ಪ್ರಿಯಾ ಪ್ರಕಾಶ್ ಕಣ್ ಮಿಟುಕು ಹಾವಭಾವ ವಿರುದ್ಧ ದೂರು

Posted By:
Subscribe to Oneindia Kannada

ಹೈದರಾಬಾದ್, ಫೆಬ್ರವರಿ 14: 'ರಾಷ್ಟ್ರೀಯ ಕ್ರಷ್' ಎನಿಸಿಕೊಂಡಿರ ಮಲ್ಲು ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಹಾಗೂ ಚಿತ್ರ ತಂಡದ ವಿರುದ್ಧ ಇಲ್ಲಿನ ಫಲಕ್ನಾಮಾ ಪೊಲೀಸರಿಗೆ ದೂರು ನೀಡಲಾಗಿದೆ.

ಪ್ರಿಯಾ ಅವರ ಕಣ್ ಮಿಟುಕು, ಹಾವಭಾವ, ಗೀತ ಸಾಹಿತ್ಯ ಹಾಗೂ ದೃಶ್ಯಗಳು ಪ್ರವಾದಿಗಳಿಗೆ ಅಪಮಾನ ಮಾಡಿದ್ದಂತಿದೆ ಎಂದು ಮುಸ್ಲಿಮ್ ಯುವಕರ ಗುಂಪೊಂದು ದೂರು ನೀಡಿದೆ.

ಗ್ಯಾಲರಿ: ಕಣ್ ಮಿಟುಕು ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್

ಪ್ರಿಯಾ ಪ್ರಕಾಶ್ ಅವರ ವಿರುದ್ಧ ಮಾತ್ರ ದೂರು ನೀಡಿಲ್ಲ. ಈ ಚಿತ್ರದಲ್ಲಿ ಆ ಹಾಡಿನಲ್ಲಿ ಯಾರೇ ಅಭಿನಯಿಸಿದ್ದರೂ ನಮ್ಮ ಆಕ್ಷೇಪ ಇರುತ್ತಿತ್ತು. ಈ ಹಾಡಿನ ಸಾಹಿತ್ಯಕ್ಕೂ ಪ್ರವಾದಿ ಮೊಹಮ್ಮದರ ಜೀವನಕ್ಕೂ ಸಾಮ್ಯತೆ ಇದೆ, ಜತೆಗೆ ಮುಸ್ಲೀಂ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಶಬ್ದಗಳಿವೆ ದೂರಿನಲ್ಲಿ ಹೇಳಲಾಗಿದೆ.

Muslims in Hyderabad lodge police complaint against Priya Varrier's expressions

ಚಿತ್ರ ತಂಡದ ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ನಟಿ ಪ್ರಿಯಾ ವಿರುದ್ಧ ನೀಡಿರುವ ದೂರಲ್ಲ. ಹಾಡಿನಲ್ಲಿ ಬಳಸಿರುವ ಶಬ್ದಕ್ಕೆ ಮಾತ್ರ ವಿರೋಧ ವ್ಯಕ್ತವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಪ್ರಿಯಾ ಅಭಿನಯದ ಮಾಣಿಕ್ಯ ಮಲಯಾಯ ಪೂವಿ ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಗಿದೆ.

ಈ ಹಾಡಿನಲ್ಲಿ ಪ್ರಿಯಾ ಅವರು ನೀಡಿರುವ ಹಾವಭಾವದಿಂದ ಮುಸ್ಲಿಮರ ಭಾವನೆಗೆ ಹೇಗೆ ಧಕ್ಕೆ ಉಂಟಾಗಿದೆ ಎಂಬುದನ್ನು ತಿಳಿಸಲು ಅದ್ನಾನ್ ಖಮರ್ ಎಂಬ ಯುವಕ ಫೇಸ್ ಬುಕ್ ಲೈವ್ ಬಂದು ವಿವರಿಸಿದ್ದಾರೆ. ಮಹಿಳೆಯು ಮುತ್ತಿನ ಹೂವಿನಂತೆ- ಮಹಾರಾಣಿ ಖತೀಜಾ ಬೀಬಿ ಪವಿತ್ರ ನಗರಿ ಮೆಕ್ಕಾದಲ್ಲಿ ನೆಲೆಸಿದಂತೆ ಎಂಬ ವಾಕ್ಯಕ್ಕೆ ಆಕ್ಷೇಪ ವ್ಯಕ್ತವಾಗಿದೆ ಮುಜಾಕರ್ ಅಲಿ ಹೇಳಿದ್ದು, ಸಾಹಿತ್ಯಕ್ಕೆ ತಕ್ಕಂತೆ ಚಿತ್ರೀಕರಣ ಮಾಡಿಲ್ಲ. ಚಿತ್ರದ ನಿರ್ದೇಶಕ ಅಬ್ದುಲ್ ಸೇರಿದಂತೆ ಚಿತ್ರದಲ್ಲಿ ಅನೇಕರು ಇಸ್ಲಾಂ ಧರ್ಮದವರಿದ್ದರೂ ಈ ರೀತಿ ಪ್ರಮಾದವಾಗಿದೆ ಎಂದು ವ್ಯಥೆ ಪಟ್ಟರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A group of Muslims in Hyderabad against ‘national crush’ Priya Prakash Varrier objecting to her expressions in a up coming Malayalam film

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ