ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿವೃತ್ತಿಗೆ ಕೇವಲ 4 ದಿನ ಬಾಕಿ ಇರುವಾಗ ನರ್ಸ್ ಕೊವಿಡ್ 19ನಿಂದ ಸಾವು

|
Google Oneindia Kannada News

ಹೈದರಾಬಾದ್, ಜೂನ್ 27: ನಿವೃತ್ತಿಗೆ ಇನ್ನೇನು ನಾಲ್ಕೇ ದಿನ ಬಾಕಿ ಇರುವಾಗ ನರ್ಸ್‌ ಒಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

Recommended Video

ನ್ಯಾಯ ಕೊಡಿಸಬೇಕಾದ ಅವರೇ ಅನ್ಯಾಯ ಮಾಡುತ್ತಿದ್ದಾರೆ | Davangere | Lady pleads for Justice | Oneindia Kannada

ಹೈದರಾಬಾದಿನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ನರ್ಸ್ ಒಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್ ಅಂತ್ಯಕ್ಕೆ ಅವರು ನಿವೃತ್ತಿಹೊಂದಬೇಕಿತ್ತು. ಇನ್ನು ಕೇವಲ ನಾಲ್ಕು ದಿನವಷ್ಟೇ ಬಾಕಿ ಇತ್ತು.

Breaking: ಭಾರತದಲ್ಲಿ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡ ಕೊರೊನಾ ಸೋಂಕುBreaking: ಭಾರತದಲ್ಲಿ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡ ಕೊರೊನಾ ಸೋಂಕು

ಆರೋಗ್ಯ ಕ್ಷೀಣಿಸುತ್ತಿದ್ದ ಕಾರಣ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್‌ನಲ್ಲಿ ಇರಿಸಿಲಾಗಿತ್ತು. ಆದರೆ ಯಾವುದೇ ಚೇತರಿಕೆ ಕಂಡುಬಂದಿರಲಿಲ್ಲ. ಶುಕ್ರವಾರ ಸಂಜೆ ಸಾವನ್ನಪ್ಪಿದ್ದಾರೆ.

Nurse Dies Of Coronavirus In Telangana 4 Days Before Retirement

ನರ್ಸ್ ಅವರ ಸಾವಿಗೆ ತೆಲಂಗಾಣ ಗವರ್ನರ್ ಡಾ. ತಮಿಳಿಸಾಯ್ ಸುಂದರರಾಜನ್ ಶೋಕ ವ್ಯಕ್ತಪಡಿಸಿದ್ದಾರೆ.ಹೈದರಾಬಾದಿನಲ್ಲಿ ಇದುವರೆಗೆ ಯಾವುದೇ ವೈದ್ಯರು ಅಥವಾ ನರ್ಸ್ ಕೊರೊನಾದಿಂದ ಮೃತಪಟ್ಟಿರಲಿಲ್ಲ.

ಗಾಂಧಿ ಆಸ್ಪತ್ರೆಯ ಇಬ್ಬರು ಮೇಲ್ವಿಚಾರಕರಿಗೆ ಕೊರೊನಾ ಸೋಂಕು ತಗುಲಿತ್ತು. ದೇಶದಲ್ಲಿ ಒಂದೇ ದಿನ 18 ಸಾವಿರ ಕೊರೊನಾ ಸೋಂಕು ದಾಖಲಾಗಿದೆ.ತೆಲಂಗಾಣದಲ್ಲಿ ಶುಕ್ರವಾರ 78 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೂ 4766 ಮಂದಿ ಗುಣಮುಖರಾಗಿದ್ದಾರೆ. ಒಂದೇ ದಿನ ಏಳು ಮಂದಿ ಮೃತಪಟ್ಟಿದ್ದಾರೆ. ಒಟ್ಟು 237 ಮಂದಿ ಇದುವರೆಗೆ ಸಾವನ್ನಪ್ಪಿದ್ದಾರೆ.

English summary
A head nurse of the Government General and Chest Hospital in Hyderabad died after testing positive from Covid-19. The senior nurse, who was set to retire by the end of June, was admitted to Gandhi Hospital in a critical condition
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X