ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಕ್ಕಿಗಳ ಅಕೌಂಟಿಗೆ ಕನ್ನ ಹಾಕಿದ ಐನಾತಿ ಹ್ಯಾಕರ್!

By Mahesh
|
Google Oneindia Kannada News

ಹೈದರಾಬಾದ್, ಜೂ.12: ಸಾಫ್ಟ್ ವೇರ್ ತಂತ್ರಜ್ಞರು ಹಣಕಾಸು ವಿಷಯದಲ್ಲೂ ತುಂಬಾ ಹುಷಾರು, ಆನ್ ಲೈನ್ ಬ್ಯಾಂಕಿಂಗ್ ಬಳಸಿದರೂ ಸಮಸ್ಯೆಗೆ ಸಿಲುಕುವುದಿಲ್ಲ ಎಂಬ ಅಘೋಷಿತ ನಂಬಿಕೆಯನ್ನು ಹ್ಯಾಕರ್ ರೊಬ್ಬ ಮುರಿದಿದ್ದಾನೆ. ಪ್ರತಿಷ್ಠಿತ ಇನ್ಫೋಸಿಸ್ ಸಂಸ್ಥೆ ಉದ್ಯೋಗಿಗಳ ಸಂಬಳ ಖಾತೆಗೆ ಕನ್ನ ಹಾಕಿದ್ದಾನೆ.

ಹೈದರಾಬಾದಿನ ಇನ್ಫೋಸಿಸ್ ಸಂಸ್ಥೆಗೆ ಸೇರಿದ ಉದ್ಯೋಗಿಗಳು ಸೇರಿದಂತೆ ವಿವಿಧ ನಗರಗಳ ಸುಮಾರು 23 ಉದ್ಯೋಗಿಗಳ ಸಂಬಳ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ. ಬೇಕಾದಷ್ಟು ಹಣವನ್ನು ಖಾತೆಗಳಿಂದ ಎತ್ತಿ ಬಳಸಿಕೊಳ್ಳಲಾಗಿದೆ. ಇಂಥದ್ದೊಂದು ದೊಡ್ಡ ಸೈಬರ್ ಕ್ರೈಂ ಮೇ ತಿಂಗಳಿನಲ್ಲಿ ನಡೆದಿತ್ತು ಎಂದು ಐಸಿಐಸಿಐ ಹೇಳಿದೆ.

ಇನ್ಫೋಸಿಸ್ ಸಂಸ್ಥೆಯ ಸಂಬಳದಾರರ ಖಾತೆಗಳನ್ನು ಹೊಂದಿರುವ ಅಧಿಕೃತ ಬ್ಯಾಂಕ್ ಐಸಿಐಸಿಐ ಈಗ ವಿಧಿ ಇಲ್ಲದೆ, ಅಷ್ಟು ಮೊತ್ತವನ್ನು ರೀಫಂಡ್ ಮಾಡಿದೆ.

Infosys staff salary accounts hacked

ಐವರು ಉದ್ಯೋಗಿಗಳು ಸುಮಾರು 2 ಲಕ್ಷ ರು ಕಳೆದುಕೊಂಡಿದ್ದಾರೆ ಎಂದು ಹೈದಾರಾಬಾದ್ ಕಚೇರಿಗೆ ಮೊದಲಿಗೆ ದೂರು ಬಂದಿದೆ. ನಂತರ ಚೆನ್ನೈ, ಭುವನೇಶ್ವರ್ ಹಾಗೂ ಬೆಂಗಳೂರಿನಲ್ಲೂ ಇಂಥದ್ದೇ ಪ್ರಕರಣ ಕಂಡು ಬಂದಿದೆ.

ಮೇ.8 ರಂದು ಭುವನೇಶ್ವರ್ ನಿಂದ ಮೊದಲ ದೂರು ದಾಖಲಾಗಿತ್ತು ನಂತರ ಸಂಸ್ಥೆಯ ಅಂತರಿಕ ಇಮೇಲ್ ಗ್ರೂಪಿನಲ್ಲಿರುವ ಅನೇಕ ಉದ್ಯೋಗಿಗಳು ಈ ಆನ್ ಲೈನ್ ವಂಚನೆಗೆ ಒಳಗಾಗಿರುವುದು ಕಂಡು ಬಂದಿದೆ.

2011 ರ ಆಗಸ್ಟ್ ತಿಂಗಳಿನಲ್ಲಿ ಸಂಸ್ಥೆ ಸೇರಿದ್ದ ಉದ್ಯೋಗಿಗಳು ಹಾಗೂ 192 ಸಂಖ್ಯೆಯ ಆಸುಪಾಸಿನ ಐಡಿ ಸಂಖ್ಯೆಯುಳ್ಳ ಉದ್ಯೋಗಿಗಳ ಖಾತೆಗೆ ಕನ್ನ ಹಾಕಲಾಗಿದೆ. ಈ ಬಗ್ಗೆ ಇನ್ಫೋಸಿಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ದಿ ಹಿಂದೂ ವರದಿ ಮಾಡಿದೆ.

ಅದರೆ, ಐಸಿಐಸಿಸಿ ಮಾತ್ರ ಕಳ್ಳತನವನ್ನು ಖಚಿತಪಡಿಸಿದ್ದು, ಗ್ರಾಹಕರಿಗೆ ಹಣ ವಾಪಸ್ ಮಾಡಿ, ಹೊಸ ಎಟಿಎಂ ಕಾರ್ಡ್ ನೀಡಿರುವುದಾಗಿ ಹೇಳಿದೆ.

English summary
In a case of internet fraud, the salary accounts of more than 23 employees of software major, Infosys, in several cities across the country were hacked and money siphoned off in May this year. The fraud has forced ICICI, the official bank of the company to refund the amounts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X