ತೆಲಂಗಾಣ ಸಿಎಂ ಚಂದ್ರಶೇಖರ್‌ಗೆ ಕೊರೊನಾ ಎಂದು ಬರೆದಿದ್ದ ಪತ್ರಕರ್ತನ ಬಂಧನ

ಹೈದರಾಬಾದ್, ಜುಲೈ 7: ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್‌ ಅವರಿಗೆ ಕೊರೊನಾ ಸೋಂಕಿದೆ ಎಂದು ಸುದ್ದಿ ಬರೆದಿದ್ದ ಪತ್ರಕರ್ತರೊಬ್ಬರನ್ನು ಬಂಧಿಸಲಾಗಿದೆ.

ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಿಗೆ ಕೊರೋನೋ ಸೋಂಕು ತಗುಲಿದೆ ಎಂಬ ಸುಳ್ಳು ಸುದ್ದಿ ಬರೆದಿದ್ದ ಹಿನ್ನೆಲೆಯಲ್ಲಿ ಜುಬಿಲಿ ಹಿಲ್ಸ್ ಪೊಲೀಸರು ಸ್ಥಳೀಯ ದಿನಪತ್ರಿಕೆ 'ಆದಾಬ್ ಹೈದರಾಬಾದ್' ನಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತ ಅನಮ್ಚಿನ್ನಿ ವೆಂಕಟೇಶ್ವರ ರಾವ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಜ್ಯುಬಿಲಿ ಹಿಲ್ಸ್ ನ ರಹಮತ್ ನಗರ ನಿವಾಸಿ ಇಲಿಯಾಸ್ ಎಂಬುವರು ನೀಡಿದ್ದ ದೂರಿನ ಮೇರೆಗೆ ಪತ್ರಕರ್ತನನ್ನು ಬಂಧಿಸಲಾಗಿದೆ, ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಅವರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ವರದಿ ಮಾಡಿದ್ದರು.

Journalist Held For Fake News On Telangana CM

ಬೆಳಗ್ಗೆ ವಾಕಿಂಗ್ ಗೆ ತೆರಳಿದ್ದ ಪತ್ರಕರ್ತನನ್ನು ಖಮ್ಮಾನ್ ನಿಂದ ವಶಕ್ಕೆ ಪಡೆದುಕೊಳ್ಳಲಾಗಿದ್ದು ವಿಚಾರಣೆಗಾಗಿ ಹೈದಾರಾಬಾದ್ ಗೆ ಕರೆದೊಯ್ಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ತೆಲಂಗಾಣದ ಗೃಹ ಸಚಿವ ಮಹಮ್ಮದ್ ಆಲಿ ಅವರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ತೆಲಂಗಾಣದ ಡಿಸಿಎಂ ಹಾಗೂ ಗೃಹಸಚಿವರಾಗಿರುವ ಮಹಮ್ಮದ್ ಆಲಿ ಅವರು ಜೂನ್ 26ರಂದು ಹರಿತಾ ಹರಾಂ ಅನ್ನುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅವರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು ರಾಜ್ಯದ ಕಾರ್ಪೋರೇಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗೃಹ ಸಚಿವರಾದ ಮಹಮ್ಮದ್ ಆಲಿ ಅವರ ಭದ್ರತಾ ಪಡೆ ಸಿಬ್ಬಂದಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಆಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+