'ಚಡ್ಡಿ ಬನಿಯನ್' ಗ್ಯಾಂಗ್ ಲೀಡರ್ ಗುಜರಾತ್ ನಲ್ಲಿ ತಗಲ್ಹಾಕಿಕೊಂಡ

ಹೈದರಾಬಾದ್, ಆಗಸ್ಟ್ 15: ಕುಖ್ಯಾತ 'ಚಡ್ಡಿ ಬನಿಯನ್' ಗ್ಯಾಂಗ್ ನ ಲೀಡರ್ ಪಿ.ರಾಮ ಬಧಿಯಾನನ್ನು ರಚಕೊಂಡ ಪೊಲೀಸ್ ಅಧಿಕಾರಿಗಳು ಬಂಧಿಸಿ, 10 ಲಕ್ಷ ರುಪಾಯಿ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಈ ತಂಡವು ದರೋಡೆ ಮಾಡುತ್ತಿದ್ದ ರೀತಿ ವಿಲಕ್ಷಣವಾಗಿತ್ತು.

ರಾತ್ರಿ ವೇಳೆ ದರೋಡೆಗಿಳಿಯುವ ತಂಡದ ಸದಸ್ಯರು ಚಡ್ಡಿ-ಬನಿಯನ್ ಮಾತ್ರ ಧರಿಸುತ್ತಾರೆ. ನಲವತ್ತೇಳು ವರ್ಷದ ರಾಮನನ್ನು ಗುಜರಾತ್ ನ ದಾಹೋದ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಆತ ಆ ಜಿಲ್ಲೆಯ ಸಹಾದಾ ಗ್ರಾಮದವನು. ಅವನನ್ನು ತೆಲಂಗಾಣಕ್ಕೆ ಕರೆತರುವ ಮುಂಚೆ ದಾಹೋದ್ ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು.

ಒಂದು ಕೇಜಿ ಬೆಳ್ಳಿ, ಮೂರು ಸಾವಿರ ನಗದು, ಚಿನ್ನಾಭರಣಗಳನ್ನು ಈ ಹಿಂದೆ ಪೊಲೀಸರು ವಶಪಡಿಸಿಕೊಂಡಿದ್ದರು. ಈ ತಿಂಗಳ ಆರಂಭದಲ್ಲಿ ರಚಕೊಂಡ ಪೊಲೀಸರು ಇದೇ ಗ್ಯಾಂಗ್ ನ ಕಿಶನ್ ಬಧಿಯಾ, ರವೋಜಿ, ಭರತ್ ಸಿಂಗ್ ನನ್ನು ಬಂಧಿಸಿದ್ದರು.

Notorious Chaddi Baniyan gang leader nabbed by police

ರಾಮನ ಇತರ ಮೂವರು ಸಹಚರರಾದ ಖಾಜು ಮಾವೋಜಿ, ಪರ್ಮರ್ ಸಂಜಯ್ ಹಾಗು ಪರ್ಮರ್ ಮೇಗ್ಜಿ ತಲೆ ಮರೆಸಿಕೊಂಡಿದ್ದಾರೆ. ಈ ದರೋಡೆಕೋರರ ಬಗ್ಗೆ ಮೊದಲಿಗೆ ಗಮನಕ್ಕೆ ಬಂದಿದ್ದು ಕಳೆದ ವರ್ಷ ಡಿಸೆಂಬರ್ ನಲ್ಲಿ. ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯದಲ್ಲಿ ಚಡ್ಡಿ-ಬನಿಯನ್ ನೊಂದಿಗೆ ಹಾಗೂ ಕೆಲವು ಕಡೆ ಬರೀ ಚಡ್ಡಿಯೊಂದಿಗೆ ಈ ತಂಡ ಕಂಡುಬಂದಿತ್ತು.

ಯಾರೂ ಇಲ್ಲದ ವೇಳೆ ಮನೆ ದರೋಡೆ ಮಾಡುವುದನ್ನು ಈ ಗುಂಪು ಕಸುಬು ಮಾಡಿಕೊಂಡಿತ್ತು. ಈ ತಂಡದ ಮೇಲೆ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಇಪ್ಪತ್ತೊಂಬತ್ತು ದರೋಡೆ ಪ್ರಕರಣಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+