ಹರಾಜಿನಲ್ಲಿ 15.6 ಲಕ್ಷಕ್ಕೆ ಗಣಪತಿ ಲಡ್ಡು ಖರೀದಿಸಿದ ಉದ್ಯಮಿ
ಹೈದರಾಬಾದ್, ಸೆಪ್ಟೆಂಬರ್ 5: ಇಲ್ಲಿನ ನಗರದ ಹೊರಭಾಗ ಬಲಾಪುರ್ ನಲ್ಲಿಟ್ಟಿದ್ದ ಗಣೇಶ ಪೆಂಡಾಲ್ ನ ವಿಶೇಷ ಲಡ್ಡು ಪ್ರಸಾದವನ್ನು ವ್ಯಕ್ತಿಯೊಬ್ಬರು 15.6 ಲಕ್ಷ ರೂಪಾಯಿ ಕೊಟ್ಟು ಹರಾಜಿನಲ್ಲಿ ಖರೀದಿಸಿದ್ದಾರೆ.
ಇವತ್ತು ನಡೆದ ಹರಾಜಿನಲ್ಲಿ ಉದ್ಯಮಿ ತಿರುಪತಿ ರೆಡ್ಡಿ 15.6 ಲಕ್ಷಕ್ಕೆ ಈ ಲಡ್ಡು ಪ್ರಸಾದವನ್ನು ಕೊಂಡು ಕೊಂಡಿದ್ದಾರೆ.

ಇಲ್ಲಿ ಪ್ರತೀ ವರ್ಷ ಲಡ್ಡು ಪ್ರಸಾದದ ಹರಾಜು ನಡೆಯುತ್ತದೆ. 1990ರಲ್ಲಿ ಮೊದಲ ಬಾರಿಗೆ ಹರಾಜು ನಡೆದಾಗ 450 ರೂಪಾಯಿ ಲಡ್ಡು ಹರಾಜಾಗಿತ್ತು. ಇದೀಗ 15.6 ಲಕ್ಷ ರೂಪಾಯಿಗೆ ಈ ಲಡ್ಡು ಮಾರಾಟವಾಗಿದೆ.
ಈ ವಿಶೇಷ ಲಡ್ಡು ಕೊಂಡರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಮೇಲೆ ಪ್ರತೀ ವರ್ಷ ಲಡ್ಡು ಖರೀದಿಸಲು ಉದ್ಯಮಿಗಳು ಮುಗಿ ಬೀಳುತ್ತಾರೆ.












Click it and Unblock the Notifications