ನೇಣಿಗೆ ಶರಣಾದ ಆಂಧ್ರ ಪ್ರದೇಶ ವಿಧಾನಸಭೆ ಮಾಜಿ ಸ್ಪೀಕರ್
Recommended Video
ಹೈದರಾಬಾದ್, ಸೆಪ್ಟೆಂಬರ್ 16 : ಆಂಧ್ರ ಪ್ರದೇಶ ವಿಧಾನಸಭೆ ಮಾಜಿ ಸ್ಪೀಕರ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಟಿಡಿಪಿ ಪಕ್ಷದ ಹಿರಿಯ ನಾಯಕನ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
72 ವರ್ಷದ ಕೊಡೆಲ ಶಿವಪ್ರಸಾದ್ ರಾವ್ ಹೈದರಾಬಾದ್‌ನ ನಿವಾಸದಲ್ಲಿ ಸೋಮವಾರ ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ತಿಂಡಿ ತಿಂದು ರೂಮಿಗೆ ತೆರಳಿದ್ದ ಅವರು, ಬಳಿಕ ನೇಣು ಹಾಕಿಕೊಂಡಿದ್ದಾರೆ.
1983ರಲ್ಲಿ ಎನ್. ಟಿ. ರಾಮರಾವ್ ಟಿಡಿಪಿ ಪಕ್ಷ ಸ್ಥಾಪನೆ ಮಾಡಿದಾಗ ಕೊಡೆಲ ಶಿವಪ್ರಸಾದ್ ರಾವ್ ರಾಜಕೀಯಕ್ಕೆ ಬಂದಿದ್ದರು. ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ಸಚಿವರಾಗಿ ಆಂಧ್ರ ಪ್ರದೇಶ ವಿಧಾನಸಭೆ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ್ದರು.

ಸ್ಪೀಕರ್ ಅವಧಿ ಮುಗಿದ ಬಳಿಕ ವಿಧಾನಸಭೆ ಕಚೇರಿ ಖಾಲಿ ಮಾಡುವಾಗ ಅಲ್ಲಿದ್ದ ಕಂಪ್ಯೂಟರ್, ಎಸಿ, ಪಿಠೋಪಕರಣಗಳನ್ನು ಮನೆಗೆ ತೆಗೆದುಕೊಂಡು ಹೋದ ಆರೋಪ ಕೊಡೆಲ ಶಿವಪ್ರಸಾದ್ ರಾವ್ ಮೇಲೆ ಬಂದಿತ್ತು.
ವೈ. ಎಸ್. ಆರ್. ಪಿ ಪಕ್ಷದವರು ಶಿವಪ್ರಸಾದ್ ಕುಟುಂಬ ಸದಸ್ಯರ ವಿರುದ್ಧ ದೂರು ನೀಡಿದ್ದರು. ಇದರಿಂದಾಗಿ ಕೊಡೆಲ ಶಿವಪ್ರಸಾದ್ ರಾವ್ ನೊಂದಿದ್ದರು. ಕುಟುಂಬ ಸದಸ್ಯರಿಗೆ ಈ ಪ್ರಕರಣದಲ್ಲಿ ಜಾಮೀನು ಸಿಕ್ಕಿತ್ತು.
2014ರಲ್ಲಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಪ್ರತ್ಯೇಕ ರಾಜ್ಯವಾದ ಬಳಿಕ ಕೊಡೆಲ ಶಿವಪ್ರಸಾದ್ ರಾವ್ ವಿಧಾನಸಭೆ ಸ್ಪೀಕರ್ ಆಗಿದ್ದರು. ಗೃಹ, ಪಂಚಾಯತ್ ರಾಜ್ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದರು.












Click it and Unblock the Notifications