ಪಾಕಿಸ್ತಾನಕ್ಕೆ ಗೌಪ್ಯ ರಕ್ಷಣಾ ಮಾಹಿತಿ ಸೋರಿಕೆ: ಹೈದರಾಬಾದ್‌ನಲ್ಲಿ ವ್ಯಕ್ತಿ ಬಂಧನ
ಹೈದರಾಬಾದ್, ಜೂನ್ 18: ಪಾಕಿಸ್ತಾನ ಬೇಹುಗಾರಿಕಾ ಸಂಸ್ಥೆಗೆ ಭಾರತದ ರಕ್ಷಣೆಗೆ ಸಂಬಂಧಪಟ್ಟ ಗೌಪ್ಯ ಮಾಹಿತಿ ಸೋರಿಕೆ ಮಾಡುತ್ತಿದ್ದ ಆರೋಪದ ಮೇಲೆ ಹೈದರಾಬಾದ್ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಹೈದರಾಬಾದ್‌ನಲ್ಲಿರುವ ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಲ್ಯಾಬೊರೇಟರಿಯ (ಡಿಆರ್‌ಡಿಎಲ್) ಗುತ್ತಿಗೆ ಆಧಾರಿತ ಉದ್ಯೋಗಿ ಡಿಆರ್‌ಡಿಎಲ್-ಆರ್‌ಸಿಐ ಕಾಂಪ್ಲೆಕ್ಸ್‌ನ ಅತ್ಯಂತ ಸುರಕ್ಷಿತ ಮತ್ತು ಗೌಪ್ಯ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದ ಮೂಲಕ ಶಂಕಿತ ಐಎಸ್‌ಐ ಮಹಿಳಾ ಹ್ಯಾಂಡ್ಲರ್‌ಗೆ ಹಂಚಿಕೊಂಡ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ರಾಚಕೊಂಡ ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ದುಕ್ಕ ಮಲ್ಲಿಕಾರ್ಜುನ ರೆಡ್ಡಿ (29) ಅಲಿಯಾಸ್ ಅರ್ಜುನ್ ಬಿಟ್ಟು ಎಂದು ಗುರುತಿಸಲಾಗಿದೆ. ವಿಶೇಷ ಕಾರ್ಯಾಚರಣೆ ತಂಡ, ಎಲ್‌ಬಿ ನಗರ ವಲಯ, ರಾಚಕೊಂಡ, ಹೈದರಾಬಾದ್ ಮತ್ತು ಬಾಲಾಪುರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಗಿದೆ.
"ಜೂನ್ 17, 2022 ರಂದು, ನಂಬಲರ್ಹ ಮಾಹಿತಿಯ ಮೇರೆಗೆ, ವಿಶೇಷ ಕಾರ್ಯಾಚರಣೆ ತಂಡ, ಎಲ್‌ಬಿ ನಗರ ವಲಯ, ರಾಚಕೊಂಡ, ಬಾಲಾಪುರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯದ (ಡಿಆರ್‌ಡಿಎಲ್) ಗುತ್ತಿಗೆ ಉದ್ಯೋಗಿಯನ್ನು ಬಂಧಿಸಿದ್ದಾರೆ. ಡಿಆರ್‌ಡಿಎಲ್-ಆರ್‌ಸಿಐ ಕಾಂಪ್ಲೆಕ್ಸ್‌ನ ಗೌಪ್ಯ ಮಾಹಿತಿಯು ಸಾಮಾಜಿಕ ಮಾಧ್ಯಮದ ಮೂಲಕ ಶಂಕಿತ ಐಎಸ್‌ಐ ಮಹಿಳಾ ಹ್ಯಾಂಡ್ಲರ್‌ಗೆ ರಾಷ್ಟ್ರೀಯ ಸಮಗ್ರತೆ ಮತ್ತು ಭದ್ರತೆಗೆ ಹಾನಿ ಉಂಟುಮಾಡುವ ಸಾಧ್ಯತೆಯಿದೆ," ಎಂದು ಪೊಲೀಸ್ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಫೇಸ್‌ಬುಕ್‌ನಲ್ಲಿ ಪರಿಚಯವಾದ ಮಹಿಳೆ
ಶಂಕಿತ ವ್ಯಕ್ತಿಯು ಡಿಆರ್‌ಡಿಎಲ್‌ನೊಂದಿಗಿನ ತನ್ನ ಕೆಲಸದ ಬಗ್ಗೆ ತನ್ನ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾನೆ ಮತ್ತು ಮಾರ್ಚ್ 2020 ರಲ್ಲಿ, ನತಾಶಾ ರಾವ್ ಎಂದು ಹೇಳಿಕೊಳ್ಳುವ ಮಹಿಳೆ ಅವನನ್ನು ಸಂಪರ್ಕಿಸಿದ್ದಾಳೆ.
ಆಕೆ ಆರೋಪಿ ರೆಡ್ಡಿ ಜೊತೆ ಮಾತನಾಡುವಾಗ ಯುಕೆ (UK) ಡಿಫೆನ್ಸ್ ಜರ್ನಲ್‌ನ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದಾಳೆ. ಯುಕೆ (UK) ಗೆ ಸ್ಥಳಾಂತರಗೊಳ್ಳುವ ಮೊದಲು ಅವಳ ತಂದೆ ಭಾರತೀಯ ವಾಯುಪಡೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಿಕೊಂಡಿದ್ದಾಳೆ.

ಮಹಿಳೆ ಜೊತೆ ಹಲವು ಗೌಪ್ಯ ಮಾಹಿತಿ ಹಂಚಿಕೆ
ನತಾಶಾ ರಾವ್ ಅಲಿಯಾಸ್ ಸಿಮ್ರಾನ್ ಚೋಪ್ರಾ ಅಲಿಯಾಸ್ ಒಮಿಶಾ ಅಡ್ಡಿ ಜೊತೆ ಮಾತನಾಡುವ ಸಮಯದಲ್ಲಿ, ಮಲ್ಲಿಕಾರ್ಜುನ ರೆಡ್ಡಿ ಗೌಪ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾನೆ ಮತ್ತು ಅವನ ಬ್ಯಾಂಕ್ ಖಾತೆ ವಿವರಗಳನ್ನು ಸಹ ಹಂಚಿಕೊಂಡಿದ್ದಾನೆ.
ಕಳೆದ ವರ್ಷ ಡಿಸೆಂಬರ್ ವರೆಗೂ ಆಕೆಯೊಂದಿಗೆ ಬಂಧಿತ ಆರೋಪಿ ಸಂಪರ್ಕದಲ್ಲಿದ್ದ ಎಂದು ತಿಳಿದು ಬಂದಿದೆ. ಪೊಲೀಸರು ಬಂಧಿತನಿಂದ ಎರಡು ಮೊಬೈಲ್, ಸಿಮ್ ಕಾರ್ಡ್ ಮತ್ತು ಲ್ಯಾಪ್‌ಟಾಪ್ ವಶಪಡಿಸಿಕೊಂಡಿದ್ದಾರೆ.

ಎಂಬಿಎ ಪದವೀಧರ ಮಲ್ಲಿಕಾರ್ಜುನ ರೆಡ್ಡಿ
ಪೊಲೀಸರ ಪ್ರಕಾರ, ಆರೋಪಿ ರೆಡ್ಡಿ ವಿಶಾಖಪಟ್ಟಣಂನ ನೇವಲ್ ಆರ್ಮಮೆಂಟ್ ಡಿಪೋ (NAD) ಕ್ವಾರ್ಟರ್ಸ್‌ನಲ್ಲಿ ಹುಟ್ಟಿ ಬೆಳೆದಿದ್ದಾನೆ. ಅವನ ತಂದೆ ನೇವಲ್ ಆರ್ಮಮೆಂಟ್ ಡಿಪೋ (NAD) ನಲ್ಲಿ ಚಾರ್ಜ್‌ಮೆನ್ ಸಿವಿಲಿಯನ್ ಆಗಿ ಕೆಲಸ ಮಾಡಿ 2014 ರಲ್ಲಿ ನಿವೃತ್ತರಾಗಿದ್ದಾರೆ. ಆರೋಪಿ ವಿಶಾಖಪಟ್ಟಣಂನಲ್ಲಿ ತಮ್ಮ B.Tech (ಮೆಕ್ಯಾನಿಕಲ್) ಮುಗಿಸಿದ್ದು ನಂತರ 2020 ರಲ್ಲಿ ಹೈದರಾಬಾದ್‌ನಲ್ಲಿ ಎಂಬಿಎ (ಮಾರ್ಕೆಟಿಂಗ್) ಪದವಿ ಪಡೆದಿದ್ದಾನೆ.
ಮಲ್ಲಿಕಾರ್ಜುನ ರೆಡ್ಡಿ ಬೆಂಗಳೂರಿನ ಮೂಲದ ಕಂಪನಿಯ ಪಟಂಚೇರು ಶಾಖೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಜನವರಿ 2020 ರವರೆಗೆ ಡಿಆರ್ ಡಿಎಲ್ (DRDL)ನ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡಿದ್ದಾನೆ. ನಂತರ, ಆತ ನೇರವಾಗಿ ಡಿಆರ್ ಡಿಎಲ್ (DRDL) ಅಧಿಕಾರಿಗಳನ್ನು ಸಂಪರ್ಕಿಸಿದರು ಮತ್ತು ಭಾರತೀಯ ಪುನರ್ವಸತಿ ಮಂಡಳಿ (RCI) ಬಾಲಾಪುರದ ಯೋಜನೆಗೆ ಗುತ್ತಿಗೆ ಉದ್ಯೋಗಿಯಾಗಿ ಸೇರಿಕೊಂಡಿದ್ದಾನೆ.

ಹಲವು ಕಾಯಿದೆ ಅಡಿ ಪ್ರಕರಣ
ಪೊಲೀಸರು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 409 ಮತ್ತು ಅಧಿಕೃತ ರಹಸ್ಯ ಕಾಯಿದೆ-1923 ರ ಸೆಕ್ಷನ್ 3 (1) (C), 5 (3), 5 (1) (A) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ರಾಚಕೊಂಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಬಾಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಚಕೊಂಡ ಪೊಲೀಸ್ ಕಮಿಷನರ್ ಮಹೇಶ್ ಎಂ ಭಾಗವತ್, ಹೆಚ್ಚುವರಿ ಪೊಲೀಸ್ ಕಮಿಷನರ್ ಜಿ ಸುಧೀರ್ ಬಾಬು, ಎಲ್ ಬಿ ನಗರ ಡಿಸಿಪಿ ಸನ್ಪ್ರೀತ್ ಸಿಂಗ್, ಡಿಸಿಪಿ (ಎಸ್ಒಟಿ) ಕೆ ಮುರಳೀಧರ್ ಮತ್ತು ರಾಚಕೊಂಡದ ವಿಶೇಷ ಕಾರ್ಯಾಚರಣೆ ತಂಡದ ಉಪ ಪೊಲೀಸ್ ಆಯುಕ್ತರ ಮೇಲ್ವಿಚಾರಣೆಯಲ್ಲಿ ಬಂಧಿಸಲಾಗಿದೆ.
-
ದಾವಣಗೆರೆ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, ಕಾಂಗ್ರೆಸ್ ಬೆಂಬಲಕ್ಕೆ ನಿರ್ಧಾರ -
SSLC Hindi Exam: ಮಾರ್ಚ್ 30ರ ಎಸ್ಎಸ್ಎಲ್ಸಿ ಹಿಂದಿ ಪರೀಕ್ಷೆಗೆ ಹೊಸ ಸಮಸ್ಯೆ: ಪರೀಕ್ಷಾ ಮಂಡಳಿ ಹೇಳಿದ್ದೇನು -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್








Click it and Unblock the Notifications