ಹೈದರಾಬಾದ್: ವಾಹನಾಪಘಾತದಲ್ಲಿ ಸಚಿವನ ಪುತ್ರ ಸಾವು
ಹೈದರಾಬಾದಿನ ಜೂಬ್ಲಿ ಹಿಲ್ ಬಳಿ ಕುಡಿದು ವಾಹನ ಚಲಾಯಿಸುತ್ತಿದ್ದ ಆಂಧ್ರ ಸಚಿವರೊಬ್ಬರ ಪುತ್ರ ಮತ್ತು ಆತನ ಸ್ನೇಹಿತ ಸ್ಥಳದಲ್ಲೇ ಅಸುನೀಗಿದ ಘಟನೆ ಇಂದು ನಡೆದಿದೆ.
ಹೈದರಾಬಾದ್, ಮೇ 10: ಹೈದರಾಬಾದಿನ ಜೂಬ್ಲಿ ಹಿಲ್ ಬಳಿ ನಡೆದ ಅಪಘಾತದಲ್ಲಿ ಸಚಿವರೊಬ್ಬರ ಪುತ್ರ ಸೇರಿದಂತೆ ಇಬ್ಬರು ಮೃತರಾದ ಘಟನೆ ಮೇ 10ರ ಬೆಳಗ್ಗೆ ನಡೆದಿದೆ.

ಆಂಧ್ರ ಪ್ರದೇಶದ ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವ ನಾರಾಯಣ್ ಅವರ ಪುತ್ರ ನಿಶಿತ್(24) ನಾರಾಯಣ್ ಮತ್ತು ಅವರ ಸ್ನೇಹಿತ ಸಾವಿಗೀಡಾಗಿದ್ದಾರೆ.

ಕುಡಿದು ವಾಹನ ಚಲಾಯಿಸುತ್ತಿದ್ದ ಇವರು, ನಿಯಂತ್ರಣ ತಪ್ಪಿ ಮೆಟ್ರೋ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications