ನಾಯಿ ಮರಿಗಳನ್ನು ಜೀವಂತ ಸುಟ್ಟ ಇವರಿಗೇನು ಮಾಡಬೇಕು?

Written By:
Subscribe to Oneindia Kannada

ಹೈದರಾಬಾದ್, ಜುಲೈ, 20: ಛೇ.. ನಾಚಿಕೆಯಾಗಬೇಕು ಇಂಥವರಿಗೆ.. ಹೈದರಾಬಾದಿನ ಹುಡುಗರು ಮಾಡಿದ ಕೆಲಸಕ್ಕೆ ಮಾನವ ಕುಲವೇ ತಲೆ ತಗ್ಗಿಸಬೇಕಾಗಿದೆ. ನರ ರೂಪದ ರಕ್ಕಸರು ಸದ್ಯ ಪೊಲೀಸರ ಆಥಿತ್ಯದಲ್ಲಿ ಇದ್ದಾರೆ.

ಸುತ್ತಲೂ ಸಿಕ್ಕ ಮರದ ಕಟ್ಟಿಗೆಗಳನ್ನು ಒಟ್ಟು ಸೇರಿಸಿ ಅದಕ್ಕೆ ಬೆಂಕಿ ಹಚ್ಚಿ ನಾಯಿ ಮರಿಗಳನ್ನು ಎಳೆದು ತಂದ ಮೂವರು ಯುವಕರು ಮೂಕ ಪ್ರಾಣಿಗಳನ್ನು ಜೀವಂತವಾಗಿ ಸುಟ್ಟುಹಾಕಿದ್ದಾರೆ.[ಡಿಕೆ ರವಿ ಮುದ್ದಿನ ನಾಯಿ ರೋನಿ ರೋದನಕ್ಕಿಲ್ಲ ಉತ್ತರ]

dog

ಮೂರು ನಾಯಿ ಮರಿಗಳನ್ನು ಜೀವಂತ ಸುಟ್ಟು ಹಾಕಿದ ಇವರನ್ನು ಬೈಯಲು ಯಾವ ಶಬ್ದಗಳು ಇಲ್ಲ. ಇವರಲ್ಲೊಬ್ಬ ಯುವಕ ನಾಯಿ ಮರಿಗಳ ಜೀವಂತ ದಹನವನ್ನು ವಿಡಿಯೋ ಮಾಡಿ ಹರಿಯಬಿಟ್ಟಿದ್ದಾನೆ.[ಜಗತ್ತಿನ ಹಿರಿಯ ಶ್ವಾನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ]

ಮುರ್ಷಿದಾಬಾದ್ ಪೊಲೀಸ್ ಸ್ಟೇಶನ್ ನಲ್ಲಿ ಪ್ರಕರಣ ದಾಖಲಾಗಿದ್ದು ಮೂರು ನಾಯಿ ಮರಿಗಳನ್ನು ಜೀವಂತವಾಗಿ ಸುಟ್ಟ ಮೂವರು ದುರುಳರನ್ನು ವಶಕ್ಕೆ ಪಡೆಯಲಾಗಿದೆ. ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ ಚೆನ್ನೈನಲ್ಲಿ ನಾಯಿಯೊಂದನ್ನು ಮನೆ ಮೇಲಿಂದ ಎಸೆದ ಸುದ್ದಿ ಇನ್ನು ಹಸಿಯಾಗಿರುವಾಗಲೇ ಅಂಥದ್ದೇ ಕೃತ್ಯ ಬೆಳಕಿಗೆ ಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a shocking and shameful incident, three puppies were burnt to death by a group of young boys in Hyderabad. According to media reports, three boys allegedly tied three puppies together and set them on fire. The shameless boy even made the video of the bone-chilling incident and uploaded it on social media sites.
Please Wait while comments are loading...