ಸೌದಿ ಅರೇಬಿಯಾ: ಕೆಲಸಕ್ಕಿದ್ದ ಭಾರತೀಯ ಮಹಿಳೆ ಕೊಲೆ

Subscribe to Oneindia Kannada

ಹೈದರಾಬಾದ್, ಮೇ 9: ಸೌದಿ ಅರೇಬಿಯಾದಲ್ಲಿ ಭಾರತೀಯರ ಮೇಲೆ ಹಲ್ಲೆ ಪ್ರಕರಣಗಳು ಮತ್ತೆ ಮತ್ತೆ ವರದಿಯಾಗುತ್ತಲೇ ಇವೆ. ಹೈದರಾಬಾದ್ ಮೂಲದ ಮಹಿಳೆಯೊಬ್ಬರ ಮೇಲೆ ಸೌದಿ ಅರೇಬಿಯಾದಲ್ಲಿ ಹಲ್ಲೆಯಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಆಕೆ ಆಸ್ಪತ್ರೆಯಲ್ಲಿ ಕೊನೆ ಉಸಿರು ಎಳೆದಿದ್ದಾರೆ.

ಹೈದರಾಬಾದ್‌ನ ಅಸೀಮಾ ಖಾಟೀವ್ ಎಂಬ 25 ವರ್ಷದ ಯುವತಿ ಸೌದಿಯಲ್ಲಿ ಮನೆಗೆಲಸ ಮಾಡುತ್ತಿದ್ದಳು. ಅವಳ ವೀಸಾ ಅವಧಿ ಮುಗಿದಿದ್ದರೂ ಆಕೆಯನ್ನು ಅಲ್ಲಿಯೇ ಇರಿಸಿಕೊಳ್ಳಲಾಗಿತ್ತು. ಕ್ಷುಲ್ಲಕ ಕಾರಣಕ್ಕೆ ಆಕೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದ್ದು ಸಾವನ್ನಪ್ಪಿದ್ದಾರೆ.[ಅಳಲು ತೋಡಿಕೊಂಡ ಕನ್ನಡಿಗನಿಗೆ ಸೌದಿಯಲ್ಲಿ ಜೈಲುವಾಸ]

saudi arabia

ತನ್ನ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಅಸೀಮಾ ಭಾರತದಲ್ಲಿದ್ದ ಕುಟುಂಬದವರಿಗೆ ತಿಳಿಸಿದ್ದರು. ಈಬಗ್ಗೆ ವಿದೇಶಾಂಗ ಇಲಾಖೆ ಮಾಹಿತಿ ಕೋರಿ ಸೌದಿ ಅರೇಬಿಯಾವನ್ನು ಸಂಪರ್ಕ ಮಾಡಿತ್ತು. ಆದರೆ ಇದೆಲ್ಲ ನಡೆಯುವಷ್ಟು ಹೊತ್ತಿಗೆ ಯುವತಿ ಅಸುನಿಗಿದ್ದಾರೆ.[ಸಂಬಳವಿಲ್ಲದೆ ಸೌದಿ ಒಡೆಯರ ಒದೆ ತಿಂದ ಧಾರವಾಡದ ಮಹಿಳೆ]

ಕಳೆದ ಡಿಸೆಂಬರ್ ನಲ್ಲಿ ಯುವತಿ ಕೆಲಸ ಅರಸಿ ತೆರಳಿದ್ದರು. ತವರಿಗೆ ವಾಪಾಸಾಗಲು ಪ್ರಯತ್ನಿಸುತ್ತಿದ್ದ ಆಕೆಯನ್ನು ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 25-year old Indian maid was allgedly tortured to death by her employers in Saudi Arabia. She succumbed to her injuries while undergoing treatment at the King Saud hospital for chest diseases in Saudi Arabia. Her family was informed about the death of Asima Khatoon when they received an anonymous call from Riyadh, stating that Asima was no more.
Please Wait while comments are loading...