• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಂಧ್ರ ವಿಭಜನೆ, ಕರ್ನಾಟಕ ದೊಡ್ಡಣ್ಣ, ಲಾಭ ಏನಣ್ಣ?

By Mahesh
|

ಬೆಂಗಳೂರು, ಫೆ.20: ದಕ್ಷಿಣ ಭಾರತದಲ್ಲಿ ಅತಿ ವಿಸ್ತಾರವಾದ ರಾಜ್ಯ ಎಂಬ ಹೆಗ್ಗಳಿಕೆ ಗಳಿಸಿದ್ದ ಆಂಧ್ರಪ್ರದೇಶ ಇಬ್ಭಾಗವಾಗಿದೆ. ದೇಶದ 29ನೇ ರಾಜ್ಯವಾಗಿ ತೆಲಂಗಾಣ ರಾಜ್ಯ ಸ್ಥಾಪನೆಗೆ ಕಾಲ ಕೂಡಿ ಬಂದಿದೆ.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಅಂದಿನ ಪ್ರಧಾನಿ ಜವಹಾರಲಾಲ್ ನೆಹರೂ ಎದುರಿಸಿದ ದೊಡ್ಡ ಸಮಸ್ಯೆ ಭಾಷಾವಾರು ರಾಜ್ಯ ರಚನೆ. ನೆಹರೂ ಅವರ ಚಿಂತೆ ದೂರ ಮಾಡಲು ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಇದ್ದರು. ಈಗ ಗಡಿ ಹಂಚಿಕೆ ಸಮಸ್ಯೆ ಬಗೆಹರಿಸುವಲ್ಲಿ ಇಂದಿನ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಯಶಸ್ವಿಯಾಗುತ್ತಾರಾ? ಕಾದು ನೋಡಬೇಕಿದೆ.

ಅಂದು ಆದಷ್ಟು ಮಟ್ಟಿಗೆ ಭಾಷೆ ಆಧಾರದ ಮೇಲೆ ಭಾರತವನ್ನು ವಿಭಜಿಸಿ ರಾಜ್ಯಗಳನ್ನು ರಚನೆ ನಡೆಯಿತು. 1956 ನವೆಂಬರ್ 1 ರಂದು ಆಂಧ್ರಪ್ರದೇಶದಲ್ಲಿ ತೆಲಂಗಾಣವನ್ನೂ ಸೇರಿಸಿ ತೆಲುಗು ಭಾಷಿಕರಿಗಾಗಿ ಪ್ರತ್ಯೇಕ ರಾಜ್ಯ ರಚಿಸುವಲ್ಲಿ ಪಂಡೀತ್ ಜೀ ಯಶಸ್ವಿಯಾದರು. ಆದರೆ, ಇದಕ್ಕೆ ಪೊಟ್ಟಿ ಶ್ರೀರಾಮುಲು ಅವರ ಬಲಿದಾನವೂ ಕಾರಣವಾಯಿತು.

ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ತೆಲಂಗಾಣ ಪ್ರಾಂತ್ಯದಲ್ಲಿ ಹೈದರಾಬಾದ್ ಬಿಟ್ಟರೆ ಮಿಕ್ಕ ಭಾಗಗಳಿಗೆ ಅಂದಿನಿಂದ ಇಂದಿನವರೆಗೂ ಸರಿಯಾದ ಸ್ಥಾನ ಮಾನ ಸಿಕ್ಕಿರಲಿಲ್ಲ. ಇದಕ್ಕಾಗಿ ಹಲವು ದಶಕಗಳ ಕಾಲ ಹೋರಾಟ ನಡೆಸಿ ಕೊನೆಗೂ ತೆಲಂಗಾಣ ಪ್ರತ್ಯೇಕವಾಗಿದೆ. ಈಗ ಸೀಮಾಂಧ್ರ ಭಾಗಕ್ಕೆ ಹೊಸ ರಾಜಧಾನಿ ಬೇಕಾಗಿದೆ. ರಾಜ್ಯ ವಿಭಜನೆ ಆಂಧ್ರಕ್ಕಷ್ಟೇ ಅಲ್ಲ ಪಕ್ಕದ ರಾಜ್ಯಗಳಿಗೂ ಕೆಲ ಕಾಲ ತಲೆನೋವಾಗಬಹುದು. ದೊಡ್ಡ ರಾಜ್ಯಎಂದು ಕರ್ನಾಟಕ ಹೆಮ್ಮೆಯ ಬದಲಿಗೆ ದುಃಖದಿಂದಲೇ ಹೇಳಿಕೊಳ್ಳಬೇಕಾಗಿದೆ. ತೆಲಂಗಾಣದ ಭೂಗೋಳದತ್ತ ಒಂದು ನೋಟ...

ಕರ್ನಾಟಕ ವಿಸ್ತರಣೆಯಲ್ಲಿ ದೊಡ್ಡ ರಾಜ್ಯವಾಗಲಿದೆ.

ಕರ್ನಾಟಕ ವಿಸ್ತರಣೆಯಲ್ಲಿ ದೊಡ್ಡ ರಾಜ್ಯವಾಗಲಿದೆ.

ತೆಲಂಗಾಣ ಹೊಸ ಘೋಷಣೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಅಧಿಕೃತ ಅಂಕಿತ ಬೀಳುತ್ತಿದ್ದಂತೆ ದಕ್ಷಿಣ ಭಾರತದ ಅತೀ ವಿಸ್ತಾರವಾದ ರಾಜ್ಯ ಎಂಬ ವಿಶೇಷಣ ಕರ್ನಾಟಕ್ಕೆ ಪ್ರಾಪ್ತವಾಗಲಿದೆ.

ಸೀಮಾಂಧ್ರದ ವಿಸ್ತಾರ 2,75,045 ಕಿ.ಮೀ. ತೆಲಂಗಾಣ ಒಡೆದು 1,14,840 ಕಿ.ಮೀ. ಪ್ರತ್ಯೇಕ ರಾಜ್ಯವಾಗಿರುವುದರಿಂದ ಆಂಧ್ರಪ್ರದೇಶದ ವಿಸ್ತೀರ್ಣ 1,60,205 ಕಿ.ಮೀ.ಕರ್ನಾಟಕದ ಒಟ್ಟು ವಿಸ್ತೀರ್ಣ 1,94,791 ಕಿ.ಮೀ.ನಷ್ಟು ಇದೆ. ಹೊಸ ಆಂಧ್ರ ರಾಜ್ಯ ಕೇರಳಕ್ಕಿಂತ ಸ್ವಲ್ಪ ದೊಡ್ಡ ರಾಜ್ಯ ಎನಿಸಲಿದೆ.

ಜನಸಂಖ್ಯೆಯಲ್ಲೂ ಕರ್ನಾಟಕ ರಾಜ್ಯ ಮುಂದೆ

ಜನಸಂಖ್ಯೆಯಲ್ಲೂ ಕರ್ನಾಟಕ ರಾಜ್ಯ ಮುಂದೆ

ಸದ್ಯಕ್ಕೆ ಕಳೆದ ಜನಗಣತಿಯಂತೆ ಆಂಧ್ರಪ್ರದೇಶದ ಜನಸಂಖ್ಯೆ 8.42 ಕೋಟಿಯಷ್ಟಿದೆ, ಎರಡನೇ ಸ್ಥಾನದಲ್ಲಿ 7.21 ಕೋಟಿ ಜನಸಂಖ್ಯೆ ಹೊಂದಿರುವ ತಮಿಳುನಾಡು ಇದೆ. 6.11 ಕೋಟಿ ಜನರಿರುವ ಕರ್ನಾಟಕ ಮೂರನೇ ಸ್ಥಾನದಲ್ಲಿದೆ.

ತೆಲಂಗಾಣ ಪ್ರತ್ಯೇಕವಾದ ಮೆಲೆ ಆಂಧ್ರದ ಒಟ್ಟು ಜನಸಂಖ್ಯೆ 8.42 ಕೋಟಿ ಜನರಲ್ಲಿ 3.52 ಕೋಟಿ ಜನ ತೆಲಂಗಾಣ ಸೀಮೆಗೆ ಸೇರುತ್ತಾರೆ. ಆಂಧ್ರದ ಜನಸಂಖ್ಯೆ 5.93 ಕೋಟಿಗೆ ಕುಸಿಯುತ್ತದೆ. 6.11 ಕೋಟಿ ಜನರಿರುವ ಕರ್ನಾಟಕ ಎರಡನೇ ಸ್ಥಾನ ಪಡೆಯುತ್ತದೆ.

ತೆಲಂಗಾಣ ರಾಜ್ಯದ ಬಗ್ಗೆ ಇನ್ನೊಂದಿಷ್ಟು ವಿವರ

ತೆಲಂಗಾಣ ರಾಜ್ಯದ ಬಗ್ಗೆ ಇನ್ನೊಂದಿಷ್ಟು ವಿವರ

* ತೆಲಂಗಾಣ ರಾಜ್ಯ: ಜನಸಂಖ್ಯೆ 3,52,86,757, ವಿಸ್ತೀರ್ಣ 44,340 ಚ.ಕಿ.ಮೀ.,ಒಟ್ಟು ವಿಧಾನಸಭೆ ಸದಸ್ಯರ ಸಂಖ್ಯೆ:119, ಒಟ್ಟು ಲೋಕಸಭಾ ಕ್ಷೇತ್ರಗಳು-17

* ಜಿಲ್ಲೆಗಳು: ಹೈದರಾಬಾದ್ (ರಾಜಧಾನಿ), ಅದಿಲಾಬಾದ್, ಖಮ್ಮಮ್, ಕರೀಂನಗರ, ಮಹಬೂಬ್ ನಗರ, ಮೇಡಕ್, ನಾಲಗೊಂಡ, ನಿಜಾಮಾಬಾದ್, ರಂಗಾರೆಡ್ಡಿ ಹಾಗೂ ವಾರಂಗಲ್. ಸೀಮಾಂಧ್ರ ಹಾಗೂ ತೆಲಂಗಾಣಕ್ಕೆ 10 ವರ್ಷಕಾಲ ಹೈದರಾಬಾದ್ ಜಂಟಿ ರಾಜಧಾನಿಯಾಗಲಿದೆ.

ಸೀಮಾಂಧ್ರ ರಾಜ್ಯ ಸ್ಥಿತಿ ಗತಿ ಏನಾಗಲಿದೆ?

ಸೀಮಾಂಧ್ರ ರಾಜ್ಯ ಸ್ಥಿತಿ ಗತಿ ಏನಾಗಲಿದೆ?

ಸೀಮಾಂಧ್ರ ರಾಜ್ಯ: ಜಿಲ್ಲೆ 13:ಶ್ರೀಕಾಕುಳಂ, ವಿಜಯನಗರಂ, ವಿಶಾಖಪಟ್ಟಣ, ಪೂರ್ವಗೋದಾವರಿ, ಪಶ್ಚಿಮಗೋದಾವರಿ, ಕೃಷ್ಣಾ, ಗುಂಟೂರು, ಪ್ರಕಾಶಂ, ನೆಲ್ಲೂರು, ಚಿತ್ತೂರು, ಕಡಪ, ಕರ್ನೂಲು, ಅನಂತಪುರ

ಜನಸಂಖ್ಯೆ:ಸುಮಾರು 5 ಕೋಟಿ, ವಿಸ್ತೀರ್ಣ: 1,60 ಲಕ್ಷ ಚ.ಕಿ.ಮೀ.,

ಒಟ್ಟು ವಿಧಾನಸಭೆ ಸದಸ್ಯರ ಸಂಖ್ಯೆ: 175,

ಒಟ್ಟು ಲೋಕಸಭಾ ಕ್ಷೇತ್ರಗಳು: 25

ಭಾರತ ಗಣರಾಜ್ಯದ ತೆಲಂಗಾಣ(ತೆಲುಗರ ನಾಡು)

ಭಾರತ ಗಣರಾಜ್ಯದ ತೆಲಂಗಾಣ(ತೆಲುಗರ ನಾಡು)

ತೆಲಂಗಾಣ(ತೆಲುಗರ ನಾಡು) ಭಾರತ ಗಣರಾಜ್ಯದ 29ನೇ ರಾಜ್ಯವಾಗಿದೆ. 2000ರಲ್ಲಿ ಎನ್ ಡಿಎ ಸರ್ಕಾರ ಬಿಹಾರದಿಂದ ಜಾರ್ಖಂಡ್ ಹಾಗೂ ಮಧ್ಯಪ್ರದೇಶದಿಂದ ಚತ್ತೀಸ್ ಗಢ ಮತ್ತು ಉತ್ತರಪ್ರದೇಶದಿಂದ ಉತ್ತರಾಖಂಡ್ ರಾಜ್ಯ ರಚನೆ ಮಾಡಿದ್ದರು.

ಈಗ ಯುಪಿಎ ಸರ್ಕಾರ ಸಾರ್ವತ್ರಿಕ ಚುನಾವಣೆಗೂ ಮುನ್ನ ಆಂಧ್ರಪ್ರದೇಶವನ್ನು ಇಬ್ಭಾಗ ಮಾಡಿದೆ. ಜನರ ಒಳಿತಿಗಾಗಿ ರಾಜ್ಯ ವಿಭಜನೆಯಾದರೆ ಒಳ್ಳೆಯದು ಆದರೆ, ಇಲ್ಲಿ ಸಂಪನ್ಮೂಲ ಹಂಚಿಕೆಗಾಗಿ ಒಂದೇ ರಾಜ್ಯದವರು ಹಾಗೂ ಪಕ್ಕದ ಕರ್ನಾಟಕದ ಜತೆಗೂ ಕಿತ್ತಾಡುವ ಪರಿಸ್ಥಿತಿ ತಲೆದೋರಲಿದೆ.

ಯುಪಿಎ ಸರ್ಕಾರ ತೆಲಂಗಾಣಕ್ಕೆ ಘೋಷಿಸುವ ಕೋಟಿಗಟ್ಟಲೇ ಪ್ಯಾಕೇಜ್ ತೆಲುಗರಿಗೆ ಸಿಗುವ ಹೊತ್ತಿಗೆ ಹೈದರಾಬಾದ್ ತನ್ನ ರಾಜಧಾನಿ ಪಟ್ಟ ಕಳೆದುಕೊಳ್ಳಲಿದೆ.

ಜಾತಿವಾರು, ಭಾಷಾವಾರು ಅಂಕಿ ಅಂಶ

ಜಾತಿವಾರು, ಭಾಷಾವಾರು ಅಂಕಿ ಅಂಶ

ಜಾತಿವಾರು : ತೆಲಂಗಾಣದಲ್ಲಿ ಶೇ 86 ರಷ್ಟು ಹಿಂದುಗಳು, ಶೇ12 ರಷ್ಟು ಮುಸ್ಲಿಂ ಹಾಗೂ ಶೇ 1 ರಷ್ಟು ಕ್ರೈಸ್ತ್ರರಿದ್ದಾರೆ.

ಭಾಷೆ ಅಂಕಿ ಅಂಶ : ತೆಲಂಗಾಣದಲ್ಲಿ ಶೇ 77 ರಷ್ಟು ಜನ ತೆಲುಗು ಭಾಷೆ ಮಾತನಾಡುತ್ತಾರೆ. ಶೇ 12ರಷ್ಟು ಉರ್ದು ಹಾಗೂ ಶೇ 11 ರಷ್ಟು ಇತರೆ ಭಾಷಿಗರು ಇದ್ದಾರೆ.

ನೀರಾವರಿ ಸೌಲಭ್ಯ ಸಮಸ್ಯೆ ಏನಾಗಲಿದೆ?

ನೀರಾವರಿ ಸೌಲಭ್ಯ ಸಮಸ್ಯೆ ಏನಾಗಲಿದೆ?

ದಕ್ಷಿಣ ಭಾರತದ ಎರಡು ಅತಿದೊಡ್ಡ ನದಿಗಳಾದ ಕೃಷ್ಣ ಹಾಗೂ ಗೋದಾವರಿ ತೆಲಂಗಾಣದಲ್ಲೂ ಹರಿಯುತ್ತದೆ. ಆದರೂ ರಾಜ್ಯದ ಬಹುತೇಕ ಭಾಗ ಒಣ, ಬಂಜರು ಭೂಮಿಯನ್ನು ಹೊಂದಿದೆ. ವಾತಾವರಣ ಕೂಡಾ ಒಣ ಹಾಗೂ ಶುಷ್ಕ ಹವೆಯನ್ನು ಹೊಂದಿದೆ.

ನೀರು, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯ ಹಂಚಿಕೆ ಬಗ್ಗೆ ಕೇಂದ್ರದ ಸಮಿತಿ ನಿರ್ಧರಿಸಲಿದೆ. ಎಲ್ಲಕ್ಕೂ ಕೇಂದ್ರ ಸರ್ಕಾರ ನೀಡುವ ಅನುದಾನ ಹಾಗೂ ಯೋಜನೆಗಳನ್ನು ಅವಲಂಬಿಸಬೇಕಾಗುತ್ತದೆ.

ಕರ್ನಾಟಕದ ಜತೆ ತೆಲಂಗಾಣದ ಸಂಬಂಧ

ಕರ್ನಾಟಕದ ಜತೆ ತೆಲಂಗಾಣದ ಸಂಬಂಧ

ತುಂಗಭದ್ರಾ ಮತ್ತು ಕೃಷ್ಣಾ ನದಿಗಳಿಂದಾಗಿ ಗಡಿ ತಂಟೆ ತಲೆದೋರುವ ಲಕ್ಷಣಗಳು ಹೆಚ್ಚಾಗಿವೆ. ತುಂಗಭದ್ರಾ ಕರ್ನಾಟಕದಿಂದ ಆಂಧ್ರದೊಳಕ್ಕೂ, ಕೃಷ್ಣಾ ನದಿ ನೀರು ಕರ್ನಾಟಕದಿಂದ ತೆಲಂಗಾಣದೊಳಕ್ಕೂ ಹರಿಯುತ್ತಿದೆ.

ರಸ್ತೆ ಸಂಚಾರ, ರೈಲು ಮಾರ್ಗ, ತೆಲಂಗಾಣ ಭಾಗದ ದೇಗುಲಗಳಲ್ಲಿ ರಾಜ್ಯದ ಪ್ರವಾಸಿಗರಿಗೆ ಅನುಕೂಲ(ಈಗ ತಿರುಪತಿಯಲ್ಲಿರುವಂತೆ) ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲಬೇಕಾದ್ದು ಕರ್ನಾಟಕ ಸರ್ಕಾರದ ಕರ್ತವ್ಯವೂ ಆಗಿದೆ.

ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳ ಜತೆ ಕರ್ನಾಟಕಕ್ಕೆ ಗಡಿ ಸಂಬಂಧವಿದೆ.ಈಗ 6 ರಾಜ್ಯಗಳ ಗಡಿಯನ್ನು ಕರ್ನಾಟಕ ಹಂಚಿಕೊಳ್ಳಬೇಕಾಗಿದೆ. [ವಿವರ ಇಲ್ಲಿ ಓದಿ]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It will take some more time to complete the formalities before the youngest state of the Indian Union, Telengana, becomes a reality in administrative terms. With Telangana formation Karnataka becomes big state in South India. Here are the some facts about the new state of Telangana
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more