ವಿಡಿಯೋ: ಚಪ್ಪಲಿ ಕೈಗೆ ಕೊಟ್ಟು ಮತ ಕೇಳಿದ ಅಭ್ಯರ್ಥಿ!

Recommended Video

      ಚಪ್ಪಲಿ ಕೈಗೆ ಕೊಟ್ಟು ಮತ ಕೇಳಿದ ಅಭ್ಯರ್ಥಿ! | Oneindia Kannada

      ಕೊರ್ಟೂಲು (ತೆಲಂಗಾಣ), ನವೆಂಬರ್ 23: ಹೀಗೆ ಯಾರೂ ಮತ ಕೇಳಿರಲಿಕ್ಕಿಲ್ಲವೇನೋ? ಮತದಾರರ ಕೈಗೆ ಚಪ್ಪಲಿ ಕೊಟ್ಟು ಯಾರಾದರೂ ಮತ ಕೇಳುತ್ತಾರೆಯೇ? ತೆಲಂಗಾಣದಲ್ಲಿ ಹೀಗೂ ಮತ ಕೇಳಿದ್ದಾನೆ ಒಬ್ಬ ಭೂಪ.

      ತೆಲಂಗಾಣದಲ್ಲಿ ಈಗ ವಿಧಾನಸಭೆ ಚುನಾವಣೆ ಅಬ್ಬರ, ತೆಲಂಗಾಣದ ಕೊರ್ಟೂಲು ಮತ ಕ್ಷೇತ್ರದಲ್ಲಿ ಪಕ್ಷೇತರನಾಗಿ ಕಣಕ್ಕಿಳಿದ ಅಭ್ಯರ್ಥಿ ಅಕುಲ ಹನುಮಂತ್ ಎನ್ನುವರು ಮನೆ-ಮನೆಗೆ ತೆರಳಿ ಚಪ್ಪಲಿಯನ್ನು ಕೈಗೆ ಕೊಟ್ಟು ಮತ ಕೇಳುತ್ತಿದ್ದಾರೆ. ಆದರೆ ಅವರ ಚಿಹ್ನೆ ಚಪ್ಪಲಿ ಅಲ್ಲ!

      ಚಪ್ಪಲಿ ಕೈಗೆ ಕೊಡುತ್ತಿರುವ ಅಭ್ಯರ್ಥಿ ಅಕುಲ್ ಹನುಮಂತ್‌, 'ನನ್ನನ್ನು ಗೆಲ್ಲಿಸಿ, ನಾನು ಸರಿಯಾಗಿ ಕೆಲಸ ಮಾಡಲಿಲ್ಲವೆಂದರೆ ಇದೇ ಚಪ್ಪಲಿಯಿಂದ ನನಗೆ ಹೊಡೆಯಿರಿ' ಎಂದು ಭಿನ್ನವಾಗಿ ಮತಕೇಳುತ್ತಿದ್ದಾರೆ.

      In Telangana candidate asking vote by giving slippers to voters

      ಪ್ರಚಾರಕ್ಕೆ ತೆರಳುವಾಗ ತನ್ನೊಂದಿಗೆ ಬಾಕ್ಸ್‌ಗಳಲ್ಲಿ ಚಪ್ಪಲಿ ತುಂಬಿಕೊಂಡು ತೆರಳುತ್ತಿರುವ ಹನುಮಂತ್‌ ದಾರಿಯಲ್ಲಿ ಸಿಕ್ಕ ಪ್ರತಿಯೊಬ್ಬರಿಗೂ ತನಗೆ ಮತ ಹಾಕಿ ಗೆಲ್ಲಿಸಿ, ಗೆದ್ದಮೇಲೆ ಕೆಲಸ ಮಾಡದಿದ್ದಲ್ಲಿ, ಇದೇ ಚಪ್ಪಲಿಯಲ್ಲಿ ಹೊಡೆದು ಕೆಲಸ ಮಾಡಿಸಿಕೊಳ್ಳಿ' ಎಂದು ಮನವಿ ಮಾಡುತ್ತಿದ್ದಾರೆ.

      ಹನುಮಂತ್‌ ಮನೆ-ಮನೆಗೆ ತೆರಳಿ ಚಪ್ಪಲಿ ನೀಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಆಶ್ಚರ್ಯಕರ ರೀತಿಯಲ್ಲಿ ಬಹುತೇಕ ಧನಾತ್ಮಕ ಪ್ರತಿಕ್ರಿಯೆಗಳು ಬಂದಿವೆ. ಎಲ್ಲ ನಾಯಕರು ಈತನನ್ನು ಫಾಲೋ ಮಾಡಬೇಕು ಎಂದು ಬಹಳಷ್ಟು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

      ತೆಲಂಗಾಣದಲ್ಲಿ ಡಿಸೆಂಬರ್ 7 ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ 11 ಕ್ಕೆ ಮತ ಎಣಿಕೆ ನಡೆಯಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+