ಆಪರೇಷನ್ ವೇಳೆ ಕತ್ತರಿಯನ್ನು ಹೊಟ್ಟೆಯಲ್ಲೇ ಬಿಟ್ಟ ವೈದ್ಯರು, ಮೂರು ತಿಂಗಳ ನಂತರ ಹೊರಗೆ

ಹೈದರಾಬಾದ್, ಫೆಬ್ರವರಿ 10: ಈ ವೈದ್ಯರಿಗೆ ಅದೆಂಥ ಮರೆವೋ ಅಥವಾ ನಿರ್ಲಕ್ಷ್ಯವೋ ನೀವೇ ನಿರ್ಧರಿಸಿ. ಹೈದರಾಬಾದ್ ನ ಆಸ್ಪತ್ರೆಯೊಂದರಲ್ಲಿ ಆಕಸ್ಮಿಕವಾಗಿ ಹೀಗಾಗಿದೆಯಂತೆ. ಶಸ್ತ್ರಚಿಕಿತ್ಸೆ ವೇಳೆಯಲ್ಲಿ ರೋಗಿಯ ಹೊಟ್ಟೆಯೊಳಗೆ ಆಪರೇಷನ್ ಗೆ ಬಳಸುವ ಕತ್ತರಿಯನ್ನು ಬಿಟ್ಟಿದ್ದಾರೆ. ಹಾಗೆ ಬಿಟ್ಟ ಕತ್ತರಿ ಮೂರು ತಿಂಗಳ ಕಾಲ ರೋಗಿಯ ಹೊಟ್ಟೆಯಲ್ಲೇ ಉಳಿದುಹೋಗಿದೆ.

ನಗರದ ಪ್ರತಿಷ್ಠಿತ ನಿಜಾಮ್ ಇನ್ ಸ್ಟಿಟ್ಯೂಟ್ ಆಪ್ ಮೆಡಿಕಲ್ ಸೈನ್ಸಸ್ ನಲ್ಲಿ ಮೂರು ತಿಂಗಳ ಹಿಂದೆ ಶಸ್ತ್ರಚಿಕಿತ್ಸೆ ಮಾಡಿಸಿದ್ದರು. ಆಸ್ಪತ್ರೆಯಿಂದ ಮನೆಗೆ ಹಿಂತಿರುಗಿದ ಮೇಲೆ ಆ ಮಹಿಳೆ ಪದೇಪದೇ ಹೊಟ್ಟೆ ನೋವು ಬರುತ್ತಿದೆ ಎಂದು ದೂರಿದ್ದರು. ವಾಪಸ್ ಆಸ್ಪತ್ರೆಗೆ ಪರೀಕ್ಷೆಗಾಗಿ ಬಂದಿದ್ದರು. ಏನು ತಪ್ಪಾಗಿದೆ ಎಂಬುದು ಎಕ್ಸ್-ರೇಯಲ್ಲಿ ಬಯಲಾಯಿತು.

ಆ ತಕ್ಷಣವೇ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಿ, ಹೊಟ್ಟೆಯೊಳಗಿದ್ದ ಕತ್ತರಿಯನ್ನು ಹೊರಗೆ ತೆಗೆಯಲಾಗಿದೆ. "ರೋಗಿಯೇ ನಮ್ಮ ಮೊದಲ ಆದ್ಯತೆ. ಶೀಘ್ರವಾಗಿ ಹೊಟ್ಟೆಯೊಳಗಿದ್ದ ಸಲಕರಣೆ ಹೊರಗೆ ತೆಗೆದಿದ್ದೇವೆ" ಎಂದು ಆಸ್ಪತ್ರೆ ನಿರ್ದೇಶಕರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

Hyderabad’s NIMS Hospital left pair of scissors in woman abdomen during surgery

ಮೊದಲಿಗೆ ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಿದ ವಿಭಾಗದ ವೈದ್ಯರ ವಿರುದ್ಧ ವಿಚಾರಣೆಗೆ ಆದೇಶ ನೀಡಲಾಗಿದೆ. ಮಹಿಳೆಯ ಪತಿ ನೀಡಿದ ದೂರಿನ ಅನ್ವಯ ಇಬ್ಬರು ವೈದ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗ್ರಾಹಕರ ಕೋರ್ಟ್ ಕೂಡ ಈ ವಿಚಾರದ ಬಗ್ಗೆ ಗಮನ ಹರಿಸಲಿದೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+