ಆರನೇ ಹೆರಿಗೆಯಲ್ಲಿ ಜನಿಸಿದ ಹೆಣ್ಣು ಶಿಶು 5 ಸಾವಿರಕ್ಕೆ ಮಾರಿದ ತಾಯಿ

ಹೈದರಾಬಾದ್, ಜುಲೈ 10: ನವಜಾತ ಹೆಣ್ಣು ಶಿಶುವನ್ನು ತಾಯಿಯೇ ಐದು ಸಾವಿರಕ್ಕೆ ಮಾರಿಕೊಂಡ ಬಗ್ಗೆ ತೆಲಂಗಾಣದ ಕಮ್ಮಂ ಜಿಲ್ಲೆಯಿಂದ ವರದಿಯಾಗಿದೆ. ಅಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಈಚೆಗೆ ಆರನೇ ಮಗುವಿಗೆ ಜನ್ಮ ನೀಡಿದ ಆಕೆ, ಬಡತನದ ಕಾರಣಕ್ಕೆ ಮಗುವಿನ ಮಾರಾಟ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಕೆಲಸ ಮಾಡುವ ನೌಕರರ ಸಹಾಯದಿಂದ ಭದ್ರಾಚಲಂನ ಮಹಿಳೆಯೊಬ್ಬರಿಗೆ ಆ ಮಹಿಳೆ ಐದು ಸಾವಿರ ರುಪಾಯಿಗೆ ಮಗುವನ್ನು ಮಾರಿಕೊಂಡಿದ್ದಾಳೆ. ಮಗುವನ್ನು ಖರೀದಿ ಮಾಡಿದ ಹಿರಿಯ ಮಹಿಳೆಗೆ ಮೊಮ್ಮಗು ಇರಲಿಲ್ಲ. ಆ ಕಾರಣಕ್ಕೆ ಹಣ ಕೊಟ್ಟು ಪಡೆದುದಾಗಿ ತಿಳಿಸಿದ್ದಾರೆ.

New born girl sell by mother for 5 thousand

ಇದೀಗ ಆರನೇ ಮಗುವಾಗಿರುವ ಮಹಿಳೆಗೆ ನಾಲ್ಕು ಹೆಣ್ಣು ಹಾಗೂ ಒಂದು ಗಂಡು ಮಗು ಇದೆ. ಆಕೆಯ ಪತಿ ಜಟಕಾ ಗಾಡಿ ಎಳೆಯುವ ಕೆಲಸ ಮಾಡುತ್ತಿದ್ದು, ವಿಪರೀತ ಕುಡಿಯುತ್ತಾನೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ಇತ್ತ ಮಗುವನ್ನು ಪಡೆದು ಹಣ ನೀಡಿದ ಮಹಿಳೆ, ಆಕೆಯ ಗಂಡು ಮಗುವಿಗೆ ಅನಾರೋಗ್ಯ ಇತ್ತು ಎಂಬ ಕಾರಣಕ್ಕೆ ಚಿಕಿತ್ಸೆಗೆ ಹಣ ನೀಡಿದ್ದೇನೆ ಎಂದಿದ್ದಾರೆ.

ಮಗು ಮಾರಾಟ ಮಾಡಿದ ಮಹಿಳೆ, ಅದನ್ನು ಖರೀದಿಸಿದವರು ಹಾಗೂ ಸಹಾಯ ಮಾಡಿದ ಆಸ್ಪತ್ರೆ ನೌಕರರ ವಿರುದ್ಧ ಬಾಲ ನ್ಯಾಯ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+