ಲಾಲೂ ಪ್ರಸಾದ್ ಯಾದವ್ ಜತೆಗೆ ಓವೈಸಿ ಜುಗಲ್ ಬಂದಿ?

Posted By:
Subscribe to Oneindia Kannada

ಹೈದಾರಾಬಾದ್, ಆಗಸ್ಟ್ 9: ಕೋಮವಾದಿ ಶಕ್ತಿಗಳ ವಿರುದ್ಧ ಒಂಟಿಯಾಗಿ ಹೋರಾಡಲು ಸಾಧ್ಯವಿಲ್ಲ. ಹಾಗಾಗಿ, ನೀವು ದೊಡ್ಡ ಮಟ್ಟದಲ್ಲಿ ಹೋರಾಡಬೇಕು ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರನ್ನು ಆಗ್ರಹಿಸಿದ್ದಾರೆ. ಈ ಮೂಲಕ ಬಿಜೆಪಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ ಓವೈಸಿ.

2019ರಲ್ಲಿ ಮೋದಿಗೆ ಸವಾಲೊಡ್ಡಲು ಯಾರಿಗೂ ಸಾಧ್ಯವಿಲ್ಲ: ನಿತೀಶ್

ಗುಜರಾತ್ ನಲ್ಲಿ ಮಂಗಳವಾರ ನಡೆದ ರಾಜ್ಯಸಭಾ ಚುನಾವಣೆ ವೇಳೆ, ಅಲ್ಲಿನ ಕಾಂಗ್ರೆಸ್ ಹಾಗೂ ಮುಸ್ಲಿಂ ಸಮುದಾಯದ ಪ್ರಮುಖ ನಾಯಕ ಅಹ್ಮದ್ ಪಟೇಲ್ ಅವರ ಜಯವನ್ನು ಕಸಿದುಕೊಳ್ಳಲು ಬಿಜೆಪಿಯು ನಡೆದಿದ ರಾಜಕೀಯ ತಂತ್ರಗಾರಿಕೆ ತೋರಿದ್ದನ್ನು ಖಂಡಿಸಿದ ಅವರು, ಬಿಜೆಪಿಯಿಂದ ಪೆಟ್ಟು ತಿಂದವರು ಆ ಪಕ್ಷದ ವಿರುದ್ಧ ಹೋರಾಡಬೇಕೆಂದು ಕರೆ ನೀಡಿದರು.

Owaisi urges Lalu Prasad Yadav to fight strong against Communal forces

ಕೋಮುವಾದಿ ಶಕ್ತಿಗಳಿಂದ ಅಪಮಾನಿತರಾದವರಲ್ಲಿ ಲಾಲೂ ಕೂಡಾ ಒಬ್ಬರು ಎಂದು ಹೇಳಿದ ಓವೈಸಿ, ಕೋಮುವಾದಿ ಶಕ್ತಿಗಳನ್ನು ಹತ್ತಿಕ್ಕುವುದು ಅಷ್ಟು ಸುಲಭದ ಕೆಲಸವಲ್ಲ. ಹಾಗಾಗಿ, ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ. ಈ ವಿಚಾರದಲ್ಲಿ ನಾವು, ಲಾಲು ಜತೆಗೆ ನಿಲ್ಲಲು ಸಿದ್ಧ ಎಂದು ಘೋಷಿಸಿದರು.

Lalu Prasad Yadav caught under Disproportionate case filed by CBI

ಮೇವು ಹಗರಣ: ಲಾಲೂ ಪ್ರಸಾದ್ ವಿರುದ್ಧ ಮತ್ತೆ ತನಿಖೆಗೆ ಆದೇಶ

ಬಿಹಾರದಲ್ಲಿ ಇತ್ತೀಚೆಗೆ ನಡೆದಿದ್ದ ನಾಟಕೀಯ ವಿದ್ಯಮಾನದಲ್ಲಿ, ಲಾಲೂ ನೇತೃತ್ವದ ಆರ್ ಜೆಡಿಯೊಂದಿಗೆ ಸ್ನೇಹ ಕಳೆದುಕೊಂಡ ಮುಖ್ಯಮಂತ್ರಿ ನಿತೀಶ್ ಕುಮಾರ್, ಬಿಜೆಪಿ ಜತೆಗೆ ಸೇರಿ ನೂತನ ಸರ್ಕಾರ ರಚಿಸಿದ್ದರು. ಹಾಗಾಗಿ, ಓವೈಸಿ ಅವರು ಲಾಲೂ ಜತೆಗೆ ಮೈತ್ರಿ ಮಾಡಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Lalu Yadav sb you can't fight communal forces alone,if you have to fight them then do it strongly: Asaduddin Owaisi
Please Wait while comments are loading...