ದಾರೆ. ಮೇ 7ರಂದು ಉತ್ತರ ಭಾರತ ಮೂಲದ ಐಎಎಸ್ ಅಧಿಕಾರಿಗಳ ಬಗ್ಗೆ ಕೊನೆಯದಾಗಿ ಟ್ವೀಟ್ ಮಾಡಿದ್ದರು.

Pawan Kalyan Twitter Account Blocked Not Hacked, Confirmed By Janasena Party

ransomeware ವಾನ್ನಾಕ್ರೈ ವೈರಾಣು ದಾಳಿಯ ಭೀತಿ ಎಲ್ಲೆಡೆ ಇರುವುದರಿಂದ ಪವನ್ ಖಾತೆಗೂ ತೊಂದರೆಯಾಗಿದೆ ಎಂಬ ಆತಂಕ ಎದುರಾಗಿತ್ತು. ಆದರೆ, ಎಲ್ಲವೂ ಶೀಘ್ರವೇ ಸರಿ ಹೋಗಲಿದೆ ಎಂದು ಜನಸೇನಾ ಪಕ್ಷ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Jana Sena Party president, Pawan Kalyan tried to access his Twitter account for the past three days. But, he was unable to login to the account. An official statement released by the Jana Sena Party officials.
Please Wait while comments are loading...