ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಪ್ರಧಾನಿಗೆ ವಿದಾಯ ಹೇಳುವ ಸಮಯ; ಕೆಟಿಆರ್‌

|
Google Oneindia Kannada News

ಹೈದರಾಬಾದ್‌, ಜೂ.30: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕಾರ್ಯಾಧ್ಯಕ್ಷ ಕೆ. ಟಿ. ರಾಮರಾವ್ ಗುರುವಾರ ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಗಳು ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಹಿನ್ನೆಲೆ ಇದು ಬಿಜೆಪಿ ಸಾಧನೆಗಳೆಂದು ಹೇಳುತ್ತಾ "ಬೈ ಬೈ ಮೋದಿ" ಎಂದು ಹೇಳುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

ಹೈದರಾಬಾದ್‌ನಲ್ಲಿ ತಮ್ಮ ಪಕ್ಷದ ಸಭೆಯಲ್ಲಿ ಮಾತನಾಡಿದ ರಾಮರಾವ್, ಜುಲೈ 2 ಮತ್ತು 3 ರಂದು ನಡೆಯಲಿರುವ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಉಲ್ಲೇಖಿಸಿ, ಅನೇಕ ಪ್ರವಾಸಿಗರು ತೆಲಂಗಾಣಕ್ಕೆ ಬರುತ್ತಾರೆ ಮತ್ತು ಹೋಗುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

 ಸೆಸ್‌ ರದ್ದುಗೊಳಿಸಿದೆರೆ 2014ರ ಬೆಲೆಗೆ ತೈಲ ದರ ಇಳಿಕೆ; ಕೆಟಿಆರ್‌ ಸೆಸ್‌ ರದ್ದುಗೊಳಿಸಿದೆರೆ 2014ರ ಬೆಲೆಗೆ ತೈಲ ದರ ಇಳಿಕೆ; ಕೆಟಿಆರ್‌

ಭಾರತದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ವಿಶ್ವದಲ್ಲೇ ಅತಿ ಹೆಚ್ಚಾಗಿದೆ. ಭಾರತದ ಸ್ವಾತಂತ್ರ್ಯಕ್ಕೆ ಬಂದ 75 ವರ್ಷಗಳಲ್ಲಿ ಮೋದಿ ರೂಪಾಯಿ ಮೌಲ್ಯವನ್ನು 79 ರೂ.ಗೆ ತಂದರು. ಬಿಜೆಪಿ ನಾಯಕರು ನಿಮ್ಮ ಕ್ಷೇತ್ರಗಳಿಗೆ ಬಂದು ಭೇಟಿ ನೀಡಿದಾಗ ಅವರನ್ನು ಜನರು ಪ್ರಶ್ನಿಸಬೇಕು. ಹೀಗಾಗಿ ಈಗ ಮೋದಿಗೆ 'ಬೈ ಬೈ' ಹೇಳುವ ಸಮಯ ಬಂದಿದೆ ಎಂದು ತೆಲಂಗಾಣ ಕೈಗಾರಿಕಾ ಸಚಿವ ರಾಮರಾವ್ ಹೇಳಿದ್ದಾರೆ.

ತೆಲಂಗಾಣದ ಎಲ್ಲಾ 119 ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ನಾಯಕರು ಬಂದು ಭೇಟಿ ನೀಡಲಿದ್ದು, ಅವರು ಭೇಟಿ ನೀಡಿದಾಗ ಕೆ. ಚಂದ್ರಶೇಖರ ರಾವ್ ಅವರ ಸರ್ಕಾರದ ಪ್ರಮುಖ ಯೋಜನೆಗಳಾದ ರೈತರಿಗೆ ಉಚಿತ ವಿದ್ಯುತ್ ಅನ್ನು ಹೇಗೆ ಜಾರಿಗೆ ತರಬೇಕು ಎಂಬುದನ್ನು ಜನರು ವಿವರಿಸಬೇಕು ಹಾಗೂ ಅವುಗಳನ್ನು ದೇಶದಾದ್ಯಂತ ಬಿಜೆಪಿ ಪಕ್ಷದ ನಾಯಕರು ಜಾರಿಗೊಳಿಸಲು ಒತ್ತಾಯಿಸಬೇಕು ಎಂದು ಹೇಳಿದ್ದಾರೆ.

ಹೈದರಾಬಾದ್: ಭೇಟಿಗೂ ಮೊದಲೇ ಪ್ರಧಾನಿ ಮೋದಿಗೆ ಬೈ ಬೈ ಹೋರ್ಡಿಂಗ್‌ಹೈದರಾಬಾದ್: ಭೇಟಿಗೂ ಮೊದಲೇ ಪ್ರಧಾನಿ ಮೋದಿಗೆ ಬೈ ಬೈ ಹೋರ್ಡಿಂಗ್‌

ಇದರಲ್ಲಿ ಯಾವುದೇ ಸತ್ಯ ಇರುವುದಿಲ್ಲ

ಇದರಲ್ಲಿ ಯಾವುದೇ ಸತ್ಯ ಇರುವುದಿಲ್ಲ

ಬಿಜೆಪಿ ಸರ್ಕಸ್ ಹೈದರಾಬಾದ್‌ಗೆ ಬರುತ್ತಿದೆ. ಎರಡು ದಿನಗಳ ಕಾಲ ನಡೆಯಲಿದೆ. ಆ ಸರ್ಕಸ್‌ನಲ್ಲಿ ಅವರು ಏನು ಮಾಡುತ್ತಾರೆ. ಅವರು ಅದೇ ಹಸಿ ಸುಳ್ಳು ಮತ್ತು ಝೂಟಾ ಪದಗಳನ್ನು ಹೇಳುವುದನ್ನು ಹೊರತುಪಡಿಸಿ ಜನರಿಗೆ ಏನು ಹೇಳುತ್ತಾರೆ. ಇದರಲ್ಲಿ ಯಾವುದೇ ಸತ್ಯ ಇರುವುದಿಲ್ಲ ಎಂದು ಅವರು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಭೆಯನ್ನು ಉಲ್ಲೇಖಿಸಿ ಹೇಳಿದರು.

ಸೆಕ್ಯೂರಿಟಿ ಗಾರ್ಡ್ ಉದ್ಯೋಗ ನೀಡುತ್ತಿದ್ದಾರೆ

ಸೆಕ್ಯೂರಿಟಿ ಗಾರ್ಡ್ ಉದ್ಯೋಗ ನೀಡುತ್ತಿದ್ದಾರೆ

ಕೇಂದ್ರದ ಹೊಸ ಅಗ್ನಿಪಥ್‌ ನೇಮಕಾತಿ ಯೋಜನೆಯನ್ನು ಉಲ್ಲೇಖಿಸಿದ ರಾಮರಾವ್, ಪಿಎಂ ಮೋದಿ ಅವರು ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಉದ್ಯೋಗ ಭದ್ರತೆಯನ್ನು ನೀಡುವ ಬದಲು ಸೆಕ್ಯೂರಿಟಿ ಗಾರ್ಡ್ ಉದ್ಯೋಗಗಳನ್ನು ನೀಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಜನರು ಹೆಚ್ಚು ತೆರಿಗೆ ಪಾವತಿಸುತ್ತಾರೆ

ಜನರು ಹೆಚ್ಚು ತೆರಿಗೆ ಪಾವತಿಸುತ್ತಾರೆ

ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲಿರುವ ಬಿಜೆಪಿ ನಾಯಕರು ಹೈದರಾಬಾದ್‌ನಲ್ಲಿ ಉತ್ತಮವಾದ ಬಿರಿಯಾನಿ ಮತ್ತು ಇರಾನಿ ಟೀ ಸೇವಿಸಬಹುದು ಮತ್ತು ತೆಲಂಗಾಣ ಜನರು ಹೆಚ್ಚು ತೆರಿಗೆ ಪಾವತಿಸುವ ಮೂಲಕ ಮತ್ತು ಕೇಂದ್ರದಿಂದ ಕಡಿಮೆ ಪಡೆಯುವ ಮೂಲಕ ದೇಶಕ್ಕೆ ಕೊಡುಗೆ ನೀಡುತ್ತಿರುವ ಕಾರಣ ಅವರಿಗೆ ನಮಸ್ಕರಿಸಬಹುದು ಎಂದು ಅವರು ಹೇಳಿದರು.

ಕ್ಸ್‌ನಲ್ಲಿ ಬೈ ಬೈ, ಮೋದಿ ಎಂಬ ಹ್ಯಾಶ್‌ಟ್ಯಾಗ್‌

ಕ್ಸ್‌ನಲ್ಲಿ ಬೈ ಬೈ, ಮೋದಿ ಎಂಬ ಹ್ಯಾಶ್‌ಟ್ಯಾಗ್‌

ಹೈದರಾಬಾದ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಜುಲೈ 2,3 ರಂದು ನಡೆಯಲಿದ್ದು, ಸಿಕಂದರಾಬಾದ್‌ನ ಪೇರೆಡ್‌ ಮೈದಾನದಲ್ಲಿ ದೊಡ್ಡ ದೊಡ್ಡ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ. ಆದರೆ ಈ ಫ್ಲೆಕ್ಸ್‌ನಲ್ಲಿ ಬೈ ಬೈ, ಮೋದಿ ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಪಿಎಂ ಮೋದಿ ಭಾವಚಿತ್ರ ಹಾಗೂ ಡೋಂಟ್‌ ಕಿಲ್‌ ಪೀಪಲ್‌ ಮೋದಿ ಮತ್ತು ಎನಫ್‌ ಮೋದಿ ಎಂಬ ಬೃಹತ್‌ ಬರಹಗಳನ್ನು ಬರೆಯಲಾಗಿದೆ. ಇದು ಕೇಂದ್ರದ ನೂತನ ಅಗ್ನಿಪಥ್‌ ಯೋಜನೆ, ಕೃಷಿ ಕಾನೂನುಗಳು, ನೋಟು ಅಮಾನ್ಯೀಕರಣ ಇವೇ ಮೊದಲಾದ ಕ್ರಮಗಳನ್ನು ಖಂಡಿಸಿ ಬರೆಯಲಾಗಿದೆ. ಜೂ.28ರಂದು ಹಾಕಲಾಗಿದ್ದ ಈ ಫ್ಲೆಕ್ಸ್‌ಗಳನ್ನು ಮರುದಿನ ತೆಗೆಯಲಾಗಿದೆ.

English summary
Telangana Rashtra Samithi (TRS) working president K. T. Rama Rao on Thursday hit out at the NDA government at the Centre, saying it was time to say "bye bye Modi" against the backdrop of rising domestic gas cylinder prices and depreciation of the rupee against the dollar, citing the BJP's achievements.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X